ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಲೆಗಳನ್ನು ಮುಚ್ಚುವುದು ಬೌದ್ಧಿಕ ದಾರಿದ್ರ್ಯತೆಯ ಸಂಕೇತ..

-ನಾ ದಿವಾಕರ

ಮನೆಯೇ ಮೊದಲ ಪಾಠಶಾಲೆ ಎಂದು ಹೇಳಲಾಗುತ್ತದೆ. ಹಾಗೆಯೇ ಶಾಲೆ ಎನ್ನುವುದು ಬಾಲ್ಯಾವಸ್ಥೆಯಲ್ಲಿ ಮಕ್ಕಳು ಕಂಡುಕೊಳ್ಳುವ ಮತ್ತೊಂದು ಮನೆ. ತಮ್ಮ ಮನೆಗಳಲ್ಲಿ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವ ಮಕ್ಕಳಿಗೆ ಸಾಮಾಜಿಕ ಸಂಬಂಧಗಳ ಸೂಕ್ಷ್ಮತೆಗಳು ಅರಿವಾಗುವುದು ಶಾಲೆಯಲ್ಲಿ. ಶಾಲೆ ಅಂದರೆ ಕೇವಲ ಅಕ್ಷರ, ಕಾಗುಣಿತ ಕಲಿಸುವ ಯಾಂತ್ರಿಕ ಸಾಧನವಲ್ಲ. ಏನೂ ಅರಿಯದ ಮುಗ್ಧ ಮನಸ್ಸಿನ ಹಸುಳೆಗಳಿಗೆ ತಮ್ಮ ಸುತ್ತಲಿನ ಜಗತ್ತಿನ ವಾಸ್ತವಗಳನ್ನು ಪರಿಚಯಿಸುತ್ತಲೇ ಒಂದು ಸಾಮಾಜಿಕ ಚೌಕಟ್ಟಿನ ಅನಿವಾರ್ಯತೆ ಮತ್ತು ಅಗತ್ಯತೆಗಳನ್ನು ಮನದಟ್ಟುಮಾಡುವ ಪವಿತ್ರ ಸ್ಥಳ ಶಾಲೆ. ಶೈಕ್ಷಣಿಕ ದೃಷ್ಟಿಯಿಂದ ಶಾಲೆಗಳು ಜ್ಞಾನಾಭಿವೃದ್ಧಿಯ ಬಿಡಾರಗಳಾಗಿ ಕಂಡರೂ ಮಾನವ ಸಂವೇದನೆ ಮತ್ತು ಸೌಹಾರ್ದತೆಗಳ ದೃಷ್ಟಿಯಿಂದ ಶಾಲೆ ಎಂದರೆ ವ್ಯಕ್ತಿತ್ವವನ್ನು ರೂಪಿಸುವ ಒಂದು ಬೌದ್ಧಿಕ ಸಾಧನಗಳ ಆಗರ. ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ಮೊದಲು ಮನದಲ್ಲಿ ಮೂಡುವುದೇ ನಾವು ಓದಿದ ಆ ಪ್ರಾಥಮಿಕ ಶಾಲೆಯ ಚಿತ್ರಣ. ಆ ಕಾಲದ ಸ್ನೇಹಿತರು, ಶಿಕ್ಷಕರು, ಅಲ್ಲಿ ನಾವುಗಳು ಆಟ ಆಡಿದ ಕ್ಷಣಗಳು, ಆ ಬಯಲಿನ ಮರಳಿನಲ್ಲಿ ಬಿದ್ದು ಹೊರಳಾಡಿದ ಕ್ಷಣಗಳು, ಸಹಪಾಠಿಗಳೊಡನೆ ಜಗಳವಾಡಿ ಮತ್ತೆ ಒಂದಾಗಿ, ಮಾಸ್ತರುಗಳಿಂದ ಬೈಗಳು ಕೇಳಿ, ಹೊಡೆತ ತಿಂದು ಮತ್ತೆ ಪುನರಾವರ್ತನೆ ಮಾಡುತ್ತಿದ್ದ ಆ ಕ್ಷಣಗಳನ್ನು ಮರೆಯುವುದು ಅಸಾಧ್ಯ. ನಾವು ಓದಿದ ಶಿಥಿಲವಾದ ಪುರಾತನ ಶಾಲಾ ಕಟ್ಟಡಗಳು ಈಗ ಧ್ವಂಸಗೊಂಡು ಅದೇ ಜಾಗದಲ್ಲಿ ಭವ್ಯ ಬಂಗಲೆಯೋ, ಷಾಪಿಂಗ್ ಮಳಿಗೆಯೋ ನಿಮರ್ಾಣವಾಗಿದ್ದರಂತೂ ನಮ್ಮ ಎದೆಯಾಳದಲ್ಲಾಗುವ ತುಮುಲಗಳನ್ನು ವಣರ್ಿಸಲೇ ಆಗದು.

ಆ ಕಟ್ಟಡ ನಮ್ಮದಲ್ಲ, ಜಾಗವೂ ನಮ್ಮದಲ್ಲ, ಕೆಲವು ವರ್ಷಗಳ ಕಾಲ ನಮ್ಮ ಬಾಲ್ಯವನ್ನು ಅಲ್ಲಿ ಕಳೆದಿರುವುದಷ್ಟೇ ನಮ್ಮ ಹೆಗ್ಗಳಿಕೆ. ಆದರೂ ಆ ಶಾಲಾ ಕಟ್ಟಡದೊಡನೆ ನಮ್ಮ ಅವಿನಾಭಾವ ಸಂಬಂಧಗಳು ಬೆಸೆದುಕೊಂಡಿರುತ್ತವೆ. ಅಲ್ಲಿ ನಾವು ಕಲಿತದ್ದನ್ನು ಮರೆತರೂ ಆ ಕಟ್ಟಡವನ್ನು ಮರೆಯುವುದಿಲ್ಲ. ಇದು ಬಹುಶಃ ಎಲ್ಲರಿಗೂ ಆಗುವ ಅನುಭವ.ಏಕೆ ಹೀಗೆ ಎಂದು ಯೋಚಿಸುತ್ತಾ ಹೋದಾಗ ಆ ಪ್ರಾಥಮಿಕ ಹಂತದ ಶಾಲೆಗಳೇ ನಮ್ಮ ಇಂದಿನ ವ್ಯಕ್ತಿತ್ವವನ್ನು ರೂಪಿಸಿದ ಬುನಾದಿ ಎಂಬ ಗ್ರಹಿಕೆ ಮನದಟ್ಟಾಗುತ್ತಾ ಹೋಗುತ್ತದೆ. ಅಲ್ಲಿ ನಾವು ಕೇವಲ ಅಕ್ಷರ ಕಲಿಯಲಿಲ್ಲ, ಜೀವನವನ್ನೇ ಕಲಿತೆವು, ಜೀವನದ ಸತ್ಯಾಸತ್ಯತೆಗಳನ್ನು ಗ್ರಹಿಸುವ ಕಲೆಯನ್ನು ಕಲಿತೆವು, ನಮ್ಮ ಸುತ್ತಲಿನ ಸಮಾಜವನ್ನು ಗ್ರಹಿಸುವ ವಿದ್ಯೆಯನ್ನು ಕಲಿತೆವು,  ನಮ್ಮ ಒಡನಾಡಿಗಳ, ಸುತ್ತಲಿನ ಜನತೆಯ ಇಂಗಿತಗಳನ್ನು ಗ್ರಹಿಸುವ ಕಲೆಯನ್ನು ಕಲಿತೆವು ಎಂದು ಮನದಟ್ಟಾಗುತ್ತದೆ. ಹಾಗಾಗಿ ಈ ಶಾಲೆಯಲ್ಲಿ ಕಳೆದ ನಮ್ಮ ಬಾಲ್ಯದ ದಿನಗಳು ಜೀವನ ಪರ್ಯಂತವೂ ನಮ್ಮೊಡನೆಯೇ ಸಾಗುತ್ತದೆ. ಇಂದಿಗೂ ನನ್ನೂರಿಗೆ ಹೋದಾಗ ನಾನು ಓದಿದ ಶಾಲೆಯ ಕಟ್ಟಡದ ಜಾಗದಲ್ಲಿ ದೊಡ್ಡ ಕಾಂಪ್ಲೆಕ್ಸ್ ಇರುವುದನ್ನು ಕಂಡಾಗ ಎಲ್ಲೋ ಒಂದೆಡೆ ನೋವಾಗುತ್ತದೆ.

ಇದು ನಾವು ಬಾಲ್ಯಾವಸ್ಥೆಯನ್ನು ಕಳೆದ ಒಂದು ಶಾಲೆಯ ಸುತ್ತ ನಾವು ನಿಮರ್ಿಸಿಕೊಳ್ಳುವ ಸುಂದರ ಪರಿಕಲ್ಪನೆ. ಕಲಿಕೆಯ ಕೇಂದ್ರವಾಗಿ ಶಾಲೆಕನರ್ಾಟಕ ರಾಜ್ಯ ಸಕರ್ಾರ ಐದು ವಿದ್ಯಾಥರ್ಿಗಳಿಗಿಂತಲೂ ಕಡಿಮೆ ಸಂಖ್ಯೆ ಇರುವ ಮೂರು ಸಾವಿರ ಸಕರ್ಾರಿ ಶಾಲೆಗಳನ್ನು ಮುಚ್ಚಿಹಾಕುವ ಘೋಷಣೆ ಮಾಡಿದಾಗ ನನ್ನ ಮನದಾಳದಲ್ಲಿ ಮೂಡಿದ ಭಾವನೆಗಳು ಇವು. ಇಲ್ಲಿ ಕನ್ನಡ ಶಾಲೆ ಅಥವಾ ಸಕರ್ಾರಿ ಶಾಲೆ ಎನ್ನುವುದಕ್ಕಿಂತಲೂ, ಗ್ರಾಮೀಣ ಮಟ್ಟದಲ್ಲಿ ತಮ್ಮದೇ ಆದ ಒಂದು ಚೌಕಟ್ಟನ್ನು ನಿಮರ್ಿಸಿಕೊಂಡು, ಅಲ್ಲಿನ ಸೀಮಿತ ಪರಿಸರದಲ್ಲೇ ಗ್ರಾಮದ ಮಕ್ಕಳಿಗೆ ಹೊರ ಪ್ರಪಂಚವನ್ನು ಪರಿಚಯಿಸುವ ಒಂದು ಪವಿತ್ರ ದೇಗುಲವಾಗಿ ಶಾಲೆಗಳನ್ನು ನೋಡಬೇಕಾಗುತ್ತದೆ. ಗ್ರಾಮದ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಾಲೆಯೇ ಹೊರ ಪ್ರಪಂಚದ ಕಿಟಕಿಯಂತೆ ಕಾರ್ಯ ನಿರ್ವಹಿಸುತ್ತದೆ. ತಮ್ಮ ಗ್ರಾಮದಲ್ಲಿನ ವಾಸ್ತವ ಸನ್ನಿವೇಶಗಳಿಗಿಂತಲೂ ಭಿನ್ನವಾದ ಪ್ರಪಂಚವೊಂದಿದೆ ಎಂದು ಮಕ್ಕಳು ಅರಿಯುವುದೇ ಈ ಶಾಲೆಗಳಲ್ಲಿ ಮತ್ತು ಅಲ್ಲಿ ದೊರೆಯುವ ಶಿಕ್ಷಣದ ಮೂಲಕ.ಸರ್ವರಿಗೂ ಕಡ್ಡಾಯ ಸಾರ್ವತ್ರಿಕ ಉಚಿತ ಶಿಕ್ಷಣ ನೀಡುವುದು ಭಾರತದ ಆಳ್ವಿಕರ ಸಾಂವಿಧಾನಿಕ ಕರ್ತವ್ಯ ಮತ್ತು ನೈತಿಕ ಕರ್ತವ್ಯವೂ ಹೌದು. ಈವರೆಗಿನ ಆರು ದಶಕಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತ ಸಕರ್ಾರ ಅನೇಕ ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಗ್ರಾಮದಲ್ಲೂ ಶಾಲೆಗಳನ್ನು ಆರಂಭಿಸುವ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಹೊಸ ಶಿಕ್ಷಣ ನೀತಿಯ  ಅನುಸಾರ 14 ವರ್ಷದವರೆಗಿನ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದಿರಲು ಸಕರ್ಾರಗಳು ಅನೇಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿವೆ. ನಲಿ-ಕಲಿ, ಅಕ್ಷರ ದಾಸೋಹ, ಶಾಲಾಭಿವೃದ್ಧಿ ಸಮಿತಿಗಳ ರಚನೆ ಮುಂತಾದ ಯೋಜನೆಗಳ ಮೂಲಕ ಗ್ರಾಮ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಇಂದಿಗೂ ಸಹ ಅನೇಕ ಗ್ರಾಮಗಳಲ್ಲಿ ಶಾಲಾ ಸೌಲಭ್ಯಗಳು ಇಲ್ಲದಿರುವುದು ಕಂಡುಬರುತ್ತದೆ. ಕೆಲವು ಹಳ್ಳಿಗಳ ಮಕ್ಕಳು ಕಿಲೋಮೀಟರ್ಗಟ್ಟಲೆ ನಡೆದು ಹೋಗಬೇಕಾದ ಪರಿಸ್ಥಿತಿಯೂ ಇದೆ.

ಇರುವ ಶಾಲೆಗಳಲ್ಲೂ ಮೂಲಭೂತ ಸೌಕರ್ಯಗಳಿಲ್ಲದಿರುವುದೂ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಒಂದು ಆಯಾಮ. ಮತ್ತೊಂದೆಡೆ ಗ್ರಾಮೀಣ ಕುಟುಂಬಗಳೂ ಸಹ ಹತ್ತಿರದ ಪಟ್ಟಣಗಳಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳಿಂದ ಆಕಷರ್ಿತರಾಗಿ ಒಂದನೆ ತರಗತಿಯಿಂದಲೇ ಮಕ್ಕಳನ್ನು ದೂರದ ಊರುಗಳಿಗೆ ಕಳುಹಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಬಸ್ಸು ಏರಲೂ ಆಗಂದತಹ ಹಸುಳೆಗಳೂ ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾದು ನಿಂತು ತಮ್ಮ ಹೊರಲಾಗದ ಹೊರೆಯಂತಿರುವ ಪುಸ್ತಕಗಳನ್ನು ಹೊತ್ತು ನಿತ್ಯ ಓಡಾಡುವುದನ್ನು ನೋಡಿದರೆ, ಸಕರ್ಾರ ಏಕೆ ಈ ಹಳ್ಳಿಗಳಲ್ಲೇ ಜನತೆಗೆ ಅಗತ್ಯವಾದ ಶಿಕ್ಷಣವನ್ನು ನೀಡಬಾರದು ಎನಿಸದಿರುವುದಿಲ್ಲ. ಇನ್ನು ಕೆಲವು ದೊಡ್ಡ ಗ್ರಾಮಗಳಲ್ಲಿ ಸಕರ್ಾರಿ ಶಾಲೆಗಳಿದ್ದರೂ ರಾಜಕೀಯ ಒತ್ತಡಗಳಿಗೆ ಮಣಿದು ಖಾಸಗಿ ಶಾಲೆಗಳಿಗೆ, ಅನುದಾನಿತ ಶಾಲೆಗಳಿಗೆ ಅನುಮತಿ ನೀಡುವ ಮೂಲಕ ಮಕ್ಕಳನ್ನು ಸಕರ್ಾರಿ ಶಾಲೆಗಳಿಂದ ವಿಮುಖರನ್ನಾಗಿ ಮಾಡಲಾಗುತ್ತಿದೆ. ಈ ವಿದ್ಯಮಾನವನ್ನು ಆಂಗ್ಲ ಭಾಷಾ ವ್ಯಾಮೋಹ ಎನ್ನುವುದಕ್ಕಿಂತಲೂ, ಶಾಲಾ ಶಿಕ್ಷಣದಲ್ಲಿನ ತಾರತಮ್ಯಗಳು ಮತ್ತು ಪಠ್ಯಕ್ರಮದಲ್ಲಿ ಕಂಡುಬರುವ ತಾರತಮ್ಯಗಳ ಪರಿಣಾಮ ಎಂತಲೂ ಹೇಳಬಹುದು. ಉದಾಹರಣೆಗೆ ಸಿಬಿಎಸ್ಇ ಅಥವಾ ಸೆಂಟ್ರಲ್ ಸಿಲಬಸ್ ಎಂದಾಕ್ಷಣ ತಮ್ಮ ಮಕ್ಕಳು ಬಹಳ ಬುದ್ಧಿವಂತರಾಗುತ್ತಾರೆ ಎಂಬ ಒಂದು ಭ್ರಮೆ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಆ ಕಾರಣಕ್ಕಾಗಿಯೇ ಸ್ಟೇಟ್ ಸಿಲಬಸ್ ಇರುವ ಸಕರ್ಾರಿ ಶಾಲೆಗಳನ್ನು ಮಧ್ಯಮ ವರ್ಗಗಳು ಅಸಡ್ಡೆಯಿಂದ ಕಾಣುತ್ತವೆ. ಇದೇ ಪ್ರವೃತ್ತಿ ಗ್ರಾಮೀಣ ಪ್ರದೇಶಗಳಿಗೂ ಹರಡಿದ್ದು , ಸೆಂಟ್ರಲ್ ಸಿಲಬಸ್ ಇಲ್ಲದಿದ್ದರೂ ಪಟ್ಟಣದಲ್ಲಿನ ಖಾಸಗಿ  ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ, ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರೌಢಿಮೆ ಇರುತ್ತದೆ ಎಂಬ ಭ್ರಮೆ ಗ್ರಾಮಸ್ಥರನ್ನು ಆವರಿಸಿರುತ್ತದೆ. ಈ ಭ್ರಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯಾವುದೇ ಸಕರ್ಾರವೂ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ನಿಸ್ಸಂಶಯವಾಗಿ ಹೇಳಬಹುದು. ಹಾಗಾಗಿ ಗ್ರಾಮಗಳಲ್ಲಿನ ಶಾಲೆಗಳು ವಿದ್ಯಾಥರ್ಿಗಳಿಲ್ಲದೆ ಸೊರಗುತ್ತವೆ. ಈ ಸಮಸ್ಯೆಗಳಿಗಿಂತಲೂ ಗ್ರಾಮಸ್ಥರಲ್ಲಿ ಕಾಡುವ ಬಡತನ ಮತ್ತು ಗ್ರಾಮೀಣ ಕುಟುಂಬಗಳಲ್ಲಿ ಮಕ್ಕಳನ್ನೂ ತಮ್ಮ ಹೊಲಗದ್ದೆಗಳಲ್ಲಿ, ಜಾನುವಾರು ಸಾಕಣೆಗೆ ಬಳಸಿಕೊಳ್ಳುವ ಪ್ರವೃತ್ತಿ ಅನೇಕ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತವೆ.

ವಿಲೀನಗೊಳಿಸುವ ಕುತಂತ್ರಈ ಸಮಸ್ಯೆಗಳ ಪರಿಹಾರ ಇರುವುದು ವಿಲೀನಗೊಳಿಸುವುದು ಅಥವಾ ಶಾಲೆಗಳನ್ನು ಮುಚ್ಚುವುದರಲ್ಲಿ ಅಲ್ಲ. ಮೂರು ಸಾವಿರ ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಐದಕ್ಕಿಂತಲೂ ಕಡಿಮೆ ಇದೆ ಎಂದರೆ ಸಕರ್ಾರ ಈ ಶಾಲೆಗಳಲ್ಲಿ ದಾಖಲಾತಿ ಮತ್ತು ಹಾಜರಾತಿಗಳನ್ನು ಹೆಚ್ಚಿಸುವ ಪ್ರಯತ್ನವನ್ನೇ ಮಾಡಿಲ್ಲವೆಂದೇ ಅರ್ಥ. ಏಕೆಂದರೆ ಆದಿವಾಸಿಗಳ ತಾಂಡ ಅಥವಾ ಹಾಡಿಗಳನ್ನು ಹೊರತುಪಡಿಸಿದರೆ, ಶಾಲೆಗೆ ಹೋಗುವ ಐದು ಮಕ್ಕಳೂ ಇರದಂತಹ ಪುಟ್ಟ ಗ್ರಾಮಗಳು ಬಹಳ ವಿರಳ. ಮಲೆನಾಡಿನ ಪ್ರದೇಶಗಳಲ್ಲಿ ಒಂದು ಊರಿಗೆ ಒಂದೇ ಮನೆ ಇರುವುದರಿಂದ ಈ ಸಮಸ್ಯೆ ಉದ್ಭವಿಸಬಹುದು. ರಾಜ್ಯದ ಇತರ ಗ್ರಾಮಗಳಲ್ಲಿ ಶಾಲೆಗೆ ಹೋಗಲು ಅರ್ಹರಾದ ಮಕ್ಕಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ಮಕ್ಕಳನ್ನು ಶಾಲೆಗೆ ಹೋಗುವಂತೆ ಅಥವಾ ಪೋಷಕರನ್ನು ಮಕ್ಕಳಿಗೆ ಶಿಕ್ಷಣ ನೀಡುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಕರ್ಾರ ಕ್ರಮ ಕೈಗೊಳ್ಳುತ್ತಿಲ್ಲ. ಅಥವಾ ಹೊರ ಊರುಗಳಿಗೆ ಮಕ್ಕಳನ್ನು ಕಳುಹಿಸದಂತೆ ಪ್ರೇರೇಪಿಸಿ, ತಂತಮ್ಮ ಗ್ರಾಮಗಳಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಭರವಸೆಯನ್ನು ಸಕರ್ಾರ ಗ್ರಾಮಸ್ಥರಿಗೆ ನೀಡಲು ಸಿದ್ಧವಾಗಿಲ್ಲ.ಪರಿಣಾಮ ಸಕರ್ಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಬಿಜೆಪಿ ಸಕರ್ಾರ ಕಂಡುಕೊಂಡಿರುವ ಪರಿಹಾರ ಎಂದರೆ ಶಾಲೆಗಳನ್ನೇ ಮುಚ್ಚಿ ಹಾಕುವುದು. ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಸಕರ್ಾರ ತನ್ನ ನಿಧರ್ಾರವನ್ನೇನೋ ಬದಲಿಸಿತು. ಆದರೆ ಶಾಲೆಗಳನ್ನು ಮುಚ್ಚುವದರ ಬದಲು ಮತ್ತೊಂದು ಶಾಲೆಯೊಡನೆ ವಿಲೀನಗೊಳಿಸುವ ನಿಧರ್ಾರಕ್ಕೆ ಬರಲಾಯಿತು. ಈ ಎರಡೂ ಕ್ರಮಗಳ ನಡುವೆ ವ್ಯತ್ಯಾಸವೇನು ಎಂಬುದನ್ನು ಮಾನ್ಯ ಶಿಕ್ಷಣ ಸಚಿವರೇ ಹೇಳಬೇಕು. ಒಂದು ಕಾಲದಲ್ಲಿ ನಮ್ಮೂರಿನಲ್ಲಿದ್ದ ಶಾಲೆ ಈಗ ಇಲ್ಲವೆಂದ ಮೇಲೆ ಅದು ವಿಲೀನವಾದರೇನು, ಮುಚ್ಚಿಹೋದರೇನು ? ಪತ್ನಿಯಿಂದ ಶಾಶ್ವತವಾಗಿ ದೂರ ಉಳಿಯುವ ಪತಿ ವಿಚ್ಚೇದನ ಪಡೆದರೂ ಒಂದೇ, ಮರುವಿವಾಹವಾದರೂ ಒಂದೇ, ಕೌಟುಂಬಿಕ ಜೀವನದಿಂದ ವಂಚಿತಳಾದ ಆ ಪತ್ನಿಯ ಪರಿಸ್ಥಿತಿಯೇನೂ ಬದಲಾಗುವುದಿಲ್ಲ. ಕನರ್ಾಟಕ ಸಕರ್ಾರದ ಕ್ರಮವೂ ಇದೇ ಆಗಿದೆ.ಸಕರ್ಾರಿ ಶಾಲೆಗಳನ್ನು ಮುಚ್ಚುವುದು ಅಥವಾ ವಿಲೀನಗೊಳಿಸುವುದು ಖಾಸಗೀಕರಣದ ಒಂದು ವಿಶಿಷ್ಟ ಆಯಾಮವಷ್ಟೆ. ಉಚಿತ ಕಡ್ಡಾಯ ಸಾರ್ವತ್ರಿಕ ಶಿಕ್ಷಣ ಒದಗಿಸುವ ತಮ್ಮ ಸಾಂವಿಧಾನಿಕ ಕರ್ತವ್ಯವನ್ನೇ ಮರೆತ ಆಳುವ ವರ್ಗಗಳಿಗೆ ಶಿಕ್ಷಣ ಒಂದು ಹೊರೆಯಾಗಿಯೇ ಕಾಣುತ್ತಿರುವುದು ನವ ಉದಾರವಾದದ ಪರಿಣಾಮವಾಗಿಯೇ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಪಠ್ಯಕ್ರಮದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಲೇ ಸಮಾಜದಲ್ಲಿ ಈಗಾಗಲೇ ಬೇರೂರಿರುವ ಮೇಲು ಕೀಳುಗಳ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಆಳುವ ವರ್ಗಗಳ ಹುನ್ನಾರವನ್ನು ರಾಜ್ಯ ಸಕರ್ಾರದ ಈ ಕ್ರಮದಲ್ಲಿ ಕಾಣಬಹುದಾಗಿದೆ. ಇದನ್ನು ಬೌದ್ಧಿಕ ದಾರಿದ್ರ್ಯತೆ ಎನ್ನದೆ ಮತ್ತೇನನ್ನಲು ಸಾಧ್ಯ ?

‍ಲೇಖಕರು avadhi

9 November, 2011

1 Comment

  1. D.RAVIVARMA

    ಸರ್ ,ನಿಮ್ಮ ಲೇಖನ ಓದಿದೆ, ಸರಕಾರ ಎನ್ನುವುದು ಒಂದು ಶೂಳೆ ಇದ್ದ ಹಾಗೆ ,ಅದಕ್ಕೆ ದುಡ್ಡು ಕೊಡುವವರು ಬೇಕು ,ಅವರು ಯಾರಾದರೇನು,ಹೇಗಿದ್ದರೇನು, ನಮ್ಮ ಮನೆಗೆ ಪೇಪರ್,ಹಾಲು ಹಾಕುವ,ಅಸ್ತೆ ನಮ್ಮ ಬಟ್ಟೆಗಳನ್ನು ಒಯ್ಯ್ವ ಎಲ್ಲರು ಹುಡುಗರೇ ,ಆದರೆ ಅವರಿಗೆ ಶಾಲೆಗೆ ಕಲಿಸುವ ತಕತ್ತಿಲ್ಲದೆ ಅವರ ತಂದೆ,ತಾಯಂದಿರು,ತಮ್ಮೆಲ್ಲ ಆಶಯಕತ್ಯೆ ,ನೋವು,ಹಳಹಳಿಕೆ ಎಲ್ಲ ಬದಿಗಿಟ್ಟು ಅವರನ್ನು ಕೆಲಸಕ್ಕೆ ಕಲಿಸಿಕೊದ್ತಾರೆ .ಅವರ ಕಮಸುಗಳನ್ನು,ಆಶಯಗಳನ್ನು suttu ಹಾಕ್ತಾರೆ, ಒಮ್ಮೆ ಆಲೋಚಿಸಿ ನೋಡಿ ನಾವು ಹೋಗುವ ಹೋಟೆಲ್ಗಳಲ್ಲಿ,ಬಾರ್ಗಳಲ್ಲಿ,busstandgalalli railwaystationgalagalli , ಎಲ್ಲಕಡೆ ಹಾಲುಗೆನ್ನೆಯ ಮಕ್ಕಳು ಕೆಲಸ ಮಾಡ್ತಾರೆ ,ನನ್ನ ಬೈಕ್ puncture ,ಅದಾಗ ಪುನ್ಕ್ಟುರೆ ಅಕುವವನು ಒಬ್ಬ ಬಾಲಕ .ನನ್ನ ಗಡಿಗೆ ಪೆಟ್ರೋಲ್ ಹಾಕುವವನು ಒಬ್ಬ ಬಾಲಕ , ಮನೆಗೆ ತರಕಾರಿ ತಂದು ಮಾರುವವಳು,ಹೂ ಮಾರುವವಳು ಒಬ್ಬ ಬಾಲಕಿ ,ಇಸ್ತೆಲ್ಲದರ ಮದ್ಯೆ ಸರಕಾರ ಇವರ ಹೆಸರುಗಳನ್ನೂ ಶಾಲೆಗೆ ಸೇರಿಸಿ ಇವರ ಹೆಸರಲ್ಲಿ ದುಡ್ಡು ತಿಂದು ತೇಗುವ ಶಿಕ್ಷಕರು ,ಅದಿಕಾರಿಗಳು, ಎಲ್ಲ ಅಸ್ಯ ಬರಿಸುವಸ್ಟು,ಮಕ್ಕಳ ಹೆಸರಲ್ಲಿ ನಡೆಯುವ ಸಾಮಾಜಿಕ ಸೇವಾ ಸಂಸ್ಥೆಗಳ ಅವ್ಯವಹಾರ, ಇದನ್ನೇ bandavalamadikolluva ,samstegagalu , ಹೂ ವಿಲ್ ಸಾಲ್ವೆ ದಿಸ್ ಪ್ರಾಬ್ಲಮ್ ನನಗೆ ಈ ಸಮಯದಲ್ಲಿ ಒಂದು ಹಾಡು ನೆನಪಿಗೆ ಬರ್ತಿದೆ
    ಹಳ್ಳಿಗಾಡ ಹಸು ಗೂಸೆ ,ಹಸುಕಯೋ ಧೀರ ಬಲನೆ ,ಹಾಲು ಕುಡಿದು ದಿನವೆಸ್ತಯಿತೋ
    ಓ ಹಾಲು ಗೆನ್ನೆಯ ಜೀತಗರ ,ಜೀತ ಸೇರಿ ದಿನವೆಸ್ತಯಿತೋ ,
    ಸಾಲು ,ಸಲದ ಚಿಂದಿ ಅಂಗಿ,ಬಿಸೋ ಗಾಳಿಗೆ ಪಕ್ಕ ಸರಿದೂ ,
    ಚಲಿಗಳಿಗೆ ಬೆನ್ನು ಕೊಟ್ಟೆಯಾ ,ಓ ಹಾಲು ಗೆನ್ನೆಯ ಜೀತಗರ ,ಚಳಿಗೆ ನೀನು ಮುದುರಿ ಹೊಡೆಯ ,
    ಅದವಿಯೋಳಗಣ ದುಸ್ತಪ್ರಾಣಿ ಗುಂಪುಗಟ್ಟಿ ಹಿಂದೆಬೀಳಲು ಓದಲಾರದೆ ಎಡವಿ ಬಿದ್ದೆಯ
    ಓ ಹಾಲು ಗೆನ್ನೆಯ ಜೀತಗಾರ ,ಈ dustarakuta ಅಳಿಯಯಲಿ ಎನ್ನುವೆಯ .
    ಗುರುವೇ ನಾನು ನಿಮ್ಮ ಹಾಗೇ ಒಬ್ಬ ಬರ್ಹಗರನಲ್ಲ ಬಟ್ ನನಗೆ ಇಲ್ಲಿ ಸಮಾಜದಲ್ಲಿ ಬದಲಾವಣೆ ಬೇಕು,ನಾವೆಲ್ಲ ಮನುಸ್ಯರಾಗಿ,ಬದುಕಬೇಕು,ಹಾಗೆ ನಮ್ಮ ಸುತ್ತಲಿನ ಸಮಾಜದ ಬದುಕಿಗೂ ಸ್ಪಂದಿಸಬೇಕು, ನಮ್ಮ ಇರುವಿಕೆ ,ಅರ್ಥ ಪೂರ್ಣ ವಾಗಿರಬೇಕು, ನಿಮಗೂ,ನಿಮ್ಮ ಚಿಂತನೆಗೂ ನಮಸ್ಕಾರ
    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading