ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೋಕರಹಿತ ನಗರ

ಬೇಗಂಪುರ
( ಶೋಕರಹಿತ ನಗರ)

ಎನ್ ರವಿಕುಮಾರ್ ಟೆಲೆಕ್ಸ್

**

ಕನಸು ಬೀಳುತ್ತಿದೆ
ಸುಳ್ಳುಗಳಿಲ್ಲದ
ಶೋಷಣೆಯಿಲ್ಲದ
ದುಃಖವಿಲ್ಲದ
ತರತಮವಿಲ್ಲದ
ಕೇಡಿಲ್ಲದ ; ಸೇಡಿಲ್ಲದ
ಊರಿನದ್ದು;

ಹಗಲಿಗೆ  ನಕ್ಷತ್ರಗಳ
ನಗುವ ಸದ್ದು
ಮುಗಿಲಿನಲಿ ಚಂದ್ರನ
ದಿವ್ಯ ಸಾರೋಟು
ಈ ನಗರದಲ್ಲಿ ಪ್ರೇಮದ
ಅಂಗಡಿಗಳದ್ದೆ ಶೃಂಗಾರ

ಬಡವನ ಉಂಗುಷ್ಟ
ಕಿತ್ತ ಚಪ್ಪಲಿ ಗೆ
ನೂಲ ಹೆಣೆದ
ದೇವರೆಂಬ ದೇವರ
ಭಕ್ತಿಯ ಭವ ನವಿರು

ಅರಮನೆಯಲ್ಲಿ
ಮಸಣ ಮೌನ
ಜೋಪಡಿಗಳಲ್ಲಿ
ನವಿಲ ಕಣ್ಣು ಕುಣಿದಾವೆ

ಕೇಡು ತೊರೆಯವ
ಕಾಲದ ಶಕುನ
ಕಲ್ಲು ಕರಗುವ ಹೊತ್ತು
ಹೂವು ಅರಳುವ ಸದ್ದು
ಕೇಳತೊಡಗಿದೆ

‍ಲೇಖಕರು avadhi

16 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading