ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದಾಯ ನಿನಗೆ…

ಒಂದಷ್ಟು ವಿಚಿತ್ರ ವಿದಾಯಗಳು…

ಮೋಹನ್ ವಿ ಕೊಳ್ಳೇಗಾಲ

ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು ಜೊತೆಗಿತ್ತು ಹುಟ್ಟಿದಂದಿನಿಂದ ಬೆಳೆದಂತೆ ಕತ್ತರಿಸೊತ್ತರಿಸಿದರು ತೆಂಗೆಣ್ಣೆ ನುಂಗಿ ನಿಂತಿತ್ತು ಜೀವ ಭಾವ ಮೀಟಿ ಬಂದವರೆಲ್ಲ ಪಕಳೆಯಂತುದುರಿದರೂ ನೀ ನೆರಳಂತಿದ್ದೆ ಜೊತೆಗೆ ಇಂದನಾಥ ಹೆಣ, ಸೇರು ಸ್ವರ್ಗ ಹತ್ತತ್ತಿಪ್ಪತ್ತು ಬೆರಳಲ್ಲುಗುರು ಕತ್ತರಿಸಿದಂತೆ ಹುಲುಸಾಗುವ ಚಿಗುರು ಇಂದು ತುಂಡು ಅಂದು ಬುಡ ಅಳಬೇಡ ಸೇರು ತಂಗಾಳಿಯೆಡೆಗೆ ಹೇ ಸುಕ್ಕು ಚರ್ಮದೊಳ ಕೋಶವೇ ಅಂದು ನಿನ್ನ ಸ್ಪರ್ಶಕ್ಕೆ ತನು ಆತ್ಮಕಾಯ ಮನ ಪ್ರೇಮಮಯ ಕತ್ತೆತ್ತಿದರೆ ಸೀರೆ ನೆರಿಗೆ ಹಣೆಯುದ್ದ ಹರಿದ ದಾರ ಮುಪ್ಪಿಗೆ ಇದ್ದಷ್ಟು ದಿನ ನಿನ್ನೊಪಿನ ಖುಷಿ ಮೂಲೆ ಬಿಡು ಬರಲಿ ಸುಖ ನಿನ್ನರಸಿ ಒಳ ಇಳಿದ ಜಲ ಬೆವರು ಮೂತ್ರ ರೈತನುಳುಮೆ ವರ್ಷದ ಹರ್ಷಕ್ಕೆ ಕಾಳು ಮೊಳೆತೊಡೆದು ಜೀವ ಬುಗ್ಗೆ ಇಣುಕಿ ಪೈರಾಗಿ ತೊನೆದು ಭತ್ತ ಒಡೆದನ್ನ ಎಲ್ಲೆಲ್ಲೋ ಕಳೆಯದೆ ನನ್ನುದರ ಸೇರಿಂದಳಿದೇ ಹೋಯಿತು ಬದುಕು ಬೆದಕೊಂದಿಗಿದ್ದ ಶಕ್ತಿಯೇ ಯಮ ಬಂದಿಹನು ಯವ್ವನವೇ ಅಳಿದಳಿದು ಕಳಚಿ ಹೋಗು ಉಳಿಯಲಿ ಮುಪ್ಪು ಹಠ ಮಾಡುವುದು ಲೋಕರೂಢಿ ತಪ್ಪು ವಿದಾಯ ನಿನಗೆ, ಬರುವೆ ಹಿಂದಿಂದೆ ಹಳ್ಳ ತೊರೆಗಳಲ್ಲಿ ಸಮುದ್ರ ಕೂಡಿವುಪ್ಪು…!]]>

‍ಲೇಖಕರು G

18 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading