ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಬ್ದದ ತೇರ ಎಳೆಯುತ್ತದೆ..

ವಿದ್ಯಾ ಭರತನಹಳ್ಳಿ

ಶಬ್ದದ ಗಲಾಟೆಯಲ್ಲಿ
ಮೌನ ಹುಡುಕಬೇಕಿದೆ
ಕೇಳುವ ಕಿವಿಗಳಿಲ್ಲದಿದ್ದರೂ
ಈ ಬೀದಿಯಲ್ಲಿನ ಧೂಳು
ಕೂಡ ಶಬ್ದದ ತೇರ ಎಳೆಯುತ್ತದೆ.

ಈ ಹೂವು ಹೇಳಿತು
ನೀನು ಕೂಡ ಧ್ವನಿ ಸೇರಿಸು
ತುತ್ತೂರಿ ಊದಿಕೊ
ಮೌನ ಮಾತಾಗಲಿ.
ಮಾತು ಪತಾಕೆಯಾಗಲಿ

ಒಮ್ಮೆ ರಪ್ಪೆಂದು ಬೀಸಿ
ಬೀಸಿ ಹೊಡೆವಂತೆ,
ಮುಖಕ್ಕೊಂದು ಮುತ್ತನಿಟ್ಟಂತೆ
ಮುನಿಸಿಕೊಂಡಂತೆ
ಮೂಗೊಳಗೆ ಅತ್ತರ ಕೊಟ್ಟಂತೆ
ಅಥವ ನನ್ನ ಕಾಲ ಬಳಿ ಕುಳಿತು
ಸುದ್ದಿ ಹೇಳುವಂತೆ!

ಕೇಸರಿ,ಬಿಳಿ, ಹಳದಿ, ಕೆಂಪು
ಜಾಂಬಳಿ, ಗುಲಾಬಿ
ತರಹೇವಾರಿ ಮಾತು ಬಣ್ಣಗಳು.
ಕುಚ್ಚಣೆಯ ಮಾತಲ್ಲಿ
ಚುಚ್ಚುವವರು, ಚಚ್ಚುವವರು.
ಕಂಡ ಬಣ್ಣಕ್ಕೂ, ನಿಜದ ಬಣ್ಣಕ್ಕೂ
ಅಂತರಬಹಿರಂತರ.

ನಿನ್ನೊಂದಿಗೆ ಮಾತು ಬಿಚ್ಚಿ
ನಿರಾಳವಾಗಿ ಹಗುರಾಗಿಬಿಡಬಹುದು
ನನ್ನೊಳಗೂ ಹೊರಗೂ
ಒಂದೇ ಬಣ್ಣವೆಂದು ,ನಿನ್ನಂತೆ
ನಾನೆಂದು. ಎದೆಯಲ್ಲಿ
ಹೂವು
ಅರಳಲಿ ಎಂದು!!

 

‍ಲೇಖಕರು avadhi

4 February, 2020

5 Comments

  1. Lalitha Belagere

    Vidya Super Kavana Touching lines Really your Kavana talks so true please do write Don’t give gaps Love you

  2. Rekha Bhat

    Beautiful Kavana Vidyakka..

  3. Priyadarshini Shettar

    Beautiful poem mam. Enjoyed reading it…

  4. Anant Vaidya Yellapur

    Akka. The beautiful poem.

  5. Kotresh

    ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading