ವಿಭಾ ಸಾಹಿತ್ಯ ಪ್ರಶಸ್ತಿ
ಕನ್ನಡದ ಪ್ರತಿಭಾನ್ವಿತ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ `ವಿಭಾ ಸಾಹಿತ್ಯ ಪ್ರಶಸ್ತಿ’ಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಇದಕ್ಕಾಗಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ ಕನ್ನಡದ ಕವಿ/ಕವಯಿತ್ರಿಯರ ಕವಿತೆಗಳ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಯಲ್ಲಿ ಕನಿಷ್ಟ30 ಕವಿತೆಗಳಿರಬೇಕು.
ಪ್ರಶಸ್ತಿಯು ರೂ. 5000/- ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದುಗಿನ ಲಡಾಯಿ ಪ್ರಕಾಶನದಿಂದ ಪ್ರಕಟಿಸಿ, ಸೆಪ್ಟೆಂಬರ್ 27ರಂದು ವಿಭಾ ಹುಟ್ಟಿದ ದಿನವೇ ಬಿಡುಗಡೆಗೊಳಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ಆಯೋಜಿಸಲಾಗುವುದು.
ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: 15 ಜುಲೈ 2010.
ಹಸ್ತಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ.
ಪ್ರಕಾಶ ಮತ್ತು ಸುನಂದಾ ಕಡಮೆ,
ಸಂಚಾಲಕರು, `ವಿಭಾ ಸಾಹಿತ್ಯ ಪ್ರಶಸ್ತಿ’
ನಂ. 90, ನಾಗಸುಧೆ, ಕಾಳಿದಾಸನಗರ,
ವಿದ್ಯಾನಗರ ವಿಸ್ತರಣೆ, ಹುಬ್ಬಳ್ಳಿ-580031
ದೂರವಾಣಿ: ೦೮೩೬-2376826, ೯೮೪೫೭ 79387






ಸುನಂದಾ ಮತ್ತು ಪ್ರಕಾಶ,
ಇದು ಒಂದು ಒಳ್ಳೆಯ ಕೆಲಸ. ಉತ್ತಮ ಕವಿತಾ ಸಂಕಲನ ಕನ್ನಡದಕ್ಕೆ ದೊರೆಯುವದರಲ್ಲಿ ಅನುಮಾನವಿಲ್ಲ.
ಪ್ರೀತಿಯಿಂದ,
ವಸುಧೇಂದ್ರ
ಆತ್ಮೀಯ ಸುನಂದಾ ಹಾಗೂ ಪ್ರಕಾಶ್
ಕಾವ್ಯ ಹಾಗೂ ನವ್ಯಾ,
ಒಳ್ಳೆ ಆಲೋಚನೆ
ಅದೂ ನಮ್ಮೆಲ್ಲರ ಆತ್ಮೀಯಳಾಗಿದ್ದ ವಿಭಾ ಹೆಸರಿನಲ್ಲಿ..
ನಾನೂ ಸಹಾ ಇಂತಹ ಒಂದು ಯೋಜನೆಗಾಗಿಯೇ ಕಾಯುತ್ತಿದ್ದೆ.
ಒಂದು ಹಸ್ತಪ್ರತಿ ಬದಲು ಇನ್ನೂ ಒಂದು ಆರಿಸಿದರೆ ಅದರ ಬಹುಮಾನದ ಮೊತ್ತವನ್ನು ಪ್ರತೀ ವರ್ಷ ಭರಿಸಲು ನನಗೆ ಆಸೆ.
ಹೇಳಿ, ಏನು ಮಾಡೋಣ??
-ಜಿ ಎನ್ ಮೋಹನ್