ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನಕ್ಕೆ ಆಹ್ವಾನ…

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ, ಸಾಹಿತ್ಯ, ಕಲೆಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕೃತಿಕ ಸಂಸ್ಥೆ. ಲೇಖಕಿಯರ ಪ್ರಕಟಿತ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಲೇಖಕಿ ಒಬ್ಬರಿಗೆ ಪ್ರಶಸ್ತಿಯೊಂದನ್ನು ನೀಡುವ ಯೋಜನೆಯನ್ನು ಪ್ರತಿಷ್ಠಾನ ಹಮ್ಮಿಕೊಂಡಿದೆ.

ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಶಾಲು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿರುತ್ತದೆ. ೨೦೨೧ನೇ ಸಾಲಿನ ಪ್ರಶಸ್ತಿಗಾಗಿ, ೨೦೨೧ರ ಜನವರಿಯಿಂದ ಆ ವರ್ಷದ ಡಿಸೆಂಬರ್ ನಡುವಣ ಅವಧಿಯಲ್ಲಿ ಪ್ರಕಟವಾದ ಕಾದಂಬರಿಯನ್ನು ಲೇಖಕಿಯರು ಕಳುಹಿಸಬಹುದಾಗಿದೆ. ಕಾದಂಬರಿಯ ಮೂರು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸೆಪ್ಟಂಬರ್ ೨೦ರೊಳಗೆ ಕಳುಹಿಸತಕ್ಕದ್ದು.

ಜಿ.ಎನ್.ರಂಗನಾಥ ರಾವ್, ಕಾರ್ಯಾಧ್ಯಕ್ಷರು, ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ, ನೊ.೨೬೬, `ಸ್ನೇಹ’; ೩ನೇ ಮೈನ್, ೮ನೇ ಬ್ಲಾಕ್,ಕೋರಮಂಗಲ, ಬೆಂಗಳೂರು-೫೬೦೦೯೫. ಫೋನ್: ೨೫೭೦೧೧೬೫/೬೩೬೨೪೭೩೧೫೧.

ತೀರ್ಪುಗಾರರ ಸಮಿತಿಯ ನಿರ್ಣಯವೇ ಆಖೈರು.ಈ ಸಂಬ೦ಧ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.

‍ಲೇಖಕರು Admin

2 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading