ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವತೀರ್ಥ

‘ಗೆಂಡಗಯ್ಯ’ ಎಂದೇ ಗೆಳೆಯರ ಬಳಗದಲ್ಲಿ ಹೆಸರಾದ ಕೆ ಎನ್ ಶಿವತೀರ್ಥನ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸದಾ ಚಟುವಟಿಕೆಯ ಶಿವ ಹೀಗೆ ಮಲಗುವುದು ಗೆಳೆಯರಿಗೆ ಊಹಿಸಲೂ ಸಾಧ್ಯವಿಲ್ಲ. ಹಾಗೆ ಬಾಲಕೃಷ್ಣ ಪಟ್ಟ ನೋವು ಇಲ್ಲಿದೆ, ಕವಿತೆಯಾಗಿ-

ಈ ಕವಿತೆಯನ್ನು ನಮ್ಮ ಗಮನಕ್ಕೆ ತಂದ ವಿಮರ್ಶಕ ವಿ ಎನ್ ಲಕ್ಷ್ಮೀನಾರಾಯಣ್ ಅವರಿಗೆ ವಂದನೆಗಳು.

-ನಾ.ಬಾಲಕೃಷ್ಣ

ಈತ ನನ್ನಂಥವರ

ಅಂತರಾಳದ ಮಿತ್ರ

ಬದುಕಿನ ಏರಿಳಿತವನರಿತ

ನೇರ ಮಾತುಗಳೋ ಹರಿತ

ಜನಪರಕ್ಕೆ ಸ್ಪಂದಿಸುವ

ಹೋರಾಟ ನಿರತ

ವಿಕಸಿತ ಒಳದನಿಯ ಕವಿ

ಮುಂಜಾನೆ ಇಬ್ಬನಿಯ ಹನಿ

ನೋವುಂಡವರ ಆಕ್ರೋಶಕ್ಕೆ

ಸದಾ ಕುದಿವ ಆವೇಗಕ್ಕೆ

ಹೆಗಲೆಣೆಯಾದ ಹೊಣೆಗಾರ.

.

ಈತನಿಗೆ ಬದುಕು ಕೊಟ್ಟಿದ್ದಕ್ಕಿಂತ

ಕಸಿದುಕೊಂಡಿದ್ದು ಅಪಾರ.

.

ಇದೀಗ ಮಾತಿಗೆಟುಕದ ಮೌನ

ಸನ್ನೆ ಬರೀ ಸನ್ನೆ

ತಿನ್ನಲಾಗದ ಅಗಳು

ನುಂಗಲಾಗದ ಉಗುಳು

ಒರೆಸಲಾಗದ ಕಣ್ಣೀರು

ನಿಡುಸುಯ್ದ ನಿಟ್ಟುಸಿರು

 

‍ಲೇಖಕರು G

28 April, 2011

4 Comments

  1. C P Nagaraja

    ಉತ್ತರ ಪತ್ರಿಕೆಗಳಿಗೆ ಬೆಲೆಕಟ್ಟಲೆಂದು ಪ್ರತಿ ವರುಷ ಮೈಸೂರಿಗೆ ಹೋದಾಗ , ಗೆಳೆಯ ಶಿವತೀರ್ಥನ್ ಅವರ ದೊಡ್ಡ ದನಿಯನ್ನು ಕೇಳದವರೇ ಇಲ್ಲ . ಮೌಲ್ಯಮಾಪನ ಕೇಂದ್ರಕ್ಕೆ ಬರುತ್ತಿದ್ದಂತೆಯೇ ಅತ್ಯಂತ ಉತ್ಸಾಹದಿಂದ ಅವರಾಡುತ್ತಿದ್ದ ಮಾತುಗಳು ಇಡೀ ಕಟ್ಟಡದಲ್ಲಿ ಅನುರಣಿಸುತ್ತಿದ್ದವು . ” ಓ ಬಂದ ಕಣೋ ಇವನು , ಇನ್ಯಾರು ಪೇಪರ್ ವ್ಯಾಲ್ಯು ಮಾಡೋಕಾಗೊಲ್ಲ ಬಿಡು ಇವನು ಹೋಗು ತನಕ ನಕ್ಕು ನಕ್ಕು ಸಾಕಾಗುತ್ತೆ ” ಎಂದು ಗೆಳೆಯರೆಲ್ಲ ಅವರತ್ತ ನೋಡುತ್ತಿದ್ದೆವು . ಅಪಾರವಾದ ಸಾಮಾಜಿಕ ಕಾಳಜಿಯೊಡನೆ ತುಂಬ ಚಟುವಟಿಕೆಯಿಂದ ಕೂಡಿ ಎಲ್ಲರೊಡನೆ ಒಂದಾಗಿ ಬೆರೆಯುತ್ತಿದ್ದ ಈ ಗೆಳೆಯನಿಗೆ ಬಂದಿರುವ ನೋವನ್ನು ಕಂಡಾಗ ಹೊಟ್ಟೆಯಲ್ಲಿ ಏನೋ ಒಂದು ಬಗೆಯ ಸಂಕಟವಾಗುತ್ತದೆ .
    ಸಿ.ಪಿ.ನಾಗರಾಜ

  2. kvtirumalesh

    Shivatirthan haasige hidididdaarendu aritu tumbaa aatankavaagide. avaru nanna geleyaru. kelavu varshagalinda naanu videshadalliro:darinda avara bhe:ti aagilla. aadaruu avaru nanna manassinalli iddaare. avara gendagayya nanna mecchina kavanagalalli ondu. jiivana priitiya Shivatiirthan, nimma aaro:gya shiighra sudhaarisali!
    priitiya
    kvtirumalesh

  3. chandrualur

    shiva teerthan yendare lalavike,chaitanya,exhuberence.avarannu heege noduvudu deeply disturbing.namagella nagu,santhosha hanchida avara koneya dinagalu ullasadayaka agirali

  4. usharai

    ಜೀವನದ ನಿಗೂಢ ರಹಸ್ಯವಿದು. ಎಲ್ಲರಿಗೂ ಪ್ರಿಯರಾಗಿ ನಗುತ್ತಾ ನಗಿಸುತ್ತಾ ಇದ್ದವರು ಹೀಗೆ ಮೌನವಾಗಬೇಕಾದರೆ, ಇಷ್ಟೊಂದು ನೋವು ತಿನ್ನಬೇಕಾದರೆ ದೇವರ ನ್ಯಾಯಾಲಯದಲ್ಲಿ ನ್ಯಾಯವೇ ಇಲ್ಲ ಎಂದೆನಿಸುತ್ತದೆ. ನನಗೆ ಅವರ ಪರಿಚಯವಿಲ್ಲ. ಆದರೂ ಓದಿ ನೋವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading