ಶಂಕರಾನಂದ ಹೆಬ್ಬಾಳ
ಆಕ್ರೋಶದ ನುಡಿಯಿಂದ ಹೃದಯಕ್ಕೆ ಖೇದವಾಯಿತೇ ಗೆಳತಿ
ಒಲವಿನ ನಾಟಕವಾಡಿದ್ದು ಕಣ್ಣೆದುರು ಚೋದ್ಯವಾಯಿತೇ ಗೆಳತಿ
ತಹಿಕಾರನ ಅರಸಿಯಾಗುವ ಅಭಿಪ್ಸೆಯು ಕಮರಿ ಹೋಯಿತೇ
ಪ್ರೀತಿಸುವ ಮನಸಿನ ಅಂತರ್ನುಡಿಯ ಶೋಧವಾಯಿತೇ ಗೆಳತಿ
ಸ್ವೋಪಜ್ಞತೆ ತೊರೆದಿಹ ರಮಣಿಯನು ನಂಬಿದೆನಲ್ಲ ನಾನು
ತಥ್ಯವಿಲ್ಲದವಳ ಮೋಸದಿ ಸಿಲುಕಿದ್ದು ರೋಧವಾಯಿತೇ ಗೆಳತಿ

ಕ್ರೋಧದ ಹರಿಣಿಯ ಸಂಗವಿದು ಒಡಲು ಘಾಸಿಗೊಂಡಿತೆ
ವೇದನೆಯು ಮುರಿದ ವೀಣೆಯಲ್ಲಿನ ನಾದವಾಯಿತೇ ಗೆಳತಿ
ತಿಳಿಗೇಡಿ ತೆರದಲ್ಲಿ ಕುಟಿಲಬುದ್ದಿಯನು ಆಶ್ರಿಯಿಸಿದೆನಲ್ಲ
ಅಭಿನವನೆದುರು ಸತ್ಯವು ಗೆಲ್ಲದಿರುವ ವಾದವಾಯಿತೇ ಗೆಳತಿ






0 Comments