ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೇಮುಲ ಎಂಬ ನೀಲಿನಕ್ಷತ್ರ

ಎನ್.ರವಿಕುಮಾರ್ ಟೆಲೆಕ್ಸ್

ನನ್ನ ’ನೀಲಿನಕ್ಷತ್ರ’ ಉರಿದುಹೋಯಿತು
ನಟ್ಟನಡುವಿನಲ್ಲಿ
ನಿಂತ ನಿಲುವಿನಲ್ಲೆ
ಸುಟ್ಟು ಕೊಂದರು….

ಬಾಳಬೇಕಿತ್ತು
ಬೆಳಗಬೇಕಿತ್ತು
ಜಗತ್ತಿನ ಕತ್ತಲಿಗೆ ಕಂದೀಲು ಹಿಡಿಯಬೇಕಿತ್ತು
ಅಷ್ಟರಲ್ಲೇ ಕೊಂದರು

ಮಿಣಿ ಹಗ್ಗಕ್ಕೆ ಬೆಣ್ಣೆ ಸವರಲಾಗಿತ್ತು
ಪಾಷಾಣದ ಕಡಾಯಿಗಳನ್ನು ಮುಂದಿಡಲಾಗಿತ್ತು
ದಾರಿಗಳಿಗೆ ಜಾಲಿ ಮುಳ್ಳು ಎಳೆಯಲಾಗಿತ್ತು
ಅಪರಾತ್ರಿ ಕತ್ತಿ ಮಸೆತದ ಸದ್ದು ರಣಗುಡುತ್ತಿತ್ತು
ಸಾಗರದ ಆಳದಲ್ಲಿ ಕರಿಗಾಳಿಯ ಮೆರವಣಿಗೆ ಹೊರಟಿತ್ತು…
ನನ್ನ ’ನೀಲಿನಕ್ಷತ್ರ’ ನಿಶ್ಯಸ್ತ್ರವಾಗಿ ಅಸ್ತಂಗತಗೊಂಡಿತು….

 

‍ಲೇಖಕರು Avadhi

18 January, 2019

1 Comment

  1. Nagaraj

    ಸುಂದರವಾದ ದಿಟ ಸಾಲುಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading