ಶಾಂತಲಾ ಭಂಡಿ
ಪ್ರೀತಿ ಎಂದರೆ ಮಾತಲ್ಲ ಮೌನವೂ ಅಲ್ಲ ಏಕೆಂದರೆ ಪ್ರೀತಿ ಎಂದರೆ ಅರ್ಥವೂ ಅಲ್ಲ ಸಮ್ಮತಿಯೂ ಅಲ್ಲ ಪ್ರೀತಿ ಎಂದರೆ ತನ್ನೊಳಗಿನ ಪಿಸುಪಿಸು ಮತ್ತೊಬ್ಬರ ಗುಸುಗುಸು ಪ್ರೀತಿ ಎಂದರೆ ನಂಬಿಕೆ ಆದರೆ ವಿಶ್ವಾಸವಲ್ಲ
ಪ್ರೀತಿ ಎಂದರೆ
ಮೋಸ
ಆದರೆ ವ್ಯಭಿಚಾರವಲ್ಲ
ಪ್ರೀತಿ ಎಂದರೆ
ಕಲ್ಪನೆ
ಆದರೆ ಭ್ರಮೆಯಲ್ಲ
ಪ್ರೀತಿ ಎಂದರೆ
ಇಬ್ಬರ ಸ್ವಂತದ
ಒಂದೇ ವಾಹನ
ಪ್ರೀತಿ ಎಂದರೆ
ಸರಾಗ ಪಯಣದ
ಜೊತೆಜೊತೆ ಕಾಲ್ನಡಿಗೆ
ಪ್ರೀತಿ ಎಂದರೆ
ಯಾರೋ ಬರೆದಿಟ್ಟ
ಸಂಭಾಷಣೆಯಲ್ಲ
ಪ್ರೀತಿ ಎಂದರೆ
ಬ್ರೆಕೆಟ್’ನಲ್ಲಿ ಬರೆದಿಡಬೇಕಾದ
ಇಬ್ಬರ ಸ್ವಗತ
ಪ್ರೀತಿ ಎಂದರೆ
ಬರಿಯ
ವ್ಯಾಕರಣದ ನಾಮಪದವಲ್ಲ
ಪ್ರೀತಿ ಎಂದರೆ
ಸಕ್ರಿಯ
ಕ್ರಿಯಾಪದ
ಪ್ರೀತಿ ಎಂದರೆ
ಆಗಮ ಸಂಧಿ
ಲೋಪಸಂಧಿ
ಆದರೆ ಪ್ರೀತಿ ಎಂದರೆ
ಆದೇಶಸಂಧಿ
ಅಲ್ಲವೇ ಅಲ್ಲ
ಪ್ರೀತಿ ಎಂದರೆ
ಸದಾ
ಜೋಗುಳವಲ್ಲ
ಪ್ರೀತಿ ಎಂದರೆ
ಎಗ್ಸಾಮ್ ದಿನದ
ನಸುಕಿನ ಅಲಾರ್ಮ್
ಪ್ರೀತಿ ಎಂದರೆ
ಅಮ್ಮ ಐರನ್ ಮಾಡಿದ
ನಮ್ಮ ಸೆಲ್ವಾರ್ ಅಲ್ಲ
ನಾವೇ ಇಸ್ತ್ರಿ
ಮಾಡಬೇಕಾದ
ಅಪ್ಪನ ಶರ್ಟು
]]>






ಪ್ರೀತಿಯ ವರ್ಣನೆ ಚೆನ್ನಾಗಿದೆ ಮೇಡಂ , ಧನ್ಯವಾದಗಳು
Good Imagination