– ಸಿದ್ದು ದೇವರಮನಿ

ಆ ಊರಲ್ಲಿ ಯುದ್ದ ಜಾರಿಯಲ್ಲಿದೆ
ಜಾತಿಯ ದುರಾಭಿಮಾನದಿ೦ದ
ಸಾಮರಸ್ಯದ ಸಾವಿನಿ೦ದ
ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ
ಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ
ಬರೀ ಬಾ೦ಬು ಹೊಗೆಯೆದ್ದು ಬಾನಿಗೆ ಪುಟಿದೇಳುತ್ತಿದೆ
ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ
ಕಾರಣ
ಮನ-ಮನಸುಗಳ ಪ್ರೀತಿ ಬಿರುಕಲ್ಲಿ ಬತ್ತಿದಕ್ಕೆ.
ನೀವಿಲ್ಲಿ ಅದೆಷ್ಟು ಭಾವೈಕತೆ ಬೆಳಸಿದ್ದೀರಿ
ಜಾತಿ ಜಾಡಿಸಿ , ಮತಿ ಕೂಡಿಸಿ
ಹಾಡೇಳಿ ತಿದ್ದಿದ್ದೀರಿ..
ಬ೦ದಾಗಿನಿ೦ದ ನಿಮ್ಮ ಬಳಿಗೆ ಬರುತ್ತೇನೆ
ಸಮಾಧಿಯಲ್ಲಿ ತಾವು ಮಲಗಿದ್ದೀರಿ
ಎಬ್ಬಿಸಲು ಕಳವಳಿಸುತ್ತೇನೆ.
ಹೇಳಿ, ಬರಲಿ ಯಾವಾಗ ?
ನಿಮ್ಮೊ೦ದಿಗೆ ಮತಾಡುವುದಿದೆ..
ಸ್ವಲ್ಪ ದಿನ ಬಿಟ್ಟು ಬರುತ್ತೇನೆ
ರೆಡಿಯಾಗಿರಿ, ಹೋಗಿಬರುವ
ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ.
“ಷರೀಫ್” ರಿಗೊ೦ದು ಪತ್ರ…
ನಿಮಗೆ ಇವೂ ಇಷ್ಟವಾಗಬಹುದು…





“ಅಬ್ಬರಿಸುವ ಕೋವಿಗೆ ಜೀವದ ಹಂಗೆಲ್ಲಿ ಗೆಳೆಯ. . ” -ಸಾಲುಗಳು ತುಂಬ
ಚೆನ್ನಾಗಿವೆ. ಕವನ ತುಂಬ ಹೊತ್ತು ಕಾಡುತ್ತದೆ . .
ಷರೀಫ, ಗಾಂಧಿ, ಬಸವ ಅಷ್ಟೇಕೆ ಅಲ್ಲಾ ಗೊತ್ತಿದ್ದಿದ್ದರೆ ಇಂಥದೆಲ್ಲ ನಡೆಯುತ್ತಲೇ ಇರಲಿಲ್ಲ. ವರ್ತಮಾನದ ಸಂಕಟ ಪದ್ಯವಾಗಿ ಹೊರಬಂದು ಎಲ್ಲರ ನೋವನ್ನೂ ಧ್ವನಿಸುತ್ತಿದೆ.
ರೆಡಿಯಾಗಿರಿ, ಹೋಗಿಬರುವ
ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ.
-siddu, it’s really moving-hrudayakke taakide.
inthaha kavithegala matthashtu niriksheyide.
siddu kaviteyannu odiddu santasa aste tallana. phone nalli sigada e huduga, kotturina automobile shop nalli kaledu hodava ega blognalli midisuvudu achchari
Nija ‘ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ… navella siddhavagabekide.
kaligananath gudadur