ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಳಾಸಗಳ ಸುಳಿವಿಲ್ಲದೆ..

ಪ್ರತಾಪ್ ಬ್ರಹ್ಮಾವರ

ಅಳಿಸಿ ಹೋದ ಹೆಜ್ಜೆ-ಗುರುತುಗಳ ಹಿಂಬಾಲಿಸಿ ,

ವಿಳಾಸಗಳ ಸುಳಿವಿಲ್ಲದೆ

ಭ್ರಮ-ನಿರಸರಾದವರು ನಾವು…,

ಕತ್ತಲ ರಾತ್ರಿಯಲಿ

ಕಳೆದುಹೋದವರನು’ ,

ಕತ್ತಿಗೆ ಮುಸುಕು ಹಾಕಿ

ಕತ್ತಲಲ್ಲೇ ಹುಡುಕ

ಹೊರಟವರು ನಾವು ,

ನಾವು ವಿಳಾಸವಿಲ್ಲದವರು,

ದಯವಿಟ್ಟು ಹುಡುಕ ಬೇಡಿ ,

ನಮ್ಮ ಪಾದಗಳನು

ಪದಗಳಲಿ…

ಅಲೆಮಾರಿ ಆತ್ಮದ

ಅಲೆಗಳು ನಾವು…

ಹೆಸರಿಗೊಂದು ಉಸುಕ

ಮನೆಯಮಾಡಿ ,

ಉಸಿರು ಬಸಿರಾಗೊವರೆಗು

ಕಾದು , ಯಾರದೊ ,

ಮೂಸೆಯೊಳಗೆ ಸೋಸಿ ಹಾಯ್ದು

ಬಂದ ಧರಣಿಯ ಬಿಟ್ಟು,

ಹೋದ ವಿಳಾಸಗಳು ಸುಳಿಯು

ಕೊಡದೆ ಹೊರಟವರು

ನಾವು,

ದಯವಿಟ್ಟು ಹುಡುಕಬೇಡಿ

ನಮ್ಮ ವಿಳಾಸಗಳ ,

ಅನಿವಾಸಿಗಳು ನಾವು…

ತಾವಿಲ್ಲದವರ ಹುಡುಕ

ಬೇಡಿ ತಾವು…

ಚಿತ್ರಕೃಪೆ-ಅಂತರ್ಜಾಲ

‍ಲೇಖಕರು avadhi

30 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading