ಹೂವು
ಹೊಸ ಮನೆಯ ಕಾಪೊಂಡಿನಲ್ಲೊಂದು
ಬೋಳು ಗಿಡ ..
ಉಳಿದಿತ್ತು ಒಂದೆರೆಡೆಲೆ
ನಸು ಹಳದಿ ತಿಳಿಹಸಿರು
ಕಿತ್ತೆಸೆಯಬಹುದಿತ್ತು ..
ಹೆಚ್ಚೆಂದರೆ ಅದೊಂದು ಬೇಡದ ಕಳೆ ..
ಆದರೂ ಉಳಿಸಿಕೊಂಡೆ ..
ಚಿಗುರಬಹುದೆಂದು ಮುಂದೆ
ಕೊಡಬಹುದು ಇಲ್ಲಿಗೊಂದು ಕಳೆ
ಒಂದಿಷ್ಟು ಪ್ರೀತಿ ,ಅಕ್ಕರೆಯ ಆರೈಕೆ
ಮೆಲ್ಲನೊಂದು ನೇವರಿಕೆ..
ಪ್ರತಿ ಬದುಕಿನ ಬೇಡಿಕೆ
ಹುಲ್ಲೋ ಕಲ್ಲೋ ನದಿಯೋ ನಾನೋ
ಪ್ರೇಮ ಸಂಚಲನೆ ಬೇಕು ….
ಜೀವ ಜೀವಕೆ ..
ಪ್ರತಿ ಸಂಜೆ ನೀರು ಕೊಟ್ಟೆ
ಮೇಲಿಷ್ಟು ಪುಡಿ ಗೊಬ್ಬರ
ಕಾದ ನೆಲ ಕ್ಷಣದಲ್ಲಿ ಹೀರಿತ್ತು ..
ಗಿಡ ನಕ್ಕಿತ್ತು ಎಲೆಯಲುಗಿಸಿ
ಕಾಲ ಕೆಳಗೆ ತಂಪುನೆಲ ..
ಎದೆಯೊಳಗೆ ಸಡಗರ ..
ಸೂರ್ಯ ಮುಳುಗಿ ಚಂದ್ರ ಹುಟ್ಟಿ
ಬೆಳಕು ಹರಿದು ಇರುಳು ಕಳೆದು
ಹಣ್ಣೆಲೆ ಉದುರಿ
ಗಾಢ ಹಸಿರೆಲೆ ಚಿಮ್ಮಿ ,
ಮೊಗ್ಗು ಹೊತ್ತ ಗಿಡ ನಳನಳಿಸಿತು
ಮುದುಡಿದ ಮೈ ಮನ
ಅರಳಲು ಬೇಕು ಒಂದಷ್ಟು ಒಲವ ಹನಿ
ಇಷ್ಟಿಷ್ಟೇ ಕಣ್ಣುತೆರೆದು
ಬೆಳಕು ನೋಡುವ ಮೊಗ್ಗು
ಗಿಡಕೆ ಬಸಿರು ಭಾರ
ಒಳಗೊಳಗೇ ಹಿಗ್ಗು
ಒಂದಿಷ್ಟೂ ಸದ್ದಾಗಲಿಲ್ಲ
ಪಕಳೆಗಳೆಲ್ಲ ಬಿಚ್ಚಿಕೊಂಡು
ಯೌವನದ ಪರಿಮಳ
ಸುತ್ತೆಲ್ಲ ಚೆಲ್ಲಿ ..
ಗಾಳಿ ,ಬಿಸಿಲು, ಚಂದ್ರ ,ಮಂಜು
ಮೈಸವರಿ ಮಾತಾಡಿಸಿ ಹೋದದ್ದು
ಕೂಡ ಸದ್ದಾಗಲಿಲ್ಲ ..
ಅರಳಿತ್ತು ನಂದಬಟ್ಟಲು
ಹೂ ಅರಳುವುದು ಹೇಗೆ ..
ಸದ್ದೇ ಆಗದ ಹಾಗೆ ..
ಯಾರೂ ಕಾಣದ ಹಾಗೆ ..
ಕಂಡೂ ತಿಳಿಯದ ಹಾಗೆ ..?
ಮನಸು ಮಾತಿಗೆ ಬಿತ್ತು ….
ಹೌದು ,ಬಿರಿಯುವಾಗಿನ
ಸುಖವೂ ನೋವೂ
ಹೂವಿಗಷ್ಟೇ ಗೊತ್ತು .








ಹೌದು ,ಬಿರಿಯುವಾಗಿನ
ಸುಖವೂ ನೋವೂ
ಹೂವಿಗಷ್ಟೇ ಗೊತ್ತು …..tumbaa arthapurnavaaggide…aste alla manamuttuvante…haagu ondistu hosa kushiniduvantide…
ಪದ್ಯ ಹೂ ಅರಳಿದಷ್ಟೇ ಸುಂದರ
ಇಷ್ಟಿಷ್ಟೇ ಕಣ್ಣುತೆರೆದು
ಬೆಳಕು ನೋಡುವ ಮೊಗ್ಗು
ಗಿಡಕೆ ಬಸಿರು ಭಾರ
ಒಳಗೊಳಗೇ ಹಿಗ್ಗು
channagide heege saahitya krushi munduvariyali
huvinste mrudu salugalu kvite chennagide
Kavitheya mruduthva ishtavaayithu..
chennagide.sundara kavite
Maneya asundarate, manada vyakulate kaleyalu boolu gida chigurisuvudu kavayatriya sankalpa. adu siddiside. prati vastava badukinallu astitva ulisikollodu anivarya. illi mane, mana. hoo e murara ulike pritiyinda.. G.S.S. ra “priti illada mele” mattu itare kavitegala chaye ivaralli kanuttade. rachane(Form)gamanisuvantide.
Shanthiji, your poem is very simple, that is why it is beautiful. I know it is very difficult to write the poems which looks very simple,but having it’s serious inner meaning and at the same time it is understandable to all. It is evident in this poem that you know the ‘magic’ of writing good kannada poems.keep on writing,I am expecting much more poems,that can change the direction of kannada poetry from your pen. Don’t disappoint me
super