ಶಂಕರ್ ನಾಗ್ ಕ್ಲಿಕ್ಕಿಸಿದ ಫೋಟೋಗಳು..

ನಟ ಶಂಕರ್ ನಾಗ್ ತೆಗೆದ ಜನಪದ ಕಲಾವಿದ ಗೊಂದಲಿಗರ ದೇವೇಂದ್ರಪ್ಪನ ಫೋಟೋಗಳು..

ಬಳ್ಳಾರಿ ಜಿಲ್ಲೆಯ ಜಾನಪದ ವಿದ್ವಾಂಸರಾಗಿದ್ದ ಮುದೇನೂರು ಸಂಗಜ್ಜ ಅವರ ‘ಗೊಂದಲಿಗರ ದೇವೇಂದ್ರಪ್ಪನವರ ಆಟಗಳು’ ಸಂಪಾದಿತ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯು 1993 ರಲ್ಲಿ ಪ್ರಕಟಿಸಿದೆ. ಇಂದು ಈ ಕೃತಿಯನ್ನು ಕಣ್ಣಾಡಿಸುತ್ತಿದ್ದೆ.

ಸಂಗಜ್ಜರು ಮುನ್ನುಡಿಯಲ್ಲಿ ಹಿಂದೊಮ್ಮೆ ತಮ್ಮ ಬಳಿಗೆ ಬಂದಿದ್ದ ನಟ ಶಂಕರ್ ನಾಗ್ ತೆಗೆದಿದ್ದ ದೇವೇಂದ್ರಪ್ಪನ ಆಟಗಳ ಫೋಟೋ ಬಳಸಿಕೊಂಡಿರುವೆ, ಅದಕ್ಕೆ ಅರುಂಧತಿ ನಾಗ್ ಕೂಡ ಸಮ್ಮತಿಸಿದ್ದಾರೆ ಎಂದು ಕೃತಜ್ಞತೆ ಅರ್ಪಿಸಿದ್ದಾರೆ.

ಇದನ್ನು ಓದಿ ಬೆರಗಾದೆ.

ಶಂಕರ್ ನಾಗ್ ಅವರಿಗೆ ಒಬ್ಬ ನಟನಾಗಿ ಆತನಿಗಿದ್ದ ಸಂಪರ್ಕ ತಿರುಗಾಟ ಅಚ್ಚರಿ ಹುಟ್ಟಿಸುವಂತದ್ದು.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕು ಚಿಗಟೇರಿಯ ಜನಪದ ವಿದ್ವಾಂಸ ಸಂಗಜ್ಜನವರ ಬಳಿಯೂ ಶಂಕರ್ ನಾಗ್ ಸಂಪರ್ಕ ಹೊಂದಿದ್ದು ಆತನ ವಿಸ್ತಾರವಾದ ಆಸಕ್ತಿಗೆ ಸಾಕ್ಷಿಯಂತಿದೆ.

ನಾನು 2002 ರಲ್ಲಿ ಕನ್ನಡ ವಿವಿಗೆ ಎಂ.ಎ.ಮೊದಲ ವರ್ಷ ಪ್ರವೇಶ ಪಡೆದಾಗ ಕನ್ನಡ ವಿವಿಯು ಉಡುಗೊರೆಯಾಗಿ ಕೊಟ್ಟ ಪುಸ್ತಕಗಳಲ್ಲಿ ಈ ಪುಸ್ತಕವೂ ಇತ್ತು. ಹಾಗಾಗಿ ಈ ಪುಸ್ತಕ ನಾನು ಓದಿದ ಕನ್ನಡ ವಿವಿ ಪ್ರಸಾರಾಂಗದ ಮೊದಲ ಪುಸ್ತಕಗಳಲ್ಲಿ ಒಂದು..

-ಅರುಣ ಜೋಳದಕೂಡ್ಲಿಗಿ

‍ಲೇಖಕರು avadhi

July 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Nagraj Harapanahalli.karwar

    ನಾವು ಚಿಕ್ಕವರಿದ್ದಾಗ ಗೊಂದಲಿಗರು ಆಗಾಗ ಬರುತ್ತಿದ್ದರು
    . ದಕ್ಕಲಿಗರು ಕೈ ಚಳಕದ ಜಾದು ಸಹ ಪ್ರದರ್ಶಿಸುತ್ತಿದ್ದರು. ದಕ್ಕಲಿಗರು ಅಲೆ ಮಾರಿಗಳು. ಹಾಗೆ ಹೆಳವರು ಸಹ ವಂಶಾವಳಿ ಹೇಳಲು ಬರುತ್ತಿದ್ದರು. ನನ್ನ ಎರಡನೇ ತಾಯಿ ಊರಾದ ಮೈಸೂರಿನಲ್ಲಿ ಅಣ್ಣೇರು ಅಂತ ಒಂದು ಕುಟುಂಬ ವಿದೆ. ಅವರು ಆಂದ್ರದಿಂದ ವಲಸೆ ಬಂದವರು ಎಂದು ಹೆಳವರು ಹೇಳುತ್ತಿದ್ದರು. ಅಷ್ಟೇ ನನ್ನ ನೆನಪಲ್ಲಿ ಇವೆ.
    ಇನ್ನು ನಾನು ಹೈಸ್ಕೂಲ್ ಕಲಿತದ್ದು ಚಿಗಟೇರಿ ನಾರದಮುನಿ ಪ್ರೌಢಶಾಲೆಯಲ್ಲಿ. ಮುದೇನೂರು ಸಂಗಣ್ಣನವರು ನಮ್ಮ ಶಾಲೆಯ ಸಮಾರಂಭ ವೊಂದಕ್ಕೆ ಅತಿಥಿಯಾಗಿ ಬಂದಿದ್ದರು. ಅವರ ಮನೆಯಲ್ಲಿ ತುಂಬಾ ಪುಸ್ತಕಗಳಿವೆ. ಅವರು ತುಂಬಾ ಓದುತ್ತಾರೆ ಎಂಬ ಕತೆಗಳಿದ್ದವು. ಅವರು ತಂಬಾಕು ವ್ಯಾಪರ ಸಹ ಮಾಡುತ್ತಿದ್ದರು. ಸಚಿವ ಎಂ.ಪಿ.ಪ್ರಕಾಶ್ ಅವರ ಆತ್ಮೀಯ ಒಡನಾಡಿ. ಪ್ರಕಾಶ್ ಅವರು ಚಿಗಟೇರಿ ಗೆ ಬಂದಾಗಲೆಲ್ಲಾ ಸಂಗಣ್ಣ ಅವರ ಮನೆಗೆ ಭೇಟಿ ನೀಡುತ್ತಿದ್ದರು. ನನ್ನ ರಾಜಕೀಯ ಪ್ರಜ್ಞೆ ಪ್ರಾರಂಭವಾದುದು . ಅದು 1982-83 ರ ಅವಧಿ.
    ಚಿಗಟೇರಿ, ಮುದೇನೂರು ಸಂಗಣ್ಣ ಹಾಗೂ ಗೊಂದಲಿಗರನ್ನು ನೆನಪಿಸಿದ್ದಕ್ಕೆ ಗೆಳೆಯ ಅರುಣ್ ಅವರಿಗೆ, ಪ್ರಕಟಿಸಿದ ಅವಧಿಗೆ
    ಥ್ಯಾಂಕ್ಸ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: