ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್!..ದೇವರುಗಳ ವಿಚಾರಣೆ ನಡೆಯುತ್ತಿದೆ

ಯಮುನಾ ಗಾಂವ್ಕರ್ 

ಶ್ಯ….ದೇವರುಗಳ ವಿಚಾರಣೆ ನಡೆಯುತ್ತಿದೆ
ತುಸು ಸುಮ್ಮನಿರಿ..
ಕಟಕಟೆಯ ಎಡ-ಮಧ್ಯ-ಬಲ ಭಾಗದಲ್ಲಿ
ಬ್ಯಾರಿಕೇಡ್ ಇದೆ ..
ಸ್ವಲ್ಪ ಹಿಂದೆ ಸರಿಯಿರಿ

ನ್ಯಾಯಾಧೀಶರಿದ್ದಾರೆ
ಪೀಠದಲ್ಲಿ ದೇವರುಗಳ ನಿರ್ಣಾಯಕರಾಗಿ..
ಪೀಠ ಗುಮಾಸ್ತನ ಎದುರು
ವ್ಯಾಸಪೀಠವಿದೆ
ವಾದಿಗಳ ಪ್ರತಿವಾದಿಸಲು ..

ಆಚೆ ಬದಿಗೆ ಹೋಗಿ, ಇಲ್ಲಿ ನಿಲ್ಲಬೇಡಿ
ಈಗ ಬರುವವರಿದ್ದಾರೆ
ಧರ್ಮ ರಕ್ಷಕರು
ನ್ಯಾಯತೀರ್ಪಿನ ನಂತರ ಕೊನೆಯ ಸಾಲು
ಬರೆಯಲು, ಯಾವುದಕ್ಕೂ
ತಯಾರಿರಿ ಎಲ್ಲರೂ ….

ಪ್ರಮಾಣ ಒಂದೇ ಬಾಕಿ ಇದೆ
“ನಾನು ಹೇಳುವುದೆಲ್ಲಾ ಸತ್ಯ”
ನಂಬಿಸಲು ಬರುವವರಿದ್ದಾರೆ

ಈಗಷ್ಟೇ ಆಯುಧಪೂಜೆ ಮುಗಿಸಿ ಹೊರಟಿದ್ದಾರೆ
ಶ್ಯ… ದೇವರುಗಳ ವಿಚಾರಣೆ ನಡೆಯುತ್ತಿದೆ
ತುಸು ಸುಮ್ಮನಿರಿ..

‍ಲೇಖಕರು avadhi

12 December, 2017

1 Comment

  1. Veeralinganagoudra

    ಅರ್ಥಪೂರ್ಣ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading