ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಯೋಗಿ ಕಳ್ಳಿಮಠ ಕವಿತೆ- ಕೆಲವು ಶಾಯರಿಗಳು…

ಶಿವಯೋಗಿ ಕಳ್ಳಿಮಠ

ನಿನ್ನ ಭೇಟಿಗೂ ಮುನ್ನ
ನನ್ನ ಜೀವನವೇ
ಇರಲಿಲ್ಲ.
ಅದಕ್ಕಿಂತ ಮುಂಚೆ
ನಾನು ಬದುಕಿದ್ದೆ
ಎಂಬುದೇ ಪುಕಾರು.

ನಿನ್ನ ನಗುವಿನ ತುಣುಕುಗಳ
ಹೆಕ್ಕಿ ಬೆಳದಿಂಗಳೆಂದು
ದೋಕಾ ಮಾಲು ಹಂಚುತ್ತಿದ್ದ
ಚಂದ್ರ.
ನನ್ನ ನೋಡುತ್ತಿದಂತೆ ಸುದ್ದಿ
ಹಬ್ಬಿಸುವನೆಂದು
ಬೆಳಗೆಳುತ್ತಲೇ
ಪರಾರಿಯಾದ.

ಪ್ರೀತಿಯ ಗಾಯಕ್ಕೆ
ಮೂಲಾಮಾಗುತ್ತೆನೆಂದಳು..
ಕೆಣಕಿ ಇನ್ನೂ ಹಸಿಯಾಗಿಸುತ್ತಿದ್ದಾಳೆ.
ಈ ಇಲಾಜು ಜನ್ಮ ಪೂರ
ಜಾರಿ ಇರಲಿದೆ.
ಖಂಡಿತ ಈ ಗಾಯ
ಇನ್ನೂ ಆಳವಾಗುವುದಿದೆ.

ಸಾವ ತಡೆದೇನು ನಾನು
ಪ್ರೀತಿಸುವುದು ಬಾಕಿ
ಇದೆ ಎಂದು.
ಪ್ರೀತಿಸುವುದ ಹೇಗೆ
ತಡೆದೇನು ನಾನು?
ನಿನ್ನ ಭೇಟಿ ಆದ ಮೇಲೂ.

ಇರುಳಿಗೆ ಬರುವೆನಂದಳು
ಕಾದೆ,
ಹಗಲಿಗೆಂದಳು.
ಜೀವನ ಪೂರ ನಿಂತೆ.
ಮುಂದಿನ ಜನ್ಮ‌ದ ಆಸೆ ತೋರಿಸಿದಳು.
ಬಿಡಿ,
ನಮಗಾದರೂ ಕೆಲಸವೇನಿದೆ.
ಪ್ರೀತಿಸುವುದು ಬಿಟ್ಟು.

‍ಲೇಖಕರು Admin

19 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading