ಶ್ರೀಧರ ಜಿ ಯರವರಹಳ್ಳಿ
ಪುಟ್ಟ ಪುಟ್ಟ ನಡೆಯ
ಮನಶುದ್ಧಿ ಮಾಡೊ ಗೆಳೆಯ
ಛಲವಾದಿ ನಮ್ಮ ಇನಿಯ
ಅವರೆ ನಮ್ಮ ಗಾಂಧಿ ತಾತ ಗೆಳೆಯ||
ಕಟ್ಟಕಡೆಯ ನೋಟ
ಮನವೆಲ್ಲ ಕೇಳೊ ಪಾಠ
ತದೇಕಚಿತ್ತ ತಂದ
ಈ ಗಾಂಧಿ ತಾತ ನಮ್ಮ ಗೆಳೆಯ
ಭೇಟಿಯಾದ ಜಾಗ
ಮನಸಲ್ಲೇ ಉಳಿಯುವಾಗ
ಪರೀಕ್ಷೆಯಲ್ಲಿ ನಮ್ಮ ಗೆಳೆಯ
ಮಹಾತ್ಮನಾದ ಗಾಂಧಿ ತಾತ ಗೆಳೆಯ
ಉಳಿಸಿಲ್ಲಿ ಈಗ ಮಾನವೀಯತೆಯ
ಮರಿಬೇಕು ದ್ವೇಷ ಸಂಕಟತೆಯ
ಅನುಸಾರರಾಗಬೇಕು ಗಾಂಧಿ ತಾತ ನಡೆಯ
ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಗೆಳೆಯ
ಪುಟ್ಟ ಪುಟ್ಟ ನಡೆಯ
ಗಮನವಿಟ್ಟು ಬಂದ ಗೆಳೆಯ
ನಾವೆಲ್ಲ ಒಂದೇ ಎನ್ನುವ ಬಾರೊ ಗೆಳೆಯ
ಅಹಿಂಸಾ ಗಾಂಧಿ ನಮ್ಮ ಗೆಳೆಯ
ಮತ್ತೆ ಮತ್ತೆ ಹುಟ್ಟಲಿ ಈ ನಮ್ಮ ಗೆಳೆಯ
0 ಪ್ರತಿಕ್ರಿಯೆಗಳು