ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀದೇವಿ ಕೆರೆಮನೆ ಕವಿತೆ – ಬೀದಿ ಹೆಣವಾಗಬಹುದು…

ಶ್ರೀದೇವಿ ಕೆರೆಮನೆ

ಹೆರಿಗೆಗೆ ಆಧಾರಸಂಖ್ಯೆ ಇಲ್ಲದಿದ್ದರೆ ಬೀದಿ ಹೆಣವಾಗಬಹುದು
ಹುಟ್ಟುವಾಗ ಗುರುತುಪತ್ರ ಇರದಿದ್ದರೆ ಬೀದಿ ಹೆಣವಾಗಬಹುದು

ಎಲ್ಲೆಲ್ಲಿ ಹುಡುಕಬೇಕಾಗುತ್ತದೆ ಬದುಕಿರುವೆನೆನ್ನಲು ಸಾಕ್ಷಿಯನು
ಪುರಾವೆಗೆ ಜೀವಿತಪತ್ರ ತೋರದಿದ್ದರೆ ಬೀದಿ ಹೆಣವಾಗಬಹುದು

ದೇಹದ ವಾಂಛೆಗೆ ಪ್ರೇಮವೆನ್ನುವ ಹೊಸ ಮುಖವಾಡ ತೊಡಿಸಲಾಗಿದೆ
ಬಣ್ಣದ ಮಾತನ್ನು ಕಣ್ಮುಚ್ಚಿ ನಂಬಿದರೆ ಬೀದಿ ಹೆಣವಾಗಬಹುದು

ಸುರೆಗೂ ಕಲಬೆರಿಕೆಯ ಭಾಗ್ಯ ದೊರಕಿದ ಅದ್ಭುತ ಕಾಲವಿದು
ನಶೆ ಏರಿಲ್ಲವೆಂದು ಮಿತಿಮೀರಿ ಕುಡಿದರೆ ಬೀದಿ ಹೆಣವಾಗಬಹುದು

ಗೆಳತನಕೂ ವರೆ ಹಚ್ಚಿಯೇ ಒಪ್ಪಿಕೊಳ್ಳುವುದು ತಪ್ಪೇನೂ ಅಲ್ಲ
ಪರಿಶೀಲಿಸದೆ ನಂಬಿ ಸ್ನೇಹ ಬೆಳೆಸಿದರೆ ಬೀದಿ ಹೆಣವಾಗಬಹುದು

ಗುಡಿಸಲಲ್ಲೂ ನೆಮ್ಮದಿಯಿಂದ ಬಾಳಬಹುದು ಪ್ರೀತಿಯೊಂದಿದ್ದರೆ
ಒಲವನ್ನು ಮಾರಿ ಬಿಡಲು ತಕ್ಕಡಿ ಹಿಡಿದರೆ ಬೀದಿ ಹೆಣವಾಗಬಹುದು

ಯಾವಾಗ ಯಾರು ಬದಲಾಗುತ್ತಾರೆಂದು ಊಹಿಸಲು ಸಾಧ್ಯವಿಲ್ಲ
ಹೊತ್ತಲ್ಲದ ಹೊತ್ತಲ್ಲಿ ಬಿರುಮಳೆ ಸುರಿದರೆ ಬೀದಿ ಹೆಣವಾಗಬಹುದು

ಸಿರಿ, ಮಾತಿಗೂ ಕೃತಿಗೂ ಒಂದಿನಿತೂ ಹೊಂದಾಣಿಕೆ ಕಾಣುವುದಿಲ್ಲ
ನೆತ್ತಿ ಮೇಲೆ ಆಣೆಯಿಟ್ಟು ತಪ್ಪಿ ನಡೆದರೆ ಬೀದಿ ಹೆಣವಾಗಬಹುದು

‍ಲೇಖಕರು Admin

9 November, 2022

2 Comments

  1. amardeep

    chennagide madam…. abhinandanegalu….

  2. Vijaya Kulkarni

    ಅಗ್ಗದೀ ಛಂದ ಅದರೀ ಗಜಲ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading