ವಿಜಯನಗರ ’ಬಿಂಬ’ ಚಿಣ್ಣರ ಚಾವಡಿ ೨೦೧೪ ಫೋಟೋ ಆಲ್ಬಂ

ಚಿಣ್ಣರ ಚಾವಡಿ ೨೦೧೪

ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದವರು ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ.
ಕಾರ್ಯಕ್ರಮದಲ್ಲಿ ಮಕ್ಕಳ ಕೂಟದ ಗೋಪಾಲ್ ಅಕ್ನೂರ್, ಚಿತ್ರಕೂಟ ಶಾಲೆಯ ಚೈತನ್ಯ ಹಾಗು ’ಅವಧಿ’ಯ ಉಪಸಂಪಾದಕಿ ಸಂಧ್ಯಾರಾಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಸ್ಟರ್ ಹಿರಣ್ಣಯ್ಯನವರಿಗೆ ರಂಗಸನ್ಮಾನ ಮಾಡಿದಾಗ, ಅವರದೇ ನಾಟಕ ಮಂಡಳಿಯ ’ನಮೋ ಲಕ್ಷ್ಮಿ ನೃಸಿಂಹ’ ನಾಂದಿ ಹಾಡಿಗೆ ಹಿರಣ್ಣಯ್ಯನವರು ದನಿ ಸೇರಿಸಿ ಹಾಡಿದ್ದು ಒಂದು ಭಾವತೀವ್ರತೆಯ ಕ್ಷಣ. ನಂತರ ಪ್ರೇಕ್ಷಕರ ಕೋರಿಕೆಯ ಮೇರೆಗೆ ಅವರು ತಮ್ಮ ನಾಟಕದ ಕೆಲವು ಸಂಭಾಷಣೆಗಳನ್ನು ಹೇಳಿದ್ದು ಪ್ರೇಕ್ಷಕರಿಗೆ ಬೋನಸ್!
ಕಾರ್ಯಕ್ರಮದಲ್ಲಿ ಚಿಣ್ಣರೇ ಆಡಿದ ನಾಟಕ ’ಕಾಕೋಲುಕೀಯ’, ನಿರ್ದೇಶನ ಡಾ ಎಸ್ ವಿ ಕಶ್ಯಪ್. ಜಾಗತೀಕರಣದ ಧಾಳಿ, ಇಡೀ ಜನಾಂಗದ ಸಂಪತ್ತಾಗಿದ್ದ ಕಥೆಗಳನ್ನು ಹೇಗೆ ವ್ಯಾಪಾರದ ಸರಕಾಗಿಸಿ ಟಿ ವಿ ಎನ್ನುವ ಮಾಯಾಪೆಟ್ಟಿಗೆಯಲ್ಲಿ ತುಂಬಲಾಯಿತು, ಅದರಿಂದಾದ ಹಾನಿ ಏನು ಎನ್ನುವುದನ್ನು ಮಕ್ಕಳು ಸೊಗಸಾಗಿ ಅಭಿನಯಿಸಿದರು.
ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋಗಳು: ಬೃಂದಾ ಕಶ್ಯಪ್


 

‍ಲೇಖಕರು avadhi

April 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. kashyap

    ಈ ಬಾರಿ ಉದ್ಘಾಟನೆಯನ್ನು ದೋಡ್ಡ ರೀತಿಯಲ್ಲಿ ಮಾಡ್ಬೇಕು ಎಂದು ಕೊಂಡಿದ್ದೆವು.ಆದ್ದರಿಂದ ಕಾಕೋಲೂಕೀಯ ನಾಟಕವನ್ನು ಆಡುವುದು, ಜೊತೆಗೆ ಮಾ||ಹಿರಣ್ಣಯ್ಯ ಅವರಿಗೆ ನಮ್ಮ ರಂಗಶಿಕ್ಷಣ ಕೇಂದ್ರ ದಿಂದ ರಂಗ ಗೌರವವನ್ನು ಸಮರ್ಪಿಸುವುದು ಎಂದುಕೊಂಡಿದ್ದೆವು. ಅದರಂತೆ ರಂಗಗೌರವ ಮಾಡುವಾಗ ’ಹಿರಣ್ಣಯ್ಯ ಮಿತ್ರ ಮಂಡಳಿ’ಯ ನಾಂದಿ ಗೀತೆಯನ್ನೇ ಅವರ ಸನ್ಮಾನದ ಸಮಯದಲ್ಲಿ ಹಾಕಿದರೆ ಚೆನ್ನ ಎನಿಸಿತು. ಆಗ ಬಾಬು ಹಿರಣ್ಣಯ್ಯ ಅವರನ್ನು ಕೇಳಿದಾಗ ಆ ಗೀತೆಯನ್ನು ಕೊಟ್ಟರು. ರಂಗ ಗೌರವದ ಸಮಯದಲ್ಲಿ ಅದನ್ನು ಪ್ಲೇ ಮಾಡುವುದು ಎಂದು ಮಾತ್ರ ಅಂದುಕೊಂಡಿದ್ದೆವು. ಆದರೆ ಮಾ||ಹಿರಣ್ಣಯ್ಯ ಅವರು ಅಷ್ಟು ಭಾವುಕ್ರಾಗುತ್ತಾರೆ ಎಂದು ನಮಗೆ ಅನ್ನಿಸಿರಲಿಲ್ಲ. ಆ ಹಾಡು ಹಾಕುತ್ತಿದ್ದಂತೆಯೆ ರಂಗ ಗೌರವ ಸ್ವೀಕರಿಸಲು ಕುಳಿತಿದ್ದ ಮಾ||ಹಿರಣ್ಣಯ್ಯ ಅವರು ಹಾಡಲು ಪ್ರಾರಂಭಿಸಿದರು. ನಿಜಕ್ಕೂ ಅದು ಭಾವತೀವ್ರತೆಯ ಕ್ಷಣವೇ ಸರಿ. ಮಾ||ಹಿರಣ್ಣಯ್ಯ ಅಷ್ಟೆ ಅಲ್ಲದೆ ವೇದಿಕೆಯ ಮೇಲಿದ್ದ ಗಣ್ಯರು ಸಹ ರೋಮಾಂಚನಗೊಂಡರು. ನಮ್ಮ ಶ್ರಮ ಸಾರ್ಥಕ ಎನ್ನಿಸಿತು.
    ಅದನ್ನು ಸಾಧ್ಯವಾಗಿಸಿದ್ದಕ್ಕೆ ಬಾಬು ಹಿರಣ್ಣಯ್ಯ ಅವರಿಗೆ ಮತ್ತು ಮತ್ತು ಅದನ್ನು ನೆನೆಯಲು ಅವಕಾಶ ಕಲ್ಪಿಸಿದ್ದಕ್ಕೆ ಅವಧಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  2. gopal aknur

    It was indeed a memorable day from many angles, one to share the dias with a great personality like Dr.Master Hirannaiah, second a wonderful play by the chinnaru of our Vijayanagara Bimba. third to hear the meoldies nandi geethe of Hirannaiah Mitra mandali for which the Master also gave his voice – hearing from such close corner was just unbelievable. He became so emotional which we people who were on the dias could witness. That is the greatness of great people. Thanks to Vijayanagara Bimba for providing us an opportunity and wonderful activities from Bimba. We are proud of Vijayanagara Bimba.

    ಪ್ರತಿಕ್ರಿಯೆ
  3. ಭರತ್ ಸ.ಜಗನ್ನಾಥ್

    “ರಂಗದಿಗ್ಗಜರಾದ ಮಾಸ್ಟರ್ ಹಿರಣ್ಣಯ್ಯ ಅವರು ಉದ್ಘಾಟನೆ ಮಾಡಿ ನಮ್ಮ ನಾಟಕ ನೋಡುತ್ತಾರೆ” ಎಂದು ತಾಲೀಮಿನ ಸಮಯದಲ್ಲಿ ಕಶ್ಯಪಣ್ಣ ಹೇಳಿದರು. ಆಗಲೇ ಭಯ, ಕುತೂಹಲ, ಆತಂಕ ಎಲ್ಲಾ ಭಾವನೆಗಳು ಒಮ್ಮೆಗೇ ಮೆದುಳಿಗೆ ಡಿಕ್ಕಿ ಹೊಡೆದಂತಾಯಿತು. ನಂತರ ಪ್ರದರ್ಶನ ಅದ್ಭುತವಾಗಿ ಹೊರಬರಬೇಕು ಎಂದು ತಾಲೀಮು ನಡೆಸಿದೆವು. ಹಿರಣ್ಣಯ್ಯ ಅವರು ನಮ್ಮ ನಾಟಕ ನೋಡಿದರು ಎಂಬುದೇ ನನಗೆ ಒಂಥರಾ ಹೆಮ್ಮೆಯ ಸಂಗತಿಯಾಯಿತು. ವಿಜಯನಗರ ಬಿಂಬದ 2014ರ ಪಯಣ ಹಿರಣ್ಣಯ್ಯನವರ ಆಶೀರ್ವಾದದೊಂದಿಗೆ ಪ್ರಾರಂಭವಾಗಿದೆ. ಇದರೊಡನೆ ಸಂಪ್ರದಾಯ ಮತ್ತು ಆಧುನಿಕತೆ ಹಾಗೆ ಮುಗ್ಧತೆ ಮತ್ತು ಮಾನವೀಯತೆ ಈ ಒಳಾರ್ಥಗಳು ಕಥೆತಾತ ಮತ್ತು ಕಾರ್ಟೂನ್ ಗಳಿಂದ ಬಿಂಬಿಸಲ್ಪಟ್ಟ, ಕಶ್ಯಪಣ್ಣ ರಚಿಸಿ-ನಿರ್ದೇಶಿಸಿದ ನಾಟಕ ’ಕಾಕೋಲುಕೀಯ’ ನೋಡಿದ ಪ್ರೇಕ್ಷಕರಲ್ಲಿ ಹಿರಿಯರಿಗೆ ’ನನ್ನ ಅಜ್ಜಿ-ತಾತ ಹೀಗೇ ಕಥೆ ಹೇಳುತ್ತಿದ್ದರು’ ಮತ್ತು ಕಿರಿಯರಿಗೆ ’ಅಯ್ಯೋ ಈ ಕಾರ್ಟೂನ್ ಗಳನ್ನು ಬಿಟ್ಟು ನಾನು ಅಮ್ಮನ ಕಥೆ ಕೇಳಬೇಕು’ ಎಂದು ಒಮ್ಮೆಯಾದರು ಅನ್ನಿಸಿರುತ್ತದೆ. ಒಟ್ಟಾರೆ ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟ ವಿಜಯನಗರ ಬಿಂಬಕ್ಕೆ ಹಾಗೆ ಅದರ ಚಿತ್ರಗಳನ್ನು ಪ್ರಕಟಿಸಿರುವ ಅವಧಿಗೆ ವಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: