ಶ್ರೀಕರ ಭಟ್ ಅವರ ಕಥೆ: ಅನಾಮಧೇಯ ಅಪ್ಪಯ್ಯಮ್ಮ

ಶ್ರೀಕರ ಭಟ್

ಬಾಲು ದಿನದ ಕೆಲಸ ಮುಗಿಸಿ ಮನೆಗೆ ಬಂದ, ಮನೆ ಗೇಟ್ ಎನ್ಟ್ರಿ ಆಗ್ಬೇಕಿದ್ರೆನೇ ಫೋನಿನಲ್ಲಿ ಮಾತಾಡ್ತ ಬರ್ತಿದ್ದ, ಕೆಲಸ ಬಿಟ್ಟು ಬಂದ್ರೂ ಕೆಲಸ ಅವ್ನ ಬಿಟ್ಟಾಗ್ ಕಾಣ್ತಿಲ್ಲ, ಕಾರ್ಯತಃ ಮೆಕ್ಯಾನಿಕಲ್ ಇನ್ಜಿನೀಯರ್, ಓದು ಮುಗ್ಸಿ ಕೆಲಸಕ್ಕೆ ಸೇರಿ ಹೆಚ್ಚು ಕಮ್ಮಿ ಎರಡ್ ವರ್ಷ ಆಗಿರ್ಬೇಕು ಆದ್ರೆ ವರ್ಕ್ ಸ್ಯಾಟಿಸ್ಫ್ಯಾಕ್ಶನ್ ಇಲ್ಲ ಜರ್ಮನಿಗೆ ಹೋಗಿ ಮಾಸ್ಟರ್ಸ್ ಮಾಡ್ಬೇಕು ಅನ್ನೋ ಆಲೋಚನೆ ಅವಾಗ್ ಅವಾಗ್ ಬರ್ತಿತ್ತು ಆದ್ರೆ ಒಮ್ಮೆ ಕೂತು ಅದರ ಬಗ್ಗೆ ಸರಿಯಾಗಿ ಅಲೋಚಿಸುವ ಸಮಯ ಸಿಕ್ಕಿರ್ಲಿಲ್ಲ, ಹೀಗೆ ಫೋನಿನಲ್ಲಿ ಮಾತಾಡ್ತ ಶೂ ಕಳಚಿ ಮನೆ ಬಾಗಿಲ್ ತಟ್ಟಿದ, ಯಾರೂ ಬಾಗಿಲು ತೆಗಿಲಿಲ್ಲ, ಫೋನಿನಲ್ಲಿ ಮಗ್ನನಾಗಿದ್ದವನಿಗೆ ಯಾರೂ ಬಾಗಿಲು ತೆರಿಯದಿದದ್ದು ಗಮನಕ್ಕೆ ಬಂದಾಗಿಲ್ಲ ಮತ್ತೆ ಗೇಟಿನ ಬಳಿ ಬಂದು ಮಾತು ಮುಂದುವರಿಸಿದ, ಮಾತು ಮುಗಿದ ಮೇಲೆ ಮತ್ತೆ ಮನೆ ಕಡೆ ತಿರುಗಿ ಬಾಗಿಲು ತಟ್ಟಿದ, ಇಲ್ಲ, ಈಗ್ಲೂ ಬಾಗಿಲು ತೆರಿಯದಿದದ್ದು ಕಂಡು ನಿತ್ತಲ್ಲಿಂದಲೇ ‘ಅಮ್ಮಾ, ಬಾಗಿಲ್ ತೆಗಿ, ಎಲ್ಲಿದ್ಯಾ?’ ಅಂದ, ಮನೆ ಒಳಗಿನಿಂದ ಯಾವ ಸದ್ದೂ ಇಲ್ಲ, ಫೊನ್ ಮಾಡಿದ, ಒಳಗಿನಿಂದ ಮೊಬೈಲ್ ರಿಂಗ್ ಆಗೋದು ಕೇಳ್ತಿದೆ ಆದ್ರೆ ಯಾಕ್ ಎತ್ತುತಿಲ್ಲ? ಬಾಗಿಲಿನ ಪಕ್ಕದ ಕಿಟಕಿ ತೆರೆದು, ಕಿಟಕಿ ದಂಡೆಯ ಮೇಲೆ ಇಟ್ಟಿದ್ದ ಕೋಲಿನ ಸಹಾಯದಿಂದ ಬಾಗಿಲಿಗೆ ಒಳಗಿನಿಂದ ಹಾಕಿದ ಕೀಲು ತೆಗೆದ.

ಆ ಕಿಟಕಿಯ ಕೋಲಿನ ಉಪಯೋಗ ಬಾರಿ ಇದೆ, ಅದು ಆ ಕಿಟಕಿಯ ಒಳ ದಂಡೆಯ ಮೇಲಿರಲೂ ಒಂದು ಕಾರಣ ಇದೆ, ಕಿಟಕಿ ಪಕ್ಕದಲ್ಲಿ ಒಂದು ಕುರ್ಚಿ, ಅಮ್ಮ ಬೆಳಗಿನ ಮನೆ ಕೆಲಸವೆಲ್ಲಾ ಮುಗಿಸಿ ಆ ಕುರ್ಚಿಯಲ್ಲಿ ಕೂತು ಅವತ್ತಿನ ನ್ಯೂಸ್ ಪೇಪರ್ ಓದುತ್ತಾಳೆ, ಕೈ ಬೆನ್ನಿಗೆ ಹೋಗಲ್ಲ, ಬೆನ್ನು ತುರ್ಸುತ್ತಂತ ಆ ಒಂದು ಕೋಲ್ ಅಲೆಲ್ಲಿಂದಲೋ ಹುಡುಕಿ ತಂದು ಅಲ್ಲಿಟ್ಟಿದ್ದಳು, ಒಮ್ಮೆ ಕೆಲಸದಿಂದ ಬೇಗ ಮನೆಗೆ ಬಂದ ಬಾಲು ಬಾಗಿಲ್ ತಟ್ಟಿದ್ದಾಗ ಅಮ್ಮ ಪಕ್ಕದ್ ಮನೆಗೆ ಹೋಗಿದ್ಲು, ಬೇರೆ ದಾರಿ ಕಾಣದೆ ಕಿಟಕಿ ತೆರೆದು ಆ ಕೋಲಿನ ಸಹಾಯದಿಂದ ಬಾಗಿಲಿನ ಚಿಲಕ ತೆಗೆದು ಒಳ ಬಂದಿದ್ದ ಬಾಲು, ಎಲ್ಲಾದ್ರು ಹೊರ ಹೋಗ್ಬೇಕಂದ್ರೆ ಮನೆಯ ಎದುರಿನ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ ಹಿತ್ತಲ್ಲಿನ ಬಾಗಿಲಿಗೆ ಹೊರ ಬೀಗ ಹಾಕಿ ಹೋಗೊ ರೂಡಿ, ಮನೆಗೆ ಬಂದ ಅಮ್ಮನಿಗೆ ಆಶ್ಚರ್ಯ ‘ಹೆಂಗೋ ಬಂದೆ ಮಾರಾಯ’ ಕೇಳಿದ್ಲು, ಬಾಲು ತನ್ನ ಹೊಸ ರೀತಿಯನ್ನು ತೋರಿಸಿ ಕೊಟ್ಟ ಅವ್ಳಿಗೆ, ‘ಅಬ್ಬಾ, ನಿನ್ನ್ ಇಂಜಿನಿಯರ್ ಮಂಡೆನೇ, ಇನ್ನು ಆ ಕೋಲಿಗ್ ಒಂದ್ ಹೊಸ ಜಾಗ ಹುಡುಕ್ಬೇಕು, ನೀನ್ ಹೀಗೆ ಚಿಲಕ ತೆಗಿಯೋದ್ ಹೊರಗಿನವರ ಕಣ್ಣಿಗ್ ಬಿದ್ರೆ ಅಷ್ಟೆ’ ಆದ್ರೆ ಆ ಕೋಲು ತನ್ನ ಅದೇ ಜಾಗ ಮುಂದುವರಿಸಿತು, ಇಂದು ಮತ್ತೆ ಬಾಲು ಮನೆ ಒಳ ಬರ್ಲಿಕ್ಕೆ ಸಹಾಯವಾಯ್ತು, ಒಳಗ್ ಬಂದ ಬಾಲು ಬಾಗಿಲು ಮುಚ್ಚಿ ಚೀಲ ಪಕಕ್ಕಿಟ್ಟು ಮುಖ ತೊಳಿತಾ ‘ಅಮ್ಮ, ಅಮ್ಮ’ ಅಂತ ಎರಡ್ ಸಲ ಕರ್ದ, ದಿನಾ ಮನೆಗೆ ಬರ್ಬೇಕಾದ್ರೆ ಅಡಿಗೆ ಮನೇಯಲ್ಲಿ ಬಿಸೀ ಇರ್ತಿದ್ಲು ಆದ್ರೆ ಇವತ್ತು ಅಲ್ಲೂ ಇಲ್ಲ, ಮುಚ್ಚಿಟ್ಟ ಎರಡು ಪಾತ್ರೆ ತೆರೆದು ನೋಡಿದ, ಮಧ್ಯಾನ ಉಳಿದ ಸ್ವಲ್ಪ ಊಟಾನೆ ಅಲ್ಲಿತ್ತು, ರಾತ್ರಿಗ್ ಏನೂ ಮಾಡಿಲ್ಲ ಮತ್ತೆ ‘ಅಮ್ಮಾ…’ ಅಂತ ಕರೀತ ಅವಳ ರೂಮಿಗೆ ಬಂದ, ಅಯ್ಯೋ ರಾಮ, ಅಮ್ಮ ನೆಲದಲ್ಲಿ ಬಿದ್ದಿದ್ದಾಳೆ, ಪ್ರಜ್ಞೆ ತಪ್ಪಿದಾಗಿದೆ, ರಪ್ಪ ಬಂದು ಅವಳನ್ನು ಎಬ್ಬಿಸಲು ನೋಡಿದ, ಕೂಡಲೇ ಆಂಬುಲೆನ್ಸ್ ಕರಿಸಿದ, ಆಸ್ಪತ್ರೆಯಲ್ಲಿ ಡಾಕ್ಟರ್ ಕಂಡವರೆ ಜೀವ ಲಕ್ಷಣ ಇಲ್ಲ ಅನ್ನೋದು ತಿಳಿಸಿದರು, ಮನೆಯಲ್ಲೆ ಬಾಲುವಿಗೆ ಅದರ ಗುರುತು ಸಿಕ್ಕಿದ್ದರೂ ಅದನ್ನು ಒಪ್ಪಿಕೊಳ್ಳುವ ಧೈರ್ಯ ಇರ್ಲಿಲ್ಲ, ಅಮ್ಮನಿಗೆ ಹಾರ್ಟ್ ಕಾಂಪ್ಲಿಕೇಶನ್ ಇದ್ದದ್ದು ಹೌದು ಆದ್ರೆ ಅದು ಆರ್ ತಿಂಗ್ಳ ಹಿಂದೆ, ಅದೂ ಮೈಲ್ಡ್ ಹೇಳಿದ್ರು ಡಾಕ್ಟ್ರು, ಮಾತ್ರೆನೂ ದಿನಾ ತಗೊಳ್ತಿದ್ಲು, ಇದ್ದಕಿದ್ದಾಗೆ ಏನಾಯ್ತು?

ಅಮ್ಮನ ಅಂತಿಮ ಕಾರ್ಯ ಎಲ್ಲಾ ಮುಗಿತು, ಇವಾಗ ಮನೆಯಲ್ಲಿ ಅಮ್ಮ ಇಲ್ದೆ ಬಣ ಬಣ ಅನ್ಸೋದು, ಕೆಲ್ಸದಿಂದ ಬಂದ ಕೂಡ್ಲೆ ಅಲ್ಲಿದ್ ಇಲ್ಲಿದ್ ಅಂತ ಊರಿದೆಲ್ಲಾ ವಿಶ್ಯ ಹೇಳೋಳು, ಹಾಲಿನಲ್ಲಿ ಕೂತು ಯೋಚಿಸ್ತಿದ್ದ ಬಾಲು ಒಮ್ಮೆ ಆ ಕಿಟಕಿಯ ಪಕ್ಕದ ಕುರ್ಚಿಯ ಕಡೆ ನೋಡಿದ, ಖಾಲಿ ನಿತ್ತಿದೆ ಆ ಕುರ್ಚಿ, ಆ ಕುರ್ಚಿಯ ಜೊತೆ ಆ ಕಿಟಕಿ ದಂಡೆಯ ಕೋಲು, ಅವಳ ದಿಂಬು, ಹಾಸಿಗೆ, ಅಡುಗೆ ಮನೆ ಎಲ್ಲಾ ಖಾಲಿ ಖಾಲಿ ಅನಿಸ್ತಿದೆ ಇವತ್ತು, ಹೀಗೆ ಮನೆಯನೆಲ್ಲಾ ನೋಡುತ್ತಿದ್ದ ಬಾಲುವಿನ ದೃಷ್ಟಿ ಗೋಡೆಯ ಮೇಲೆ ಹೋಯ್ತು, ಗಣಪತಿ, ಲಕ್ಷ್ಮಿ, ಸರಸ್ವತಿಯ ಪೊಟೋ ಬಿಟ್ರೆ ಬೇರಾವ ಫೊಟೋನೂ ಇಲ್ಲ, ಅಪ್ಪ ತೀರಿ ಆರ್ ವರ್ಷ ಆಗಿದೆ ಅವ್ರದ್ದೂ ಒಂದು ಫೊಟೋ ಇಲ್ಲ, ಇಷ್ಟು ದಿನ ಅದರ ಕಡೆ ಗಮನಾನೂ ಕೊಟ್ಟಿಲ್ಲ, ಏನಕ್ಕೆ ಕೊಡ್ಬೇಕಾಗಿತ್ತು? ಅಪ್ಪ ತೀರಿ ಹೋದ ಮೇಲೆ ಅಮ್ಮ ಅಪ್ಪನ ಬಗ್ಗೆ ಮಾತ್ತಾಡದೆ ಇದ್ದ ಒಂದು ದಿನಾನೂ ಇಲ್ಲ, ದಿನಾಲೂ ಒಂದಲ್ಲ ಒಂದು ನೆನಪನ್ನ ಖುಷ್ ಖುಷಿಯಾಗಿ ಹೇಳ್ವವ್ಳು, ಒಂದ್ ದಿನಾನೂ ಅಪ್ಪ ಇಲ್ಲ ಅನ್ನೋ ಆಲೋಚನೆ ಬರ್ದಿದ್ದಾಗಿ ನೋಡ್ಕೊಂಡಿದ್ಲು, ಅಮ್ಮ ಇದ್ದಷ್ಟ್ ದಿನ ಅಪ್ಪಾನೂ ಜೊತೇಲೆ ಮನೆಲಿ ಇದ್ದಾಗಿತ್ತು, ಆದ್ರೆ ಇವತ್ತು ಅವ್ರಿಬ್ರೂ ಇಲ್ಲ, ಅವರಿಬ್ಬರ ಒಂದ್ ಫೊಟೋ ಇದ್ರೆ ಮನೆ ಖಾಲಿ ಖಾಲಿಯಾಗಿರೋದು ತಪ್ಪುತ್ತೆ ಅನ್ನೋ ಆಲೋಚನೆ ಬಂತು ಬಾಲುಗೆ.

ಮರು ದಿನ ಕೆಲಸ ಮುಗಿಸಿ ಸೀದ ಮಾರ್ಕೇಟಿಗೆ ಹೋದ ಬಾಲು ಅಲ್ಲಿ ಫೋಟೋ ಫ್ರೇಮ್ ಹಾಕೋ ಅಂಗಡಿಗೆ ಬಂದು ಅಪ್ಪ ಅಮ್ಮನ ಫೋಟೋ ಕೊಟ್ಟು ಫ್ರೇಮ್ ಹಾಕಿಡಲು ಆರ್ಡರ್ ಕೊಟ್ಟ, ‘ನಿಮ್ಮ ಫೋನ್ ನಂಬ್ರ ಕೊಟ್ಟೋಗಿ, ಇನ್ನೆರಡ್ ದಿನ ಬಿಟ್ಟು ಬನ್ನಿ’ ಅಂದ್ರು, ಸರಿ ಅಂದು ಮಾರ್ಕೇಟಿನಿಂದ ಹೊರ ಬಂದವನೆ ಮನೆ ಕಡೆ ಹೋಗೋ ಬಸ್ಸ್ ಹತ್ತಿದ, ಬಾಲು ಒಂದ್ ರೀತಿ ಖಿನ್ನನ್ನಾಗಿದ್ದ, ಬಸ್ಸಿನಲ್ಲಿ ಕೂತವನಿಗೆ ನಾನಾ ರೀತಿಯ ಆಲೋಚನೆಗಳು ಹಾದುಹೋಗುತ್ತಿದ್ದವು, ಮಾಡೋ ಕೆಲಸದಲ್ಲಿ ಆಸಕ್ತಿ ಇರ್ಲಿಲ್ಲ, ಮನೆಗೆ ವಾಪಾಸ್ ಹೋಗ್ಲಿಕ್ಕೆ ಇವಾಗ ಒಂದು ಕಾರಣಾನೂ ಇಲ್ಲ, ಅದೊಂದ್ ಟೈಮಿನಲ್ಲಿ ಜರ್ಮನಿಗೆ ಹೋಗಿ ಮಾಸ್ಟರ್ಸ್ ಮಾಡ್ಬೇಕು ಅನ್ನೋ ಆಲೋಚನೆ ಇತ್ತು ಯಾಕೆ ಮಾಡ್ಬಾರ್ದು ಅಂತ ಯೋಚಿಸಿದ, ಇಲ್ಲೆ ಇದ್ರೆ ಅಪ್ಪ ಅಮ್ಮನ ಯೋಚನೆ ಮತ್ತಷ್ಟು ಕಾಡುತ್ತೆ, ಮನೆ ಬಾಡಿಗೆಗೆ ಕೊಟ್ಟು ಜರ್ಮನಿಗೆ ಹೋಗುವ ಪ್ಲಾನ್ ಮಾಡಿದ, ಕೂಡಲೆ ಮೊಬೈಲ್ ಹೊರ ತೆಗೆದು ಜರ್ಮನ್ ಸ್ಟಡಿ ಕೌನ್ಸಿಲ್ ಗಳ ಪಟ್ಟಿ ಹೊರ ತೆಗೆದ, ಎಲ್ಲಾದರ ರಿವ್ಯೂ ನೋಡಿದ, ಅದರ ವೆಬ್ ಸೈಟಿಗೆಲ್ಲಾ ಹೋಗಿ ಚೆಕ್ ಮಾಡಿದ, ಒಂದಷ್ಟು ಮಾಹಿತಿ ಒಟ್ಟು ಮಾಡಿ ಕೊನೆಗೆ ಒಂದನ್ನ ಆಯ್ಕೆ ಮಾಡಿದ, ಆದಷ್ಟು ಬೇಗ ಹೋಗಿ ಅಲ್ಲಿ ವಿಚಾರಿಸುದಾಗಿ ನಿರ್ಧರಿಸಿದ, ತನ್ನ ಸ್ಟಾಪ್ ಬಂದವನೇ ಸೀಟಿನಿಂದ ಎದ್ದ, ಬಸ್ಸ್ ಬಾರೀ ರಶ್ಶಾಗಿತ್ತು ಹಾಗೋ ಹೀಗೋ ಒತ್ತಿ ಗುದ್ದಾಡಿ ಬಸ್ಸಿನ್ನಿಂದ ಇಳಿದ, ಮನೆ ಗೇಟ್ ಹತ್ರ ಬರ್ಬೇಕಾದ್ರೆನೆ ಗೊತ್ತಾಗಿದ್ದು ಬಾಲುವಿಗೆ ತನ್ನ ಫೋನ್ ಕಳ್ದೋಗಿರೋದು, ಆ ಬಸ್ಸಿನಿಂದ ಇಳಿಬೇಕಾದ್ರೆ ಯಾರೋ ಲಪ್ಟಾಯಿಸಿದ್ದಾರೆ ಅನ್ನೋದ್ ಗೊತ್ತಾಯ್ತಿ, ಮನೆಯಲ್ಲಿ ಒಂದು ಹಳೆ ಮೊಬೈಲಿತ್ತು ಅದನ್ನ ಹೊರ ತೆಗೆದು ಸೀದ ಪಕ್ಕದ ಮೊಬೈಲ್ ಅಂಗಡಿಗೆ ಹೋಗಿ ಹೊಸ ಸಿಮ್ ತಗೊಂಡು ಹಳೆ ಫೋನಿಗೆ ಹಾಕಿ ಉಪಯೋಗಿಸಲು ಶುರು ಮಾಡಿದ.

ಒಂದು ದಿನ ಕೆಲಸ ಮುಗ್ಸಿ ಜರ್ಮನ್ ಸ್ಟಡಿ ಕೌನ್ಸಿಲ್ಲಿಗೆ ಬಂದ ಬಾಲು ವಿಚಾರಿಸಿದಾಗ ಯುನಿವರ್ಸಿಟಿ ಸೆಲೆಕ್ಶನಿಂದ ಹಿಡ್ದು, ಸ್ಟೇ, ಪಾರ್ಟೈಮ್ ಜಾಬ್, ಸ್ಟಡಿ ವೀಸ, ಇನ್ಟರ್ನ್ಶಿಪ್, ಸ್ಕಾಲರ್ಶಿಪ್ ಎಲ್ಲಾ ವ್ಯವಸ್ಥೆ ಮಾಡೋದರ ಜೊತೆಗೆ ಒಂದ್ ತಿಂಗಳ ಬೇಸಿಕ್ ಜರ್ಮನ್ ಕೋರ್ಸೂ ಹೇಳಿ ಕೊಡುವುದಾಗಿಯೂ ತಿಳಿಸಿದ್ರು, ಒಳ್ಳೆ ಡೀಲ್ ಅಂತ ಒಪ್ಪಿಕೊಂಡ, ‘ಕರೆಕ್ಟ್ ಟೈಮಿಗೆ ಬಂದಿದ್ದೀರ ಜಸ್ಟ್ ನಿನ್ನೆ ಇಂದ ಒಂದು ಬ್ಯಾಚ್ ಸ್ಟಾರ್ಟ್ ಆಗಿದೆ ನೀವ್ ಬೇಕಿದ್ರೆ ಅದೇ ಬ್ಯಾಚಿಗೆ ಸೇರ್ಕೋಬೋದು ಇನ್ನು ಒಂದ್ ಗಂಟೀಲಿ ಕ್ಲಾಸ್ ಸ್ಟಾರ್ಟ್ ಆಗುತ್ತೆ’ ಅಂದ್ರು, ಸರಿ ಇನ್ನು ಮನೆಗೆ ಹೋಗಿ ಏನು ಮಾಡೋದು ಕ್ಲಾಸ್ ಎಟೆನ್ಡ್ ಆಗ್ವ ಅಂತೇಳಿ ಅಲ್ಲೆ ಕೂತ.

ಒಬ್ಬೊಬ್ರಾಗೇ ಜನ ಬಂದ್ರು ಕ್ಲಾಸ್ ಸ್ಟಾರ್ಟ್ ಆಯಿತು, ಬಂದವರ ಜೊತೆ ಮಾತಾಡಿ ಕೆಲವರ ಪರಿಚಯ ಮಾಡಿಕೊಂಡ ಬಾಲು, ಜರ್ಮನ್ನ್ ಟೀಚರ್ ಕ್ಲಾಸಿಗೆ ಬಂದ್ರು, ಯಾರೆಲ್ಲಾ ಇವತ್ತು ಹೊಸ್ತಾಗಿ ಬಂದಿದ್ದೀರ ಕೇಳಿದ್ರು, ಬಾಲು ಸೇರಿ ಮತ್ತೆ ನಾಲ್ವರು ಕೈ ಎತ್ತಿದ್ರು, ಜರ್ಮನ್ನ್ ಟೀಚರಿನ ವಾಯಿಸ್ ತುಂಬ ಯುನಿಕ್ಕಾಗಿತ್ತು ಈ ರಾಣಿ ಮುಖರ್ಜಿಯ ಸ್ವರ ಇದೆಯಲ್ಲ ಹಂಗಿತ್ತು, ಏನೋ ಒಂಥರ ಅಟ್ರಾಕ್ಶನ್ನಿತ್ತು ಅದ್ರಲ್ಲಿ, ನೀಲಿ ಬಣ್ಣದ ಅನಾರ್ಕಲಿ ಅಂತಹ ಒಂದು ಡ್ರೆಸ್ ಹಾಕಿದ್ರು, ಕ್ಲಾಸಿಗೆ ಪರಿಚಯ ಮತ್ತೆ ಮಾಡಿಕೊಳ್ಳುತ್ತಾ ಅವರ ಹೆಸರು ಶ್ರುತಿ ಅಂದ್ರು, ಚನ್ನಾಗಿದೆ ಹೆಸರು, ಮುಖದಲ್ಲಿ ಹೈಲೀ ಪ್ರೊಫೇಶನಲ್ ಛಾಯೆ ಇತ್ತು, ಆ ಮುಖ ಏನೂ ಹೇಳದೇನೆ ಟೀಚರ್ ಸ್ಟುಡೆನ್ಟಿನ ಗೆರೆ ಎಳೆದ್ದಾಗಿತ್ತು, ಮುಖದಲ್ಲಿ ಒಂದು ನಗು ಬಿದ್ದಿದ್ರೆ ಇನ್ನಷ್ಟು ಚನ್ನಾಗಿ ಕಾಣೋರು, ಅವರನ್ನ ನೋಡ್ತಿದ್ರೆ ತನ್ನಷ್ಟೆ ವಯಸ್ಸಾಗಿರ್ಬೇಕು ಅನ್ಕೊಂಡ ಬಾಲು, ಹೊಸಬರ ಪರಿಚಯ ಮಾಡ್ಕೊಳ್ತ ಒಬ್ಬ ಎದ್ದು ನಿತ್ತು ತನ್ನ ಬಗ್ಗೆ ಹೇಳುತ್ತ ‘My hobbies are writing plays’ ಅಂದ, ಅದನ್ನ ಕೇಳಿದ ಟೀಚರ್, ‘oh! that’s nice, even I am into theaters, would like to read your play someday’ ಅಂದ್ರು, ಏನೆಲ್ಲಾ ಟ್ಯಾಲೆನ್ಟ್ ಇದೆ ಇವ್ರಿಗೆ, ಇಲ್ಲಿ ಜರ್ಮನ್ ಹೇಳಿಕೊಡೋದ್ ಅಲ್ದೆ theaters, ಪ್ಲೇನೂ ಮಾಡ್ತಾರಂದ್ರೆ ಎಲ್ಲಿರುತ್ತೆ ಟೈಮು, damn! beauty with a brain ಅನ್ಕೊಂಡವನೆ ಸುಮ್ಮನ್ನಾದ. ಇದು ಜರ್ಮನ್ನ್ ಬೇಸಿಕ್ ಕ್ಲಾಸು, ಇಲ್ಲಿ ಅದರ ಅ ಆ ಇ ಈ ಎಲ್ಲಾ ಹೇಳಿ ಕೊಡಲ್ಲ, ಜರ್ಮನ್ನಿನ ನಮಸ್ಕಾರ, ಊಟ ಆಯ್ತಾ, ಹೇಗಿದ್ದೀರ ಅನ್ನೋ ಸರ್ವೈವಲ್ ಲ್ಯಾಗುವೇಜ್ ಮಾತ್ರ ಹೇಳಿ ಕೊಡೋದು, ಆವತ್ತಿನ ಕ್ಲಾಸಿನಲ್ಲಿ eins (ಒಂದು) zwei (ಎರಡು) drei (ಮೂರು) ಹೀಗೆ ಜರ್ಮನ್ನ್ ಸಂಖ್ಯೆಗಳ ಕ್ಲಾಸ್ ಪ್ರಾರಂಭವಾಯಿತು.

ಅಲ್ಲಿ ಅಪ್ಪ ಅಮ್ಮನ ಫೋಟೋಗೆ ಫ್ರೇಮ್ ಹಾಕಲು ಕೊಟ್ಟು ಇನ್ನೊಂನ್ದ್ ಐದ್ ದಿನಕ್ಕೆ ಒಂದ್ ತಿಂಗ್ಳು ಆಗೋದು, ಆ ಅಂಗಡಿಯವ ಫ್ರೇಮ್ ರೆಡಿಯಾದ ದಿನದಿಂದಲೂ ಬಾಲುವಿಗೆ ಫೋನ್ ಹಚ್ತಿದ್ದಾನೆ, ಬಾಲು ಹೊಸ ನಂಬರ್ ಉಪಯೋಗಿಸ್ತಿರೋದು ಅವ್ನಿಗ್ ಹೇಗೆ ತಿಳಿಬೇಕು, ಸುಮ್ನೆ ಜಾಗ ತಿಂತಿದೆ ಅಂತ ಆ ಫೋಟೋನ ತನ್ನ ಅಂಗಡಿಯ ಅಟ್ಟಕ್ಕೆ ಹಾಕಿ ಇನ್ನು ಬಾಲುವಿಗೆ ಫೋನ್ ಮಾಡದಿರಲು ನಿರ್ಧರಿಸಿದ, ಹೀಗೆ ಒಂದು ದಿನ ಯಾವ್ದೋ ಒಂದ್ ನಾಟಕದ ಸ್ಟೇಜ್ ಡಿಸೈನರ್ ಒಬ್ಬ ತನ್ನ ನಾಟಕಕ್ಕೆ ಬೇಕಾದ ಪ್ರಾಪ್ಸ್ ಗಳನ್ನ ಹುಡುಕುತ್ತ ಮಾರ್ಕೇಟಿಕೆ ಬಂದಿದ್ದ, ಅದಾಗ್ಲೆ ಏನೇನನ್ನೋ ಖರೀದಿಸಿ ತನ್ನ ಕೈ, ಬುಜದಲ್ಲೆಲ್ಲಾ ಚೀಲವನ್ನ ನೇತಾಕೊಂಡಿದ್ದ, ಫೋಟೋ ಫ್ರೇಮ್ ಅಂಗಡಿ ಕಂಡವನೇ ನಿತ್ತು ಒಮ್ಮೆ ಅಲ್ಲಿ ಇಟ್ಟೀದ್ದ ಫೋಟೋಗಳನೆಲ್ಲ ನೋಡಿ ಅಂಗಡಿಯವನ ಹತ್ತಿರ ಬಂದು, ‘ನಿಮ್ಮ ಹತ್ರ ಆರ್ಡರ್ ಕೊಟ್ಟು ತುಂಬಾ ದಿನವಾದ್ರೂ ತಗೊಂಡ್ ಹೊಗ್ದೆ ಇರೋ ಯಾವ್ದಾದ್ರು ಹಿರಿಯರ ಪೋಟೋ ಏನಾದ್ರೂ ಇದ್ಯಾ? ನಮ್ಮ್ ನಾಟ್ಕಕ್ಕೆ ಈ ಸೆಟ್ ಡಿಸೈನ್ ಮಾಡಕೆಲ್ಲಾ ಒಳ್ಳೆ ಸಹಾಯವಾಗುತ್ತೆ’ ಅಂದ, ಆಂಗಡಿಯವ ಬಾರೀ ಖುಷೀಯಲ್ಲಿ, ‘ಇದೇ, ಇದೇ, ಒಂದೆರಡ್ ಫೋಟೋ ಇದೆ, ಆರ್ಡರ್ ಕೊಟ್ಟು ತಿಂಗ್ಳಾಗ್ತಾ ಬಂತು ಪಾರ್ಟೀ ಪತ್ತೆ ಇಲ್ಲ, ಫೊಟೋನ ಅಟ್ಟಕ್ಕೆ ಹಾಕಿದ್ದೆ, ಇರಿ ತಂದೆ ಅಂತೇಳಿ ಅಟ್ಟ ಹತ್ತಿ ಫೊಟೋ ತಂದು ಒಂದು ಕವರಿನಲ್ಲಿ ಹಾಕಿ ಕೊಟ್ಟು ಕಳುಹಿಸಿದ, ಅನಾವಶ್ಯಕ ಜಾಗ ತಿಂತಿದ್ದ ಆ ಎರಡು ಫ್ರೇಮ್ ಹೋದ ಖುಷಿ ಜೊತೆಗೆ ಅದರಿಂದ ಲಾಭವಾದ ಖುಷಿಗೆ ಜೋರಾಗಿ ಹಿಗ್ಗಿದ ಅಂಗಡಿಯವ.

ಇತ್ತ ಇಷ್ಟು ದಿನ ಒಂಥರ ಬೇಸರದಲ್ಲಿದ್ದ ಬಾಲುವಿನ ಮುಖದಲ್ಲಿ ಒಂದು ರೀತಿಯ ಹುರುಪು ಮೂಡಿತು, ದಿನಾ ಕೆಲಸ ಮುಗಿಸಿ ಸೀದ ಜರ್ಮನ್ ಕ್ಲಾಸಿಗೆ ಹೋಗಿ ಅಲ್ಲಿ ಜರ್ಮನ್ನ್ ಟೀಚರ್ ಶ್ರುತಿಯವರ ಬರುವಿಕೆಗೆ ಕಾಯುತಿದ್ದ, ಹೀಗೆ ದಿನ ಕಳೀತು, ಕ್ಲಾಸಿನಲ್ಲಿ ಇವಾಗ ಜರ್ಮನಿನ ಸಾವಿರ, ಲಕ್ಷ, ದಶ ಲಕ್ಷ ಎಲ್ಲಾ ಹೇಳಿ ಕೊಡ್ತಿದ್ರೂ ಈ ಬಾಲುವಿನ್ನೂ ಒಂದು, ಎರಡು, ಮೂರಿನಲ್ಲೆ ಕಳ್ದೋಗಿದ್ದ, ಜರ್ಮನ್ನ್ ಟೀಚರಿನ ಆ ಸಣ್ಣ ಸಣ್ಣ ಹೆಜ್ಜೆ, ಪಾಠ ಮಾಡ್ತಾ ಆ ಮುಂಗುರುಳು ಕಣ್ಣಿಗೆ ಅಡ್ಡ ಬಂದಾಗ ತನ್ನ ಬೆರಳಿನಲ್ಲಿ ಅದನ್ನ ಕಿವಿಯ ಹಿಂದೆ ಸರಿಸುವ ರೀತಿ ಹೀಗೆ ಇಂತಹ ಆ ಸಣ್ಣ ಸಣ್ಣ ವಿಶಯವನ್ನೂ ಗಮನಿಸುತ್ತಿದ್ದ, ಅವರನ್ನ ಶ್ರುತಿ ಅನ್ನೋ ಬದ್ಲು ಟೀಚರ್ ಅಂಥ ಕರ್ಯೋದೆ ಇಷ್ಟವಾಗ್ತಿತ್ತು ಅವನಿಗೆ, ಹೀಗೆ ಪಾಠ ಮಾಡ್ತ ಟೀಚರಿನ ದೃಷ್ಟಿ ತನ್ನ ಕಡೆ ಬಂದಾಗ ಒಂದು ರೀತಿಯ ಖುಷಿ ಆದ್ರೂ ಒಳಗಿಂದ ಯಾಕೋ ಪುಕ ಪುಕ ಆಗೋದು, ಅವತ್ತು ಕ್ಲಾಸ್ ಮುಗಿದ ಮೇಲೆ ಟೀಚರ್ ಎಲ್ಲಾರನ್ನೂ ಉದ್ದೇಶಿಸುತ್ತ, ‘Before we wrap for a day, I would like to invite all of you to my new play they after tomorrow, I will be sharing booking links in whats app, please do come’ ಅಂದ್ರು, ಇದೇ ಫಸ್ಟ್ ನೋಡಿ ಆ ಟೀಚರ್ ಪಾಠ ಬಿಟ್ಟು ಏನೋ ಒಂದ್ off the subject ಮಾತ್ತಾಡಿದ್ದು, ಆ ಇನ್ವೈಟ್ ಮಾಡ್ಬೇಕಾದ್ರೆ ಅವರ ಮುಖದಲ್ಲಿದ್ದ ಮಂದಹಾಸ ಹೇಳ್ತಿತ್ತು ಅವ್ರಿಗೆ ಆ ಪ್ಲೇ, ನಾಟಕ ಮಾಡೋದೆಲ್ಲ ಎಷ್ಟ್ ಇಷ್ಟಾ ಅನ್ನೋದು, ನೀವು ಇಲ್ಲಿ ಮನಸ್ಸಿಲ್ಲದೆ ಕೆಲಸ ಮಾಡೋ ಬದ್ಲು ಆ ಪ್ಲೇಗಳನ್ನೇ ಫುಲ್ ಟೈಮ್ಮಾಗಿ ಮಾಡಿದ್ರೆ ನಾನು ದಿನಾ ಶೋ ಇದ್ರೂ ಬರ್ತೀನಿ, ಇಲ್ಲಿ ಗಂಟ್ಟಾಕಿದ ಮುಖ ಅಲ್ಲಿ ಸ್ಟೇಜ್ ಮೇಲೆ ಹೊದಾಗ ಯಾವ್ ಯಾವ್ ರೀತಿಯಲ್ಲಿ ಅರಳೋದು, ಏಷ್ಟ್ ಎಷ್ಟ್ ರೀತಿಯಲ್ಲಿ ನಗುಬೋದು, ಹೀಗೆ ಯೋಚಿಸ್ತಿದ್ದ ಬಾಲುವಿಗೆ ಕ್ಲಾಸ್ ಮುಗ್ದು ಅರ್ಧ ರೂಮ್ ಖಾಲಿಯಾಗಿರೋದೆ ಗೊತ್ತಾಗಿಲ್ಲ, ಇನ್ನು ಹೀಗೆ ಸುಮ್ನೆ ಕೂತಿದ್ರೆ ಏನೂ ಆಗೋದಿಲ್ಲ, ಒಮ್ಮೆ ಧೈರ್ಯ ಮಾಡೀ ಹೋಗಿ ತನಗೆ ಅವರಿಷ್ಟ ಅನ್ನೋದು ಹೇಳಿ ಬಿಡ್ವ, ಯಾರಿಗ್ ಗೊತ್ತು ಅವ್ರಿಗೂ ನಾನ್ ಇಷ್ಟ ಆಗಿರ್ಬೋದು ಇಲ್ಲ ಹೇಳಿದ್ ಮೇಲಾದ್ರೂ ಮುಂದೆ ಇಷ್ಟ ಆಗ್ಬೋದು, ಹೀಗೆ ಯೋಚಿಸಿದ ಬಾಲು ನಾಳೆ ಕ್ಲಾಸ್ ಮುಗ್ಸಿ ಮನೆಗ್ ಹೋಗೋ ಮೊದ್ಲುಆವರನ್ನ ಭೇಟಿ ಮಾಡೋದಾಗಿ ನಿರ್ಧರಿಸಿದ.

ಮುಂದಿನ್ ದಿನ ಕ್ಲಾಸಿನಲ್ಲಿ ಕೂತ ಬಾಲುವಿಗೆ ಭಾರೀ ಭಯ, ಆ ಏ.ಸಿ ರೂಮಿನಲ್ಲೂ ಬೆವರ್ತಿದ್ದ ಬಾಲು, ಕ್ಲಾಸಿನ ಮೇಲೆ ಸ್ವಲ್ಪನೂ ಗಮನ ಇರ್ಲಿಲ್ಲ, ಏನ್ ಹೇಳೊದು, ಹೇಗ್ ಹೇಳೋದು ಅನ್ನೋ ಯೋಚನೇನೇ ತುಂಬೋಗಿತ್ತು ಅವನ ತಲೆಯಲ್ಲಿ, ಕ್ಲಾಸ್ ಮುಗೀತು, ಎಲ್ರೂ ರೂಮಿನಿಂದ ಹೋದ್ರು, ಇವ ಮೆಲ್ಲ ಕ್ಲಾಸಿನಿಂದ ಹೊರ ಬಂದವನೆ ಮತ್ತೊಂದಿಷ್ಟು ಬಾರಿ ಪ್ರಾಕ್ಟಿಸ್ ಮಾಡಿ ಜರ್ಮನ್ ಟೀಚರಿನ ಕ್ಯಾಬಿನ್ನಿಗೆ ಬಂದ, ಬಾಲುವನ್ನು ಕಂಡ ಟೀಚರ್, ‘Yes Balu, can I help you with something?’ ಅಂದ್ರು, ಟೀಚರ್ ಇವನನ್ನ ಕಂಡು ಮಾತಾಡಿದ್ದೆ ತಡ ತನ್ನಲ್ಲಿದ್ದ ಎರಡ್ ಪರ್ಸೆನ್ಟ್ ಧೈರ್ಯ ಕೂಡ ಓಡೋಗ್ಬಿಡ್ತು, ತಡವರಿಸುತ್ತ ತನ್ನ ಒಂದು ಬುಕ್ ಓಪನ್ನ್ ಮಾಡಿ ಅದೇನೋ ಡೌಟ್ ಕೇಳಲು ಶುರು ಮಾಡಿದ, ಟೀಚರ್ ಕುರ್ಚಿ ತೋರಿಸಿ ಕೂರಲು ಹೇಳಿದ್ರು, ಪುಸ್ತಕವನ್ನು ಒಮ್ಮೆ ನೋಡಿ ಟೀಚರ್ ಅದೇನೇನೋ ಹೇಳಲು ಶುರು ಮಾಡಿದ್ರು, ಇಷ್ಟ್ ಹತ್ರದಿಂದ ಇವರನ್ನ ನೋಡ್ತಿರೋದು ಇದೇ ಮೊದ್ಲು, ಹತ್ರದಿಂದ ಮತ್ತಷ್ಟು ಚನ್ನಾಗ್ ಕಾಣ್ತಾರೆ, ಹಣೆಯಲ್ಲಿ ಒಂದು ಸಣ್ಣ ಬಿಳಿಯ ಮಾರ್ಕ್ ಇದೆ, ಇಷ್ಟು ದಿನ ಗಮನಿಸಿರ್ಲಿಲ್ಲ, ಹೀಗೆ ಓದುತ್ತ ಒಮ್ಮೆಗೆ ಟೀಚರ್ ಬಾಲುವಿನ ಕಡೆ ನೋಡಿದ್ರು, ಕಳ್ದೋಗಿದ್ದ ಬಾಲು ‘Ahm… i got to tell you something teacher, ah… Shruthi…’ ತಡವರಿಸ್ತಿದ್ದ ಬಾಲುವಿನ ಹಣೆ ಎಲ್ಲಾ ಬೆವರಿತು, ಆತನ ಮುಖ ಭಾವ, ಚರ್ಯೆಗಳನೆಲ್ಲ ಗಮನಿಸಿದ ಟೀಚರ್, ‘Don’t!… you mustn’t, but you are always welcome if you have any REAL doubts’ ಅಂದು ಬಾಲುವನ್ನು ಅಲ್ಲೆ ಗೊಂದಲದಲ್ಲಿ ಬಿಟ್ಟು ಕ್ಯಾಬಿನಿನಿಂದ ಹೊರ ಬಂದ್ರು, ಇತ್ತ ಬಾಲು ತನ್ನ ತಡವರಿಕೆ ಮುಂದುವರಿಸುತ್ತ, ಆಗಿರೋದನ್ನ ಗ್ರಹಿಸುತ್ತ, ತನನ್ನು ತಾನು ಸುಧಾರಿಸಿಕೊಳ್ತಾ ಮೆಲ್ಲ ಅಲ್ಲಿಂದ ಎದ್ದು ಹೊರ ಬಂದು ಮನೆಯ ದಾರಿ ಹಿಡಿದ, ಏನೋ ಒಂದು ರೀತಿಯ ಅನೂರ್ಜಿತ ಭಾವ ಬಾಲುವಿನಲ್ಲಿ, ಆತನಿಗೆ ಅಂದು ಅನಿಸಿದ್ದು ಅವಮಾನವೋ, ಬೆಸರವೋ ಅನ್ನೋದೆ ಗೊತ್ತಾಗಿಲ್ಲ, ಮುಂದೆ ಕ್ಲಾಸಿಗೆ ಹೇಗೆ ಹೋಗ್ಲಿ, ಹೇಗೆ ಅವರ ಎದುರು ಏನೂ ಆಗದಿದ್ದವನ ಹಾಗೆ ವರ್ತಿಸಲಿ, ತುಂಬಾ ಕಷ್ಟ ಆಗುತ್ತೆ ಅನ್ನೋದು ಗೊತ್ತಾಗಿಯೂ ಅದನ್ನ ಲೆಕ್ಕಿಸದೆ ಅಂದು ಕ್ಲಾಸಿಗೆ ಹೋದ, ತಾನು ನಿತ್ಯ ಕೂರುವ ಜಾಗ ಬಿಟ್ಟು ಕ್ಲಾಸಿನ ಲಾಸ್ಟ್ ಕಾರ್ನರ್ ಸೀಟ್ ಹಿಡಿದು ಕೂತ, ಜರ್ಮನ್ನ್ ಟೀಚರ್ ಬಂದ್ರು, ಅವರ ಮುಖದಲ್ಲಿ ಯಾವುದೇ ರಿತಿಯ ಬದಲಾವಣೆ ಇಲ್ಲ, ಇದು ಬಾಲುವನ್ನು ಮತ್ತಷ್ಟೂ ತಗ್ಗಿಸಿತು, ಒಮ್ಮೆ ಹೋಗಿ ಅವರ ಬಳಿ ಕ್ಷಮೆ ಕೇಳಿದ್ರೆ ಸಮಾಧಾನ ಆಗೋದಾಗಿ ಯೋಚಿಸಿ ಕ್ಲಾಸಿನ ನಂತರ ಹೊರ ಬಂದ ಆದರೆ ಅಲ್ಲಿ ಅವನಿಗೆ ಧೈರ್ಯ ಸಾಲಲಿಲ್ಲ, ಕೂಡಲೆ ಟೀಚರ್ ಅವರ ನಾಟಕಕ್ಕೆ ಇನ್ವೈಟ್ ಮಾಡಿದ್ದು ತಿಳಿದು ಅಲ್ಲಿಗೆ ಹೋಗೋದಾಗಿ ನಿರ್ಧರಿಸಿದ, ಅಲ್ಲಿ ಶೋ ಮುಗಿದ ಮೇಲೆ ಅವರನ್ನ ಬೇಟಿಯಾಗಿ ಕ್ಷಮೆ ಕೇಳಿದ್ರೆ ಸರಿಯಾಗೋದು, ಅಲ್ಲಿ ಅವರ ಮೂಡ್ ಚನ್ನಾಗಿರ್ಬೋದು. ಅಂದು ಟೀಚರ್ ಇನ್ವೈಟ್ ಮಾಡಿದಲ್ಲಿಗೆ ಬಂದ ಬಾಲು ಎಲ್ಲಾ ಕಡೆ ಹುಡುಕಿದ ಎಲ್ಲೂ ಟೀಚರ್ ಕಾಣ್ತಿಲ್ಲ, ಅವರನ್ನ ಒಮ್ಮೆ ಕಾಣದೆ ಸಮಾಧಾನವಿಲ್ಲ, ಹುಡುಕ್ತಿದ್ದ ಅವನ ಕಣ್ಣಿಗೆ ಟೀಚರ್ ಕಂಡರು ಬಾಲುವಿನ ಮುಖ ಹುಮ್ಮಸ್ಸಿನಿಂದ ಅರಳಿತು, ಅಂದು ಮೊದಲ ಬಾರಿಗೆ ಬಾಲುವಿನಲ್ಲಿ ಈರ್ಷೆಯ ಅನುಭವವಾಯಿತು, ಟೀಚರ್ ಅಲ್ಲಿ ಎಷ್ಟು ಖುಷಿಯಾಗಿ ನಗಾಡ್ತಾ ತನ್ನ ಪಕ್ಕದಲ್ಲಿದ್ದವರ ಬುಜದ ಮೇಲೆ ತನ್ನ ಕೈಯನ್ನಿಟ್ಟು ಸ್ನೇಹಿತರ ಜೊತೆಗೆ ಮಾತಾಡ್ತ, ಅವಾಗಾವಾಗ ಒಬ್ಬರಿಗೊಬ್ಬರು ಚಪ್ಪಾಳೆ ತಟ್ಟುತ್ತ ಇದ್ದದ್ದು ಕಂಡ ಬಾಲುವಿಗೆ ತಾನೂ ಟೀಚರಿನ ಆ ಆಪ್ತರಲ್ಲಿ ಒಬ್ಬನಾಗಿದ್ದಿದ್ದರೆ ಚನ್ನಾಗಿರೋದಾಗಿ ಅನಿಸಿತು, ಎಂದೂ ಕ್ಲಾಸಿನಲ್ಲಿ ಅವರನ್ನ ಅಷ್ಟು ಖುಷಿಯಾಗಿ ಕಂಡದ್ದಿಲ್ಲ, ಅವರ ಮುಖದಲ್ಲಿ ಏನೋ ಒಂದು ರೀತಿಯ ಗೆಲುವಿತ್ತು, ಕಂಡ ಸಮಾಧಾನದಲ್ಲಿ ಬಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತ.

ನಾಟಕದ ಪರಿಚಯ ಮಾಡಿಕೊಟ್ಟಾಗ ಗೊತ್ತಾಯ್ತು ಬಾಲುವಿನ ಜರ್ಮನ್ನ್ ಟೀಚರ್ a.k.a ಶ್ರುತಿ ಆ ನಾಟಕದಲ್ಲಿ ಯಾವುದೋ ಒಂದು ಪಾತ್ರ ಮಾಡ್ತಿಲ್ಲ ಬದಲಾಗಿ ಆ ನಾಟಕದ ರಚನೇನೆ ಅವರದ್ದು ಅನ್ನೋದು, ನಂತರ ಆರಂಭವಾಗಿ ಒಂದೊಂದೇ ದೃಶ್ಯವನ್ನ ಮುಗಿಸುತ್ತ ಒಂದು ನಿರ್ದಿಷ್ಟ ದೃಶ್ಯಕ್ಕೆ ನಾಟಕ ಬಂದು ತಲುಪಿತು, ಪ್ರತೀ ದೃಶ್ಯಕ್ಕೂ ಸ್ಟೇಜಿನ ಸೆಟ್ಟ್ ಚೇನ್ಜ್ ಆಗಿರೋದು, ಇವಾಗ ಆ ಸ್ಟೇಜಿನಲ್ಲಿ ಹಾಕಲಾಗಿದ್ದ ಆ ಸೆಟ್ಟನ್ನ ಗಮನಿಸಿದ ಬಾಲುವಿಗೆ ಆಶ್ಚರ್ಯ ಕಾದಿತ್ತು, ಅಲ್ಲಿನ್ನ ಕಾರ್ಡ್ ಬೋರ್ಡ್ ಗೋಡೆಯ ಮೇಲೆ ತನ್ನ ಅಪ್ಪ ಅಮ್ಮನ ಫೋಟೋ ಹಾಕಲಾಗಿತ್ತು, ಕೂಡಲೆ ಹೋಗಿ ಅದನ್ನ ತಗೋಬೇಕು ಅನ್ನಿಸಿದರೂ ತುಂಬಿದ ಸಭೆಯಲ್ಲಿ ಏಳೋದು ಸಭ್ಯವಲ್ಲ ಅನಿಸಿ ಕುರ್ಚಿಯ ಹಿಡಿಯನ್ನು ಗಟ್ಟೀಯಾಗಿ ಹಿಡಿದು ಅಲ್ಲೆ ಕೂತ, ಬಾಲುವಿನ ದೃಷ್ಟಿ ಆ ಫೋಟೋವಿನ ಮೇಲೆನೆ ನೆಟ್ಟಿತ್ತು, ಒಬ್ಬ ಮಗನಿದ್ದರೂ ಅನಾಮಧೇಯರಾಗಿ ಅಲ್ಲಿ ಅಪ್ಪ ಅಮ್ಮ ಕಂಡು ಬಂದದಕ್ಕೆ ಬೇಸರಿಸಿದ, ಅಳು ಉಮ್ಮಳಿಸಿ ಬಂತು, ಕಣ್ಣೀರ್ ಒರೆಸಿಕಂಡು ಅಲ್ಲೆ ಕೂತ, ಕಳೆದ ಕೆಲವು ದಿನದಿಂದ ಅವನ ಜೀವನದಲ್ಲಿ ನಡೆದ ಘಟನೆಗಳನ್ನ ಗಮನಿಸುತ್ತ ಒಂದಕ್ಕೊಂದು ಜೋಡಿಸುತ್ತ ಬಂದ ಬಾಲು ಅದೇಗೋ ಅವನನ್ನು ಅವನ ಅಪ್ಪ ಅಮ್ಮನ ಬಳಿ ಮತ್ತೆ ಕರಿಸಲು ಕಾರಣರಾದ ಆ ಜರ್ಮನ್ನ್ ಟೀಚರಿಗೆ ಕೂತಲ್ಲೆ ನಮಿಸಿದ.

‍ಲೇಖಕರು nalike

June 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚಂದ್ರಪ್ರಭ ಕಠಾರಿ

    ಮೊದಲಿಗೆ ಕತೆಯ ಚೌಕಟ್ಟು ಚೆನ್ನಾಗಿದೆ. ಪ್ರೀತಿಯ ಅಪ್ಪ ಜೊತೆ ಅಮ್ಮನನ್ನೂ ಕಳೆದುಕೊಂಡು ಒಂಟಿತನವನ್ನು ಭರಿಸಲಾಗದೆ ಜರ್ಮನ್ ತರಗತಿಗೆ ಸೇರುವುದು, ಅಲ್ಲಿ ಅಧ್ಯಾಪಕಿಯಲ್ಲಿ ಅನುರಾಗ ಹುಟ್ಟುವುದು, ಆ ತಳಮಳದಲ್ಲಿ ಅದನ್ನು ಅವರಿಗೆ ನಿವೇದಿಸಲಾಗದೆ ಹೋಗುವುದು, ಕೊನೆಗೆ ನಾಟಕ ಪ್ರದರ್ಶನದಲ್ಲಿ ಸೆಟ್ಟಿನ ಮೇಲೆ ತಾನು ತರಲು ಮರೆತ್ತಿದ್ದ ಅಪ್ಪ ಅಮ್ಮನ ಫೋಟೊ ಅನಾಥವಾಗಿ ಕಂಡು ಬೇಸರಿಸುವುದು – ಎಲ್ಲವೂ ದೃಶ್ಯವಾಗಿ ಕಣ್ಮುಂದೆ ನಿಲ್ಲುತ್ತದೆ. ಆ ವಿಚಾರವಾಗಿ ಕತೆಗಾರ ಶ್ರೀಕರ ಭಟ್ಟರನ್ನು ಅಭಿನಂದಿಸಲೇಬೇಕು. ಆದರೆ, ಕತೆಯನ್ನು ಒಬ್ಬ ಗೆಳೆಯನಿಗೆ ಹೇಳುವಂತೆ ಬಹು ಧಾವಂತ ತೋರಿದ್ದಾರೆ. ಉದ್ದುದ್ದ ವಾಕ್ಯದ ಸಾಲುಗಳು, ಪೂರ್ಣವಿರಾಮ ಇಲ್ಲದೆ ಬರೀ ಅಲ್ಪವಿರಾಮದಲ್ಲಿ ಕತೆಯನ್ನು ಅವಸರಿಸುವುದು ಕಾಣುತ್ತದೆ. ಇಂಗ್ಲೀಷ್ ಪದಗಳನ್ನು ಕನ್ನಡದಲ್ಲಿ ವಿಪರೀತ ಬರೆದಿರುವುದು ಮತ್ತು ಅನಾಮತ್ತಾಗಿ ಕೆಲವು ಸಂಭಾಷಣೆಯನ್ನು ಇಂಗ್ಲೀಷಿನಲ್ಲೇ ಬರೆದಿರುವುದು ಕಿರಿಕಿರಿಯೆನಿಸುತ್ತದೆ. ಯಥಾವತ್ತಾಗಿ ಇಂಗ್ಲೀಷ್ ಪದವನ್ನು ಕನ್ನಡದಲ್ಲಿ ತರುವುದು ಸಹಜತೆಯನ್ನು ತರುತ್ತದೆ ಹೌದಾದರೂ, ಸಾಧ್ಯವಿದ್ದ ಕಡೆ ಕನ್ನಡದ ಪದಗಳನ್ನೇ ಸಶಕ್ತವಾಗಿ ಬಳಸಿದರೆ ಸಂವೇದನೆಗೆ ಅಡ್ಡಿಯಾಗುವುದಿಲ್ಲವೆಂದು ನನ್ನ ಅಭಿಪ್ರಾಯ. ಇದು ನನ್ನ ಅನಿಸಿಕೆಯಷ್ಟೆ ಹೊರತು ಕತೆಯ ವಿಮರ್ಶೆಯಲ್ಲ.

    ಪ್ರತಿಕ್ರಿಯೆ
    • Shreekara Bhat

      ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಮುಂದೆ ಬರಿಯುವಾಗ ನೀವು ತಿಳಿಸಿರುವುದನ್ನು ಗಮನದಲಿಟ್ಟುಕೊಂಡು ಬರೆಯುವೆ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: