ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ ಹಾಲಾಡಿ ಹೊಸ ಕವಿತೆ – ಹತ್ತೇ ಹತ್ತು!..

ವಿಜಯಶ್ರೀ ಹಾಲಾಡಿ

ಒಂದೇ ಒಂದು
ಹೂವು ಇತ್ತು
ಬೇಲಿಯ ಗಿಡದಲ್ಲಿ

ಎರಡು ಗೂಬೆ
ಮಾತಾಡಿದ್ವು
‘ಊಂ ಹೂಂ’ ದನಿಯಲ್ಲಿ

ಮೂರು ಮುದ್ದು
ಬೆಕ್ಕು ಮಲಗಿವೆ
ಒಲೆಯ ಬುಡದಲ್ಲಿ

ನಾಲ್ಕು ನಾರಿನ
ಹಕ್ಕಿ ಗೂಡು
ತೆಂಗಿನಮರದಲ್ಲಿ

ಐದೇ ಐದು
ಬೆರಳು ತಾನೇ
ಕಾಲು ಕೈಯ್ಯಲ್ಲಿ

ಆರು ಆಟದ
ಗೋಲಿ ಕಲ್ಲು
ಪಾಟಿ ಬಗಲಲ್ಲಿ

ಏಳು ಏಣಿಯ
ಅಟ್ಟ ಉಂಟು
ಅಜ್ಜನ ಊರಲ್ಲಿ

ಎಂಟಿನ ನಂಟು
ಹಬ್ಬದ ಗಂಟು
ತಿಂದೇ ಮಜದಲ್ಲಿ

ಒಂಬತ್ತೆಂದರೆ
ಜ್ವರ ಬತ್ತಂತೆ
ನೆನೆದರೆ ಮಳೆಯಲ್ಲಿ

ಹತ್ತೇ ಹತ್ತು
ಲೆಕ್ಕವು ಗೊತ್ತು
ಊಹೂಂ….ಮತ್ತೆಲ್ಲಿ !?

‍ಲೇಖಕರು Admin

6 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading