ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿಧಿ ಎಚ್ ವಿ ಹೊಸ ಕವಿತೆ- ಪೂತನಿ ಸಂತಾನ

ಶ್ರೀನಿಧಿ ಎಚ್ ವಿ

—–

ಬಂದಳಿಕೆಗಳಿಗೆಲ್ಲ ಬಂದಿದೆ ಜೀವ

ಹೊಸದೇನಲ್ಲ, ಇದೆ ಅವರ ಸ್ವಭಾವ

ಅರಿಯದ ಕಂದಮ್ಮಗಳಿಗೆ ವಿಷಪ್ರಾಶನ

ಸಂಸ್ಕೃತಿ ಸಂಹಿತೆ ಹೇಳುತಿವೆ ಪೂತನಿ ಸಂತಾನ

ಅಶೋಕ ಲಾಂಛನದ ಸಿಂಹಗಳು

ತಾವೆಂಬಾ ಭ್ರಮೆಯಲ್ಲಿ,

ಹೇಳುತ್ತಿವೆ ಸುಳ್ಳನ್ನು

ಜೋರು ದನಿಯಲ್ಲಿ.

ತಮ್ಮ ಮುತ್ತಾತನ ಹೆಸರು ಗೊತ್ತಿಲ್ಲದವರೆಲ್ಲ

ಈಗ  ಇತಿಹಾಸ ಪಂಡಿತರು,

ಆಗಿಹೋದ ಹತ್ಯಾಕಾಂಡಗಳಿಗಿವರೆ ಸಾಕ್ಷಿ

ನೀಗಿಹೋಗಿದ್ದ  ಪಿಶಾಚಿಗಳಿಗೆ ಕಂಡಿದೆ ಗವಾಕ್ಷಿ.

ಧರ್ಮ ರಕ್ಷಕರೆಲ್ಲಾ ಸೇರಿ

ರಚಿಸುತ್ತಿದ್ದಾರೆ ಹೊಸ ಶಬ್ದಕೋಶ, 

ಬರೆಯಲಿದ್ದಾರೆ ಸೈಬರ್ ಕುಮಾರರು 

ದೇಶದ ಹೊಸ ಇತಿಹಾಸ.

ಬೀಳುವ ಮರಗಳು ಇವರು

ಬೆಳಕು ತೂರುವ ಕಿಟಕಿ

ಬಾಗಿಳುಗಳಾಗುವ ಬದಲು,

ಆಗುತ್ತಿದ್ದಾರೆ ಕುಡುಗೋಲು-ಕಟ್ಟಿಗೆ

ಆಗ ಕೊಡಲಾಗಾದವರು ಇಟ್ಟಿಗೆ.

ನಂಜೇರಿದವರ ಪಂಜಿನ ಕವಾಯತು

ಯಾರ ಮನೆ ಸುಟ್ಟೀತೋ ಬೆಂಕಿ

ಎಚ್ಚರ ಎಚ್ಚರ ಎಚ್ಚರ

‍ಲೇಖಕರು avadhi

7 November, 2023

1 Comment

  1. Vidhi

    ಅತ್ಯಾದ್ಬುತ♥️

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading