ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಧರ ಪತ್ತಾರ ಕವಿತೆ- ಸತ್ಯದ ಬಿಂಬ…

ಶ್ರೀಧರ ಪತ್ತಾರ

ನಿಂತ ನೆಲವು ನನ್ನದಲ್ಲ
ನಿಜದ ನೆಲೆಯಲಿ
ಎದೆಯಲುಳಿದ ಕವಿತೆಗೆ
ಉಲಿಯದ ಮಾತಿಗೆ
ಸ್ವರದ ಹಂಗಿಲ್ಲ..
ಮಾರ್ದನಿಸಿದೆ ಧ್ವನಿ
ಅಂತರಂಗದ ಅರಿಕೆಗೆ
ಸತ್ಯದ ನಿಲುವಿದೆ
ನನ್ನಿರುವ ಸಾಕ್ಷಿಗೆ…

ಆಸೆಯ ಕಂಗಳಿಗೆ
ಸೊಬಗಿನ ಹಸಿರ ಹಂಗು
ಹರಿವ ಭಾವಲಹರಿಗೆ
ಮನದ ಆಸರೆಯಿದೆ…
ಉದಿಸುವ ಕಲ್ಪನೆಗಳಿಗೆ
ಅನಂತ ಎಲ್ಲೆ…
ಬಯಲು ಆಲಯದೊಳು
ಬದುಕು ಲೀನವಾಗಿದೆ…
ಮೌನಧ್ಯಾನದ ಹಿತವಿದೆ
ಕಣ್ಣ ಕುಸಿಕೆಯಲಿ…
ಕತ್ತಲೆಗೆ ಮರೆವಿದೆ
ಬೆಳಕ ಬಿಂಬದಲಿ

‍ಲೇಖಕರು avadhi

22 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading