ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಭಾ ಪುರೋಹಿತ ಹೊಸ ಕವಿತೆ – ಈ ಹಕ್ಕಿ…

ವಿಭಾ ಪುರೋಹಿತ

ಫಲ್ಗುಣದತನಕ
ಪರಿತಪಿಸಿ ಕಾದದ
ಪುನರಾಗಮಕ
ಹಾಕೇದ ಹೊಂಚ
ಚಾಚೇದ ಚೊಂಚ

ಟಿಸಿಲುಗಳು ಕಿಸದಾವ
ಹಚ್ಚ ಹಸಿರಿನ ನಗಿಯ
ಕೂಗಿ ಕರದದ ಬಳಗಕ
ಹಕ್ಕಿ ಗಿಳಿ ನವಿಲ ಕುಕಿಲ

ಬರಡು ಬಂಜರು ಕುಡಿಯೊಡೆದು
ಹಾಡೇದ ಭೂಮಿಗೀತ
ಆಮೋದಿ ಉನ್ಮಾದಿ
ಈ ಯುಗಾದಿ

ಹಕ್ಕಿಯ ಸಡಗರಕ
ಬೇವುಬೆಲ್ಲದ ಬೆರಕಿ

ಕುಣಿದದ ಗೆಜ್ಜಿ
ಹೊಸ ಸಂವತ್ಸರದ ಹೆಜ್ಜಿ

ಜಗದ ಜಗುಲಿಯಲಿ
ಪರ್ವಕಾಲದ ಪಠಣ
ಬಯಲ ಬಸಿರಿನ
ಜೀವಕಣಕಣಕ
ಅಮೃತನಾದದ ಶ್ರವಣ

‍ಲೇಖಕರು Admin

2 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading