ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೃಂಗಾರದ ಮತ್ತಿನಲ್ಲಿ ಭೂಮಿಯೂ ನಗ್ನ..

ಮಳೆಯಲ್ಲಿ ನಡೆದು

nagaraja harapanahalli

ನಾಗರಾಜ್ ಹರಪನಹಳ್ಳಿ, ಕಾರವಾರ

ಭಾನು ಭೂಮಿ ಅದೆಷ್ಟು
ದೀರ್ಘವಾಗಿ ಚುಂಬಿಸುತ್ತೆ
ನಾಚಿಕೆಯೇ ಇಲ್ಲ, ಅದು ಬಟ್ಟ ಬಯಲಿನಲಿ, ನಟ್ಟ ನಡು ರಸ್ತೆಯಲಿ

cloud pendantವಾರವಾಯ್ತು ನಾಚಿಕೆ ಬಿಟ್ಟು
ಹೊಸ ಪ್ರೇಮಿಗಳಂತೆ
ನವವಧುವರರಂತೆ

ಕಾದ ಕಾವಲಿಯಂತಿದ್ದ
ವಿರಹದ ಬೇಸಿಗೆ ಕಳೆದಾಗಿದೆ
ಬಯಸಿ ಬಯಸಿ ಕೂಡಿಯಾಯಿತು ಎಂಬಂತೆ;

ಹಗಲೇ ದೀರ್ಘಪ್ರೀತಿ…ಮಳೆಗೆ ಅಂತ ಕಸುವು
ಇರಬೇಕು ಹತ್ತಿರ ಇದ್ದವರು ಮತ್ತಷ್ಟು
ಹತ್ತಿರವಾಗಿ ಪ್ರೀತಿಸುವಂತೆ

ಅಕ್ಕಪಕ್ಕ ಇದ್ದವರು ಮತ್ತಷ್ಟು ಗಟ್ಟಿ ಅಪ್ಪಿಕೊಂಡಂತೆ
ಮತ್ತೆ ದೀರ್ಘವಾಗಿ ಮಳೆಮೋಡ
ಭೂಮಿಯ ಸಂಭೋಗಿಸಿದಂತೆ
ಮುಗಿಯುವುದೇ ಇಲ್ಲ
ಮಳೆಯ ಸರಸ..

ಹಳೆಯದೆಲ್ಲಾ ನೆನಪಾಗಿ
ಎದೆಯಲ್ಲಿ ಮಳೆಯಾಗಿ
ನಿರ್ಜನ ರಸ್ತೆಯಲ್ಲಿ
ಅವನ ನೆನಪಾಗಿ ನಡೆದುಬಿಟ್ಟೆ
ಅಕ್ಕನಂತೆ

ಮಳೆ ನೆಲದೊಂದಿಗೆ  ಪಿಸುಮಾತನಾಡುತ್ತಾ
ಶೃಂಗಾರದ ಮತ್ತಿನಲ್ಲಿರುವಾಗ
ಭೂಮಿಯೂ ನಗ್ನ, ನಾನೂ ನಗ್ನ

‍ಲೇಖಕರು admin

6 July, 2016

4 Comments

  1. Renuka ramananda

    ಉತ್ತಮ ಮಳೆ ಗೀತೆ

  2. Anonymous

    Nice

  3. Anonymous

    ತುಂಬಾ ಒಳ್ಳೆಯ ಕವಿತೆ

  4. Sudha ChidanandGowd

    lovely lovely…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading