ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರುತಿ ಹಿಡಿದ ಕವಿತೆ

ಕವಿ ಮನಸು

ಶ್ರುತಿ ಬಿ.ಆರ್

 

ಕಾಲುದಾರಿಯಲ್ಲಿ ಕಂಡು,

ಕರೆದೊಯ್ಯೆಂದು ರಚ್ಚೆಹಿಡಿದ

ಕವಿತೆಗೆ ಕರಗದ

ನಿಷ್ಕರುಣಿ ಕವಿ!

ಈಗ ಅದೇ

ಇನ್ನಾರದೋ ಅಂಗಳದಿ

ಹೂವಾಗಿ ಅಣಕಿಸುವಾಗ

ಕಿಡಿಕಿಡಿಯಾದ

ಹಳೆಯ ಪದ್ಯವೊಂದು

ಮುಂಬಾಗಿಲಲ್ಲಿ ನಿಂತು

ಕರೆಗಂಟೆಯೊತ್ತಿ

ಪದಗಳ ಕಡ ಕೊಡಬಂದಾಗ

ಕದವಿಕ್ಕಿ ಕುಳಿತ

ದುರಭಿಮಾನಿ ಕವಿ

ಹೊಸ ಸಾಲುಗಳಿಗಾಗಿ

ಹಸಿದು ಕಂಗೆಟ್ಟ

 

ಇನ್ನಾರದೋ ಸೊತ್ತಾದ

ಹಳೆಯ ಪ್ರೇಯಸಿಯಂತೆ,

ಕೈಜಾರಿದ ಕವಿತೆಗಳು,

ಎಂದೋ ಮರೆತ

ಉಪಮೆಗಳು

ಬೆಂಬಿಡದೆ ಕಾಡುವಾಗ!

ಬಿಕ್ಕಿ ಬಿಕ್ಕಿ ಅಳುತಿಹುದು

ಪಾಪ ಬಡಪಾಯಿ

ಕವಿ ಮನಸು!

 

 

ನನ್ನೊಲವ ಸಮಾಧಿಯಿಂದ..

 

ಯಾರಲ್ಲಿ ಯಾರವರು!

ಮಣ್ಣು ಮುಚ್ಚಿದವರು,

ಒಂದೊಂದೇ ಇಟ್ಟಿಗೆ ಇಟ್ಟು

ಸಮಾಧಿ ಕಟ್ಟಿದವರು,

ನಗೆಯನ್ನೇ ಕದ್ದವರು,

ನಿಟ್ಟುಸಿರೊಂದೇ ನಿನಗೆಂದವರು,

ಅಗೋ ಆ ರಕ್ಕಸ ಕೈಗಳೆ,

ಜೀವಂತ ಒಲವ ಮುರಿದು

ಮಣ್ಣಲ್ಲಿ ಮಣ್ಣಾಗಿಸಿದವು,

ನರಳುತ್ತಿದ್ದ ನನ್ನೊಲವ

ಎತ್ತಿ ಮುದ್ದಿಸದಂತೆ

ಬೇಲಿ ಹಾಕಿದವು,

 

ನಿಮಿಷ, ತಾಸು, ವರುಷ

ಒಂಟಿತನದ ಬೇಗೆ

ತಾಳಿಕೊಂಡದ್ದೇ ಸೋಜಿಗ,

ಅಗೋ ಅಲ್ಲಿ ನನ್ನೊಲವ

ಸಮಾಧಿಯ ಮೇಲೆ

ಅಚ್ಚ ಹಸುರಾದ ಗಿಡ!

 

ಕೇಳಿ, ಕೇಳಿ, ಕೇಳಿರಿಲ್ಲಿ

ಮಣ್ಣು ಮುಚ್ಚಿದವರೇ,

ಸಮಾಧಿ ಕಟ್ಟಿದವರೇ,

ನನ್ನೊಲವು ನಶಿಸಿಲ್ಲ

ಮಣ್ಣು, ಕಲ್ಲುಗಳ ಸೀಳಿ

ಹಸುರಾಗಿ ಬಂದಿದೆ,

 

ನನ್ನೆದೆಯ ನೋವು,ವಿಷಾದದ ವಿಷಗಳ,

ಉರಿಯ ನುಂಗಲು,ವಿಷಕಂಠನಾಗಿ….

‍ಲೇಖಕರು admin

28 January, 2017

8 Comments

  1. mmshaikkattanoor@gmail.com

    Very nice poem all d best

  2. Anonymous

    Beautiful lines

  3. Bharath

    Awesome Shruthi.. 🙂 superrr likes.. 🙂

    • Shruthi B R

      Thank you

  4. Shruthi B R

    Thank you all

  5. Anonymous

    ಅರ್ಥಪೂರ್ಣ ಸಾಲುಗಳು ಶೃತಿ

  6. Anonymous

    Nice lines Shruthi

  7. Che than Gowda

    A meaningful words..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading