ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗಮೇಶ ಸಜ್ಜನ ಮೆಚ್ಚಿದ ಅಕ್ಷಯ ಪಂಡಿತರ ‘ಬಯಲಲಿ ತೇಲುತ ನಾನು’

ಸಂಗಮೇಶ ಸಜ್ಜನ

ಅಕ್ಷಯ ಪಂಡಿತರ ‘ಬಯಲಲಿ ತೇಲುತ ನಾನು’ ಕಥಾ ಸಂಕಲನ

೨೦೨೧ರ ‘ಈ ಹೊತ್ತಿಗೆ ‘ಯ ಬಹುಮಾನಿತ ಕೃತಿ

ಸಂಕಥನ ಪ್ರಕಾಶನ ‘ದ ಪ್ರಕಟಣೆ.

ನನಗೆ ಈ ಮಲೆನಾಡು ಮತ್ತು ಕರಾವಳಿಯವರ ಮೇಲೆ ಯಾವಾಗಲೂ ಹೊಟ್ಟೆ ಕಿಚ್ಚು… ಎಷ್ಟೆಲ್ಲಾ ವಸ್ತುಗಳ ಮೇಲೆ ಕತೆ ಬರೆಯುತ್ತಾರಲ್ಲಪ್ಪ ಅಂತ ಬೆರಗಾಗುತ್ತದೆ… 

ಅಂತಹದೇ ವಿಭಿನ್ನ ವಿಷಯಗಳ ಕತೆಗಳನ್ನೊಳಗೊಂಡ ಸಂಕಲನ ಅಕ್ಷಯ ಪಂಡಿತ ರವರ ‘ಬಯಲಲಿ ತೇಲುತ ತಾನು’ ಈ ಟೈಟಲ್ ಹೆಸರಿನ ಕತೆಯೇ ನನ್ನನ್ನು ಇಡೀ ದಿನ ಅಳಿಸಿದ್ದಂತೂ ಸುಳ್ಳಲ್ಲ… ಬಡತನದ ಬದುಕು ನಮ್ಮನ್ನು ಎಲ್ಲೆಲ್ಲ ಕೊಂಡೊಯ್ಯುವುದರ ಜೊತೆಜೊತೆಗೆ ಏನೇನೆಲ್ಲ ಮಾಡಿಸುತ್ತದೆ ಅಲ್ವಾ… ಹಾಗಾಗಿ ಇದು ತುಂಬಾನೇ ಮನಸ್ಸಿನಲ್ಲುಳಿಯುವ ಕತೆ. 

ಮುಂಬರುವ ‘ರೇಖೆಗಳು’ ‘ಎಲ್ಲೂ ಸಲ್ಲದವರು’ ‘ಭಾರತ್ ಸಿಟಿ’ ‘ಫ್ರೀ ವೆ’ ಇವೆಲ್ಲ ನಮ್ಮ ಹಳೆಯ ಮಂದಿಯ ಅನೇಕ ವಿಷಯಗಳನ್ನೊಳಗೊಂಡ ಕತೆಗಳು… ನಮ್ಮ ಈಗಿನ ಯುವಕರ ತವಕ ತಲ್ಲಣಗಳನ್ನು ಕತೆಗಾರರು ತಮ್ಮ ಕತೆಯಲ್ಲಿ ಚನ್ನಾಗಿಯೇ ನಿರೂಪಿಸಿದ್ದಾರೆ… 

ನಮ್ಮ ನಡುವೆ ದಿನ ನಿತ್ಯ ನಡೆಯುವ ಅನೇಕ ಸೂಕ್ಶ್ಮಾತಿ ಸೂಕ್ಷ್ಮ ವಿಚಾರಗಳು ನಮ್ಮ ಕಣ್ಣೆದುರಿಗೆ ಬಂದಾಗ, ಅರೆ ಇದು ನಮ್ಮದೇ ಕತೆ ಅಂತ ಆಶ್ಚರ್ಯಪಡುವುದೋ… ಒಮ್ಮಿಂದೊಮ್ಮೆ ಕಣ್ಣೀರಾಗುವುದೋ ಅಥವಾ ಖುಷಿ ಪಡುವುದೋ…

ಹೀಗೆ ಎಲ್ಲರಿಂದ ಸಾಧ್ಯ ಆಗುವುದಿಲ್ಲ…  ಈ ಪೂರ್ಣ ಸಂಕಲನ ಓದಿ ನನಗೂ ಗೋಡೆಗಳ ದಾಟಿ ನೀಲಿ ನಕ್ಷತ್ರಗಳನ್ನು ನೋಡುತ್ತಾ ರೆಕ್ಕೆಗಳ ಹಾಗೆ ಬಯಲಲಿ ತೇಲಾಡಿಸಿದ ಕತೆಗಾರರಿಗೆ ನನ್ನ ಧನ್ಯವಾದಗಳು. 

‍ಲೇಖಕರು Admin

13 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading