ಶಿವಯೋಗಿ ಕಳ್ಳಿಮಠ
ನೀ ನನ್ನೊಂದಿಗಿರಬೇಕಿತ್ತು
ಪ್ರೀತಿಸುವ ಪರಿ
ಇನ್ನೂ ಚೆಂದವಿತ್ತು.
ಊರಿದ ಪ್ರತಿ ಹೆಜ್ಜೆಗೂ
ಲೆಕ್ಕ ಕೊಡುತ್ತಿದ್ದೆ,
ಮತ್ತು ಬೀಳುವ ಕನಸುಗಳ
ಬಗ್ಗೆ ಮಾಹಿತಿ.
ನೀ ಎಡವಿದ ಜಾಗವ ಎಂದೆಂದೂ
ದ್ವೇಷಿಸುತ್ತಿದ್ದೆ.
ಅದರೆ,
ನಿನ್ನೇಷ್ಟು ಪ್ರೀತಿಸುತ್ತೇನೆಂದು
ಹೇಳುತ್ತಿದ್ದಿಲ್ಲ,
ಪ್ರೀತಿಸುತ್ತಿದ್ದೆ
ಇಡಿಯಾಗಿ.
ನಿನ್ನ ಸಾಹಸಗಳಿಗೆ, ಬೇಟೆಗೆ
ನಾನೇ ಮೈದಾನ,
ನಿನ್ನ ಹೊಸ ವೇಶಕ್ಕೆ
ನಾ ಸಿದ್ದ ಉಡುಪು.
ನಿನ್ನ ಅವತಾರಗಳಿಗೆಲ್ಲ
ನಾ ಚಹರೆ ಬದಲಾಯಿಸಿಕೊಳ್ಳುತ್ತಿದ್ದೆ.

ಕಾಡ ದಾರಿಯ ಕತ್ತಲಿಗೆ
ನಾ ಕಣ್ಣ ಲಾಂದ್ರ.
ನಿನ್ನ ಈಜಾಟದ ತೇವಲಿಗೆ
ಕಾಮನೆಗಳ ಕೊಳ.
ನಿನ್ನ ಭಾವನೆಗಳ ಮೋಜಿಗೆ
ನಾ ಕರೆಯದೆ ಕವಿತೆಯಾಗುತ್ತಿದ್ದೆ.
ಕೇಳು,
ಬರು ಹೋಗುವ ಸಂಬಂಧಗಳಿಗೆ
ದಿಡ್ಡಿ ಬಾಗಿಲು ಜಡಿದು
ನಿನ್ನಷ್ಟೇ ಹೆಪ್ಪು ಹಾಕಿ
ನಿನ್ನೆಲ್ಲೂ ಅವಿಯಾಗದ ಹಾಗೆ
ಕುಡಿಯುತ್ತಿದ್ದೆ.
ಬೇಕಿದ್ದರೆ
ನನ್ನ ಎದೆ ಒಡೆದು
ನಿನ್ನ ಪಯಣದ ಹಾದಿಗೆ
ಹಾರೈಕೆಗೆಳ ಬುತ್ತಿ ಕಟ್ಟಿ
ಬೀಳ್ಕೊಡುತ್ತಿದ್ದೆ.
ನೀ…






0 Comments