ಮುದುಡಿದ ಮೊಗ್ಗುಗಳು
– ಸೌಮ್ಯಾ ಕೆ ಆರ್
ಮುಗ್ದತನದಿ ನಸು ನಕ್ಕು
ತೊದಲುನುಡಿಯಾಡಿ
ತಮ್ಮ ಪಾಡಿಗೆ ನಲಿದಾಡಿ, ಕುಣಿದಾಡಿ
ತಣ್ಣಗಿದ್ದ ಪುಟ್ಟ ಮೊಗ್ಗುಗಳು
ಹೋಸಕಿಹೋಗಿವೆ ರಾಶಿರಾಶಿಯಾಗಿ
ತಮ್ಮದಲ್ಲದ ತಪ್ಪಿಗೆ…
ಮತಾಂಧರ ಗುಂಡಿನ ಸದ್ದಿಗೆ
ಮುಂಜಾನೆ ಎದ್ದು ಜಗವನೆಲ್ಲ ನಗಿಸಿ
ಶೂಟು, ಬೂಟು ಧರಿಸಿ
ಹೆತ್ತ ಕಣ್ಣುಗಳ ತಂಪಗಿರಿಸಿ
ಶಾಲೆಗೆ ಹೋದ ಕುಡಿಗಳ
ಚಿವುಟಿ ಹಾಕಿದ್ದಾರೆ
ಮತ್ತೆ ಏಳದ ಹಾಗೆ ಮಲಗಿಸಿದ್ದಾರೆ
ರಕ್ಕಸ ಕೈಗಳಿದ ರಕ್ತ ಸುರಿಸಿ…

ಅನುರಾಗ ಅರುಳುವ ಹೊತ್ತಲ್ಲಿ
ಆರ್ಥನಾದ ಕೇಳುತ್ತಿದೆ
ಮತಾಂಧರ ದರ್ಪ ಶುರುವಾಗಿದೆ
ನದಿಯಾಗಿದೆ ನೆತ್ತರು
ಎಳೆಯ ಮಾಂಸ, ಮೂಳೆಗಳು ತಿಪ್ಪೆರಾಶಿ
ಶ್ವೇತವರ್ಣದ ಬಟ್ಟೆಯಲ್ಲಿ
ಮುದ್ದಾಗಿ ಮಲಗಿವೆ ಪುಟ್ಟ ಕಂದಮ್ಮಗಳು
ಶಾಲೆಯ ಗೂಡೆಯ ತುಂಬ
ಮೆತ್ತಿದೆ ಹಸಿ ರಕ್ತ,
ಅಲ್ಲಲ್ಲ ಹಸುಗೂಸುಗಳ ಕೈ, ಕಾಲು…
ಅಲ್ಲೂ ನಾಡಿ ಮಿಡಿತಕ್ಕೆ ಜಿನುಗುತ್ತಿದೆ
ರಕ್ತ ಗೋಡೆಗಂಟ…
ಕರುಣೆಯಿಲ್ಲ ರಾಕ್ಷಸರಿಗೆ
ಹೃದಯವಂತೂ ಇಲ್ಲವೇ ಇಲ್ಲ
ಇನ್ನೂ ನರಳೂತ್ತಿವೆ ನೂರಾರು ಜೀವಗಳು
ಸಿಡಿದ ಗುಂಡಿನ ಸದ್ದಿಗೆ ಅನ್ನಾಹಾರಗಳಿಲ್ಲದೆ
ಬೆಚ್ಚಿ ಬಿದ್ದು ಮುದುಡಿ ಕುಳಿತಿವೆ ಕಗ್ಗತ್ತಲಲ್ಲಿ
ಬೆಳಕು ಬೇಡವೇ ಬೇಡವೆಂದು
ಹೆತ್ತ ಕರುಳುಗಳಲ್ಲೂ ರಕ್ತ ಕಣ್ಣೀರು
ಇನ್ನೂ ಕಾಣುತ್ತಿಲ್ಲ ನಿಟ್ಟುಸಿರು
ಉಗ್ರರ ಹುಡುಕಿ ಸೀಳಬೇಕಿದೆ ಬಸಿರು
ಪೇಶಾವರದ ಸೇನಾ ಶಾಲೆ ತುಂಬ
ಹರಡಿವೆ ಪುಟ್ಟ ಹೃದಯಗಳು
ಹಾದಿಬೀದಿಯಲ್ಲಿ ಛಿದ್ರಗೊಂಡು,
ಕಟುಕ ಮನುಷ್ಯನಿಗೆ ಕಿಮ್ಮತ್ತಿಲ್ಲ
ಎಳೆಯ ಕುಡಿಗಳ ಹೊಸಕಿದ
ಕೈಗಳನ್ನು ಕತ್ತರಿಸಿ ನೇಣು ಬಿಗಿಯಬೇಕಿದೆ
ವಿಶ್ವದ ಹೃದಯಗಳೆಲ್ಲ ಒಂದಾಗಬೇಕಿದೆ






ಎಳೆಯ ಕುಡಿಗಳ ಹೊಸಕಿದ
ಕೈಗಳನು ಕತ್ತರಿಸಿ ನೇಣು ಬಿಗಿಯಬೇಕಿದೆ
ವಿಶ್ವದೆಲ್ಲಾ ಹೃದಯಗಳು ಒಂದಾಗಬೇಕಿದೆ.
–ಯಾವಾಗ ಆಗುತ್ತೆ ಎಂಬುದೇ ಗೊತ್ತಾಗುತ್ತಿಲ್ಲ.
ಶಾಲೆಯ ಗೂಡೆಯ ತುಂಬ
ಮೆತ್ತಿದೆ ಹಸಿ ರಕ್ತ,
ಅಲ್ಲಲ್ಲ ಹಸುಗೂಸುಗಳ ಕೈ, ಕಾಲು…
ಅಲ್ಲೂ ನಾಡಿ ಮಿಡಿತಕ್ಕೆ ಜಿನುಗುತ್ತಿದೆ
ರಕ್ತ ಗೋಡೆಗಂಟ…
ಕರುಣೆಯಿಲ್ಲ ರಾಕ್ಷಸರಿಗೆ
ಹೃದಯವಂತೂ ಇಲ್ಲವೇ ಇಲ್ಲ
ವಿಶ್ವದ ಹೃದಯಗಳೆಲ್ಲ ಒಂದಾಗಬೇಕಿದೆ ವಿಶ್ವದ ಹೃದಯಗಳೆಲ್ಲ ಒಂದಾಗಬೇಕಿದೆ
ರುದ್ರ ಭೀಕರ ಮಾರಣ ಹೋಮದ ಸುದ್ದಿ ತಿಳಿದಾಕ್ಷಣ ಮನಸ್ಸು ಸ್ಥಬ್ಧಗೊಂಡಿತ್ತು. ಪ್ರಜ್ಞೆ ಹೆಪ್ಪುಗಟ್ಟಿತ್ತು. ಮನುಷ್ಯ ಮ್ರಗೀಯತೆಯಿಂದ ಮೇಲೇಳಲು ಇನ್ನೆಷ್ಟು ಯುಗಗಳನ್ನು
ಕಳೆಯಬೇಕೋ…? ಸೌಮ್ಯಾ ಅವರ ಕವನ ತಾಯ್ತನದ ಕಣ್ಣಲ್ಲಿ ಕಂಡ ಮಕ್ಕಳ ಸಾವಿನ ರಾಶಿ ಯ ಬಗೆಗಿನ ಮನಮುಟ್ಟುವ ಪ್ರತಿಕ್ರಿಯೆಯಾಗಿ ಮೂಡಿಬಂದಿದೆ.
ಧನ್ಯವಾದಗಳು.
jeeva hinduva padagal saalu…
mana midiyuva kavana. balu mechugayayitu
makkaLigaagi sollettabekaagide,,jagattu..