ಶಿವಕುಮಾರ ಮಾವಲಿ ಓದಿದ ‘ಇಜಯಾ’

ಶಿವಕುಮಾರ ಮಾವಲಿ

ಪೂರ್ಣಿಮಾ ಅವರೆ,
ನಿಮಗೆ ಅಭಿನಂದನೆಗಳು…

ನಿಮ್ಮ ‘ಇಜಯಾ’ ಕಾದಂಬರಿಯನ್ನು ಓದಿದೆ. I travelled through the journey of ಇಜಯಾ. ನಿಮ್ಮ ಕಥನ ಶಕ್ತಿ ಮತ್ತು ಅದನ್ನು ಲೀಲಾಜಾಲವಾಗಿ ಹೇಳಿಕೊಂಡು ಹೋದ ರೀತಿಯಿಂದ ನಿಮ್ಮ ಪ್ರತಿಭೆಯ ಬಗ್ಗೆ ಬಹಳ ಅಭಿಮಾನ ಮೂಡಿತು. You have got the unique intelligence of narration.

ಮೊದಲ ಕೆಲವು ಪುಟ ಓದುವಾಗ ಇದ್ಯಾಕೋ metaphysical ಆಗುತ್ತಿದೆಯೇನೋ ಅನ್ನಿಸಿತ್ತು. ಆದರೆ ಇಜಯಾಳ ಬ್ಯಾಂಕಿನ ಪ್ರಕರಣದಿಂದ ಪುಸ್ತಕ ಕೆಳಗಿಡದೆ ಓದಿಸಿಕೊಂಡಿತು. ಎಷ್ಟೋ ದಿನಗಳಿಂದ ಪೆಂಡಿಂಗ್ ಇದ್ದ ಇಜಯಾಳ ಕಥೆಯನ್ನು ಇಂದು ಓದಿದೆ. ಒಂದು ಹೊಸ ಅನುಭವ ಲೋಕಕ್ಕೆ ನನ್ನನ್ನು ಕರೆದೊಯ್ದ ನಿಮ್ಮ ಬರಹಕ್ಕೆ ಧನ್ಯವಾದ. ಜೊತೆಯಲ್ಲಿಯೇ ನಿಜದ ಲೋಕದ ವಾಸ್ತವಗಳನ್ನು ಆಗಾಗ ನೆನಪಿಸುತ್ತಲೇ ಇರುವುದು ಈ ಕಾದಂಬರಿಯ ವಿಶೇಷ.

ಇದು ಕನಸುಗಳ ಕಥೆ. ಕನಸು ಗೆಲ್ಲಲು ಇರುವ ಸವಾಲಿನ ಕಥೆ. ಅದು ಗಂಡಸಿಗೂ ಸವಾಲು. ಮಹಿಳೆಗೆ ಆ ಸವಾಲು ಇನ್ನೂ ದೊಡ್ಡ ಮಟ್ಟದ್ದು. ಇಡೀ ಜಗತ್ತಿನ ಪ್ರತೀ ಜೀವವೂ ತನ್ನ ಕನಸುಗಳನ್ನು ಬೆನ್ನಟ್ಟಿರುತ್ತದೆ. ತಾನು ಮುಳ್ಳಿನಿಂದ ಬೇರ್ಪಡಬೇಕೆಂಬ ಕನಸು ಗುಲಾಬಿ ಹೂವಿಗಿದ್ದರಬಹುದು. ಯಾರಿಗೆ ಗೊತ್ತು? ವ್ಯಕ್ತಿಯ ಕನಸೊಂದು ಸಾರ್ವಜನಿಕ ಮನ್ನಣೆ ಪಡೆಯುವ ಹಂಬಲದ್ದಾಗಿರುತ್ತದಾದರೂ ಅದನ್ನು ವೈಯಕ್ತಿಕ ನೆಲೆಯಲ್ಲಿಯೇ ಸಾಧಿಸಬೇಕಾಗುತ್ತದೆ.

ಫಲಿತಾಂಶದ ಒಂದು ದಿನದ ಹಿಂದೆ ಸಹಸ್ರಾರು ಪರಿಶ್ರಮದ ದಿನಗಳಿರುತ್ತವೆ. ಮನುಷ್ಯ ತನ್ನ ಕನಸುಗಳನ್ನು ಜೀವಿಸಲು ಎಷ್ಟೆಲ್ಲ ಶ್ರಮ ಪಡುತ್ತಾನೆ ನೋಡಿ? ಆದರೆ ನಿತ್ಯದ ಜೀವನದ ನಡುವೆ ಕೆಲವೊಮ್ಮೆ ‘ರೊಟೀನ್’ ಎಲ್ಲವನ್ನೂ ಮರೆಸಿಬಿಡುತ್ತದೆ. ಇಜಯಾಳಂಥವಳ ಕನಸಿನ ಸಾಕಾರದ ಹಿಂದಿನ ಸಾಹಸ ಅವಳನ್ನು ಕರೆದೊಯ್ಯುವುದೆಲ್ಲಿಗೆ? ಕನಸುಗಳ ಬಗ್ಗೆಯೇ ಇರುವ ಈ ಕಾದಂಬರಿಯ ಹಿನ್ನೆಲೆಯಲ್ಲಿ ನನಗೆ ನೆನಪಾದ ಮೂರು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಚಿಸುತ್ತೇನೆ.

೧. Randy Pausch ಎಂಬ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಮತ್ತು ವಿಜ್ಞಾನಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾಯಲು ಉಳಿದಿದ್ದ ಕೆಲವೇ ದಿನಗಳ ಮುನ್ನ ತನ್ನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಆರಿಸಿಕೊಂಡ ವಿಷಯ ‘How to live your childhood dreams?’ ಎಂಬುದಾಗಿತ್ತು. ತನ್ನೆಲ್ಲ ಬಾಲ್ಯದ ಕನಸುಗಳನ್ನು ಆತ ಈಡೇರಿಸಿಕೊಂಡಾಗಿದೆ. ಹಾಗಾಗಿ ತಾನು ಮರಣಿಸಲು ಮನಸಿಕವಾಗಿ ಸಿದ್ಧನಿದ್ದೇನೆ ಎಂಬುದು ಅವನ ಮನಸ್ಥಿತಿ.

೨. ನೆರೂಡನ ‘To the foot from its child’ ಎಂಬ ಪದ್ಯವೊಂದರಲ್ಲಿ ಇಡೀ ಮನುಷ್ಯನನ್ನು ಬೂಟ್ ಗಳ ಕತ್ತಲಲ್ಲಿ ಸಿಕ್ಕಿಕೊಂಡಿರುವ foot ಗೆ ಹೋಲಿಸುತ್ತಾ, ಅದಕ್ಕೆ ಅರಿವಿಲ್ಲದೆ foot wanted to be a butterfly or an apple but life teaches the foot that it cannot fly ಎಂಬ ಸಾಲುಗಳು ಬರುತ್ತವೆ. ನೆರೂಡ ಮನುಷ್ಯನ ಈ ರೀತಿಯ ಕನಸುಗಳನ್ನು ಕೊಲ್ಲುವ ಜೀವನಕ್ಕೆ ಮರುಕ ಪಡುತ್ತಲೇ this foot toils without respite ಎನ್ನುತ್ತ ಹೀಗೆ ಸಾಧಾರಣ ಜೀವನಕ್ಕೆ ಒಗ್ಗಿಕೊಂಡಿರುವ ಮನುಷ್ಯನಿಗೊಂದು ಸಲಾಂ ಎನ್ನುತ್ತಾನೆ.‌ ನಮ್ಮಿಡೀ ಜೀವನವೇ ಶೂ ಒಳಗಿನ ಪಾದದಂತೆ ಎಂಬ ಪ್ರತಿಮೆ, ನಾವು ಕತ್ತಲಲ್ಲೇ ಬದುಕುತ್ತೇವೆ, ಸತ್ತ ಮೇಲೆ ಕತ್ತಲಿಗೆ ಹೋಗುತ್ತೇವೆ ಎಂದು ತಿಳಿಸುತ್ತದೆ. ಆ ನಂತರ ಮತ್ತೆ ನಮ್ಮ ಕನಸುಗಳು ಚಿಗುರಬಹುದೆ ? ಅಥವಾ ಅದೊಂದು ವಿಷ ವರ್ತುಲವೆ !

೩. ‘Your salary is the bribe they give you to forget your dreams’ ಎಂಬ ಮಾತಿದೆ. ಜಗತ್ತಿನ ಬಹುತೇಕರ ಉದ್ಯೋಗ ಅವರ ಕನಸಿನ ಭಾಗವಾಗಿರುವುದಿಲ್ಲ.

ಇಜಯಾಳ ಕಥೆ ಓದಿದ ಮೇಲೆ ನನಗೆ ನನ್ನ ಜೀವನದ ಬಹು ಮುಖ್ಯ ನಿರ್ಧಾರವೊಂದು ನೆನಪಾಯಿತು. ಹೌದು, ಮಂಜ ಹೇಳಿದ್ದನ್ನು ಅಥವಾ ಮಾಡಿದ್ದನ್ನು ಎಲ್ಲರಿಗೂ ಮಾಡಲಾಗುವುದಿಲ್ಲ. ಆದರೆ ಮಾಡಿದರೆ We certainly make a difference. If we ever take a tuff decision, we need to keep on convincing people that we are living happily.

ಇಜಯಾಳ ಅತ್ತೆಗಿರುವ ಕನಸೇನು ? ಸರಿಗಮಪ ಕ್ಕೆ ಆಯ್ಕೆಯಾಗುವ ಕನಸು ಅಮ್ಮನ ಬಗೆಗಿನ ಸಹಜ ಮಮತೆಯನ್ನು ಹಿಸುಕುವ ಕ್ರೂರತೆಯನ್ನು ಹುಟ್ಟು ಹಾಕಬಲ್ಲದೆ ? ಮಂಜ ಇಜಯಾಗೆ ಕೊಟ್ಟದ್ದು ಕಾಟವೋ, ಅವಕಾಶವೋ ? ಇಜಯಾ ಮತ್ತು ಮಂಜ ಪ್ರೀಪ್ಲಾನ್ಡ್ ಆಗಿಯೇ ಹೋಗಿದ್ದರು ಎಂದು ನಂಬಿರುವ ಸುಧಿಗೆ ಮಂಜ ಎಂಬುವವನು ರಾಜೇಗಾಡ, ಮತ್ತು ಆತ ಕಥೆಗಾರ ಎಂಬುದು ತಿಳಿದರೆ ಆಗ ಅವನು ಇಜಯಾ ಈ‌ ಹಿಂದೆ ಕಥೆ ಬರೆಯಲು ಹೋಟೆಲ್ ನಲ್ಲಿ ಹೋಗಿ ಉಳಿದ ಘಟನೆಯನ್ನು ಈ ಹನ್ನೊಂದು ತಿಂಗಳಿಗೆ ತಳುಕಿ ಹಾಕಿ ನೋಡಲಾರನೆ ?…

ಏನೇ ಆಗ್ಲಿ we must thank Basappa… And you can share that thanks with him … ಬರೆಯುತ್ತಲೇ ಇರಿ … ಏಕೆಂದರೆ …
The world is full of indispensable stories…

‍ಲೇಖಕರು Admin

August 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: