ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈಶಾಲಿ ಹೆಗಡೆ ಬರೆದ ಎರಡು ಕಿರುಗವಿತೆಗಳು

ವೈಶಾಲಿ ಹೆಗಡೆ


ಮೆತ್ತನೆಯ ಕುಸುರಿನ ತಿಳಿ ನೀಲಿ ಶಾಲು
ಉದ್ದವೋ ಅದೋ ಒಂದೂವರೆ ಮೈಲು
ಅಂಚಿನ ನೂಲುಗಂಟನು ಹಿಡಿದ ನಾನು
ಆ ತುದಿಯಲ್ಲಿ ಮಡಚುತ್ತ ನಡೆಯುತ್ತ
ಮತ್ತೆ ನಡುನಡುವೆ ನಿಲ್ಲುವ ನೀನು
ನಡುವೆ ಸಿಕ್ಕಾಗ ಬೆರಳಾದರೂ ಸೋಕೀತೆಂದು ಹೂ ಅಂದೆ
ನೀನೋ ಮಡಿಕೆ ಸರಿಯಿಲ್ಲ, ಪದರ ನೇರಿಲ್ಲ ಎನ್ನುತ
ಮತ್ತೆ ಬಿಡಿಸುತ್ತ ಕೊಡವುತ್ತ ..
ಇದು ಇಷ್ಟೇ ಎಂದು ಹೇಳಿಬಿಡು ಸುಮ್ಮನೆ
ಮಡಚುವ ಆಟದಲ್ಲಿ ಬೆರಳು ತಾಕುವುದಿಲ್ಲ ಎಂದು

**

ಕಲ್ಲಗುಡುಗಿನ ಸಪ್ಪಳವ ಮೀರಿಸಿದಂತೆ ಒಡಲಿನದನಿ
ಹೊರಬಿದ್ದಾಗ ನಿರ್ವಾಣ ಮೌನ
ಚೂರು ಚೂರೇ ಬಿರುಕಿಸಿ
ಹರಿದ ಹರಿವಿಗೆ ಕಟ್ಟು ಕಟ್ಟುವ


ನನ್ನಾತ್ಮವನು ಬಿಗಿದಿಟ್ಟ ನಿನ್ನ ಯಾಚನೆ
ಕಾರ್ಗಾಲ ಮಳೆಯ ಇಂಬಳದಂತ


ನಿನ್ನ ಒಲವು
ನಾಳಹರಿದು ನೆತ್ತರ ಬಸಿದರೂ ಗೊತ್ತಾಗದು ನೋಡು
ಬಿಚ್ಚಿಟ್ಟ ಗೆಜ್ಜೆ ಯಲಿ ಉಳಿದ ಒಂದು ಕಿಂಕಿಣಿ ಮಾತ್ರ
ಬೇರೇನೋ ಹುಡುಕುವಾಗ ತಾಕಿ ಸಣ್ಣಗೆ ಘಂಟಿಸುವುದು
ಕಿರುಬೆರಳಿನ ಕಿಲ್ಲುಗುರೆದ್ದಂತ ನಿನ್ನ ಪ್ರೀತಿಯ ರೀತಿ
ಎಳೆದಂತೆಲ್ಲ ಹೊಕ್ಕುಳ ಸಂದಿಯಿಂದ ಚುಚ್ಚುವ ಸೆಳಕು

‍ಲೇಖಕರು G

3 July, 2015

7 Comments

  1. Anonymous

    ತುಂಬಾ ಇಷ್ಟವಾಯಿತು ಕವಿತೆ
    ಸಂಗೀತ ರವಿರಾಜ್

    • ಅಕ್ಕಿಮಂಗಲ ಮಂಜುನಾಥ

      ಎರಡು ಕಿರುಗವಿತೆಗಳೂ ಚೆನ್ನಾಗಿವೆ.

  2. bidaloti Ranganath

    ಕವಿತೆ ಚನ್ನಾಗಿದೆ

  3. noorullathyamagondlu

    ಚೆನ್ನಾಗಿದೆ.

  4. mmshaik

    uttama kavitegaLu..

  5. Rohini Satya

    “Madachuva aatadalli beralu taaguvudilla saameepya doorada prateekavaagi kavite chennaagi moodibandide

  6. Anonymous

    Awesome!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading