ಶಿವಯೋಗಿ ಕಳ್ಳಿಮಠ
ನಾನು ಪರಿಚಯದ
ಹವಣಿಕೆಯಲ್ಲಿದ್ದೆ.
ನನ್ನನ್ನು
ಕಣ್ಣಿಲ್ಲೆ ಹೀರಿ ಕುಡಿದು
ತನ್ನ ವಶವಾಗಿಸಿ,
ನನ್ನ ಅಮಾಯಕತನವ
ಗೆಲ್ಲಿಸಿದಳು.
ನಾನು ತುದಿ ಬೆರೆಳ
ಸ್ಪರ್ಶಕ್ಕೆ ತಡವರಿಸಿದ್ದೆ.
ಅವಳು ನೆತ್ತರಲ್ಲಿ,
ಓಕುಳಿಯ ಸ್ಪೋಟಿಸಿ
ಮೈ ಮನಸಿನ ಗಂಧದ
ಫರಕು ತೆಗೆದಳು.
ನಾನು ತಿರಬೋಕಿ
ಕನಸಿಗೆ ಏಣಿ ಹಾಕುತ್ತಿದ್ದೆ.
ಬರಸೆಳೆದು ಮುತ್ತಿಕ್ಕಿ,
ದುಡುದುಡು
ನೆಡೆದು ಹೋದಳು.

ಮಿಲನದ ಸಾಕ್ಷಿಗೆ
ನಾನು ಬೆವರ ಹೆಕ್ಕುತ್ತಿದ್ದೆ.
ಅವಳು ಮುಂದಿನಿರುಳಿಗೆ,
ನನ್ನ ತೋಳಲ್ಲಿ
ನಿದ್ದೆಯಲ್ಲಿದ್ದಳು..
ಒಂದಿನಿತು ದಾವಂತ ಮಾಡದೆ.
ದುರಂತಗಳ ಲಟಲಟ
ಮುರಿದು ಒಲೆಗಿಕ್ಕಿ,
ದಪದಪ ರೊಟ್ಟಿ
ಬಡಿದು
ಬೇಯಿಸಿದಳು.
ನಾನು ಯುದ್ಧಕೆ
ಹಿಂಜರಿಯತ್ತಾ,
ನೆಪಗಳ ಹುಡುಕಿ ತಾರಾಡುತ್ತಾ
ಬೆವರುತ್ತಿದ್ದೆ.
ಅವಳು ಜೀವ ಹಡೆದು
ಪಾತ್ರೆ ತಿಕ್ಕಲು ಕುಂತಳು.






ಭಳಿರೇ!! ಸಖತ್ತಾಗಿದೆ ಕವನ! ಥ್ಯಾಂಕ್ಸ್! ಖುಷಿಯಾಯಿತು
ನಮಸ್ಕಾರ ಪ್ರತಿಭಾ ಮ್ಯಾಮ್.
ಧನ್ಯವಾದಗಳು ನಿಮ್ಮ ಪ್ರತಿಕ್ರಿಯಗೆ ,ಮೆಚ್ಚುಗೆಗೆ.
ಮತ್ತು
“ನಾವು ಹುಡುಗಿಯರೇ ಹೀಗೆ” ..ಮುಂತಾದ ನಿಮ್ಮ ಕವನಗಳಿಗೆ.
ನಮಸ್ಕಾರ ಪ್ರತಿಭಾ ಮ್ಯಾಮ್.
ಧನ್ಯವಾದಗಳು.. ಪ್ರತಿಕ್ರಿಯೆಗೆ , ಮೆಚ್ಚುಗೆಗೆ.
ಮತ್ತಷ್ಟು ಧನ್ಯವಾದಗಳು
“ನಾವು ಹುಡುಗಿಯರೇ ಹೀಗೆ ” ಮುಂತಾದ ಕವನಗಳು ನಮಲ್ಲಿ ತುಂಬಿದ ಖುಷಿಗೆ ,ಕಾವ್ಯೋತ್ಸಾಹಕ್ಕೆ, ಪ್ರೇರಣೆಗೆ.