ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಹ್! ಪ್ರತಿಭಾ… ಆಹಾ! ಜೋಷಿ..

raghavendra Joshi

ಪ್ರತಿಭಾ ನಂದಕುಮಾರ್ ಗೆ ಘಾಲಿಬ್ ನೆನಪಿಗೆ ಬಂದರು. ಎರಡು ಕವಿತೆಗಳನ್ನು ಅನುವಾದಿಸಿ ಓದಿಕೊಳ್ಳಿ ಎಂದು ಬಿಟ್ಟರು.

ರಾಘವೇಂದ್ರ ಜೋಷಿ ಬರೀ ಓದಲಿಲ್ಲ, ಅದಕ್ಕೆ ತಮ್ಮ ಕಿಡಿಗೇಡಿ ಸಾಲುಗಳನ್ನೂ ಜೋಡಿಸಿದರು.

ಎರಡೂ ಇಲ್ಲಿದೆ. ಓದುವ ಖುಷಿಗಾಗಿ-

ವಾಹ್! ಪ್ರತಿಭಾ

ಹಸ್ತರೇಖೆಯನ್ನು ನಂಬಬೇಡಾ ಗಾಲಿಬ್
ಒಲಿಯುತ್ತದೆ ಅದೃಷ್ಟ
ಹಸ್ತವೇ ಇಲ್ಲದಿರುವವರಿಗೂ

ಆಹಾ! ರಾಘವೇಂದ್ರ ಜೋಷಿ..

ಅಂಗೈ ಗೆರೆ
ನೋಡದಿರು ಗಾಲಿಬ್,
ಅಂಗೈ ತೋರಿಸಿಯೂ
ಅವಲಕ್ಷಣ ಅನಿಸಿಕೊಂಡವರಿದ್ದಾರೆ!

*

ವಾಹ್! ಪ್ರತಿಭಾ 

ವಜೀರ್, ನಿನ್ನ ಪ್ರಾರ್ಥನೆಗೆ ತಾಕತ್ತಿದ್ದರೆ
ಮಸೀದಿಯನ್ನು ಅಲ್ಲಾಡಿಸಿ ತೋರಿಸು
ಇಲ್ಲದಿದ್ದರೆ ಬಾ ಎರಡು ಗುಟುಕು ಕುಡಿದು
ಮಸೀದಿ ಅಲ್ಲಾಡುವುದನ್ನು ನೋಡು

 

ಆಹಾ! ರಾಘವೇಂದ್ರ ಜೋಷಿ..

ಹೇಯ್ ವಜೀರ್,
ತಾಕತ್ತಿದ್ದರೆ ನಿನ್ನ ಪ್ರಾರ್ಥನೆಯಿಂದ
ಮಸೀದಿಯನ್ನೊಮ್ಮೆ ಅಲ್ಲಾಡಿಸಿ ನೋಡು.
ಇಲ್ಲವಾದಲ್ಲಿ
ಎರಡು ಗುಟುಕೇರಿಸಿ ನೋಡು,
ಮಸೀದಿಯೇ ಜರುಗುವದನ್ನು ನೋಡು!

‍ಲೇಖಕರು admin

29 December, 2015

4 Comments

  1. ಪಂಡಿತಾರಾಧ್ಯ ಮೈಸೂರು

    ಏರಿಸಿದ್ದರೆ ಇನ್ನೂ ಎರಡು
    ಪ್ರತಿಭೆಯ ಗುಟುಕು
    ಕವಿತೆಗಳೂ ಅಲ್ಲಾಡುತ್ತಿದ್ದವು

  2. ಲೀಲಾವತಿ.ಎಸ್

    ನೈಸ್

  3. ಪಂಡಿತಾರಾಧ್ಯ ಮೈಸೂರು

    ಅನುವಾದ ಮೂಲಕ್ಕೆ ನಿಷ್ಠವಾಗಿರುವುದು ಮುಖ್ಯ.
    ಅದನ್ನು ಬದಲಾಯಿಸುವುದಾದರೆ ಅಥವಾ ’ಸುಧಾರಿಸುವು’ದಾದರೆ
    ಅದನ್ನು ಅನುವಾದ ಎನ್ನುವ ಬದಲು ಪ್ರೇರಣೆ ಎಂದಷ್ಟೇ ಸೂಚಿಸಿ
    ತಮ್ಮ ಪ್ರತಿಭಾವಿಲಾಸವನ್ನು ಮೆರೆಯಬಹುದು.

  4. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading