ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರೀಪ್ ಹಸಮಕಲ್ ಗೆ ಸೃಷ್ಟಿ ಕಾವ್ಯ ಪುರಸ್ಕಾರ…

೨೦೨೨ನೇಯ ಸಾಲಿನ “ಸೃಷ್ಟಿ ಕಾವ್ಯ ಪುರಸ್ಕಾರ” ಪ್ರಶಸ್ತಿಗೆ ಕವನ ಮತ್ತು ಗಜಲ್ ಸೇರಿ ೬೭ ಸಂಕಲನಗಳು  ಬಂದಿದ್ದವು. ಆಯ್ಕೆಗೆ ಅಂತಿಮ ಸುತ್ತಿನ ಆರು ಕವನ ಮತ್ತು ಗಜಲ್ ಸಂಕಲನಗಳ ತೀರ್ಪುಗಾರರಾಗಿ ನಾಡಿನ ಕವಿಗಳು, ಕಥೆಗಾರರು ಹಾಗೂ ವಿಮರ್ಶಕರಾದ ಡಾ.ಜಾಜಿ ದೇವೇಂದ್ರಪ್ಪ ಹಾಗೂ ಕವಿಗಳು, ವಿಮರ್ಶಕರಾದ ಡಾ. ವಿಕ್ರಮ ವಿಸಾಜಿ ಅವರು ಆರು ಕೃತಿಗಳ ಮೌಲ್ಯಮಾಪನದ ನಂತರ ಕವಿಗಳು,ಗಜಲ್ ಕಾರರಾದ ಡಾ. ಶರೀಫ್ ಹಸಮಕಲ್ ಅವರ “ಕಣ್ಣ ಬೊಗಸೆಯಲ್ಲಿ” ಗಜಲ್ ಸಂಕಲನವನ್ನು ೨೦೨೨ ನೇ ಸಾಲಿನ ರಾಜ್ಯ ಮಟ್ಟದ “ಸೃಷ್ಟಿ ಕಾವ್ಯ ಪುರಸ್ಕಾರ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರ ಈ ಗಜಲ್ ಸಂಕಲನಕ್ಕೆ ೩೦೦೦ ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.


ಅಂತಿಮವಾಗಿ ತೀವ್ರ ಸ್ಪರ್ಧೆಯೊಡ್ಡಿದ ಕೃತಿಗಳೆಂದರೆ..

 ೨. ಬಟ್ಟೆಗಂಟಿದ ಬೆಂಕಿ – ವಿಶಾಲ್ ಮ್ಯಾಸರ್
೩.ನಡು ಮಧ್ಯಾಹ್ನದ ಕಣ್ಣು -ಆಶಾ ಜಗದೀಶ್ 
೪.ಸಂತೆಯೊಳಗೆ ಸಿಕ್ಕ ಬುದ್ಧ -ಅಭಿಷೇಕ ಬಳೆ ಮಸರಕಲ್
೫.ಎದೆ ನೆಲದ ಕಾವು -ಡಾ. ರತ್ನಾಕರ ಸಿ. ಕುನುಗೋಡು
೬.ಆಸೆಯೆಂಬ ಶೂಲದ ಮೇಲೆ – ಶ್ರೀ ದೇವಿ ಕೆರೆಮನೆ

‍ಲೇಖಕರು avadhi

12 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading