ಶಿಶಿರ
ಚೇ…
ಜೊತೆಯಾಗಿದ್ದಾನೆ
ಜೊತೆಗಾರನಾಗಿದ್ದಾನೆ
ಮೋಟಾರ್ ಸೈಕಲ್ ಏರಿದವನ
ಸಾರಥಿಯಾಗಿದ್ದಾನೆ…
ಚೇ...
ಗಡಿ ದಾಟಿದ್ದಾನೆ
ಮುಂದಡಿ ಇಟ್ಟಿದ್ದಾನೆ
ಬೇಲಿಗಳ ಕಡಿದು ಹೊರಗಡಿಯಿಡುವವರ ಮುನ್ನುಡಿಯಾಗಿದ್ದಾನೆ…

ಚೇ…
ಸ್ವತಂತ್ರನಾಗಿದ್ದಾನೆ
ಸ್ವತಂತ್ರವಾಗಿ ಯೋಚಿಸಿದ್ದಾನೆ
ಸ್ವಾತಂತ್ರ್ಯ ಹುಡುಕುತ್ತಿರುವ ಕಂಗಳಿಗೆ
ಕಂದೀಲಾಗಿದ್ದಾನೆ…
ಚೇ…
ಜೀವಿಸುತ್ತಲೇ ಇದ್ದಾನೆ
ಬೆಕ್ಕಿನ ಜೀವ ಹೊಂದಿದ್ದಾನೆ
ಪ್ರತಿಭಟಿಸ ಬಯಸುವ ನಿಸ್ತೇಜ ಮನಸ್ಸುಗಳಿಗೆ
ಮರುಜೀವ ನೀಡುತ್ತಿದ್ದಾನೆ…
ಚೇ…
ಕಥೆಯಾಗಿದ್ದಾನೆ
ದಂತಕಥೆಯಾಗಿದ್ದಾನೆ
ಮನುಷ್ಯತ್ವ ಉಸಿರಾಡಿರುವ ಪ್ರತಿ ಎದೆಯಲ್ಲೂ ಕವಿತೆಯಾಗಿದ್ದಾನೆ…







0 Comments