ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಟ್ಸ್ ಅಪ್ ನಲ್ಲಿ ಕವಿತೆಯ ಸಂಕ್ರಾಂತಿ

suresh rajamane

ಸುರೇಶ್ ರಾಜಮಾನೆ ಎಲ್ಲಾರ್ ಸೂರ್ಯ

ಬೇಲೂರು ರಘುನಂದನ್ ಅವರ ಅಧ್ಯಕ್ಷತೆಯಲ್ಲಿ ಸಂಕ್ರಾಂತಿಯ ಕವಿಗೋಷ್ಠಿ ಮಾಡಿದೆವು. ಎಲ್ಲಿ ? ಯಾವ ಊರು ? ಯಾವಾಗ ? ಅನ್ನೋ ಮಾತೇ ಇಲ್ಲ.

whatsapp26 ಗಂಟೆಯಿಂದ ಸ್ಟಾರ್ಟ್ ಆದ ಕವಿಘೋಷ್ಠಿಯಲ್ಲಿ ಪ್ರತಿಯೊಂದು ಕವಿತೆಯೂ ಸೂಪರ್. ಇದು ಕನ್ನಡ ಸಾಹಿತ್ಯಕ್ಕೆ ಕೊಟ್ಟ ತಂತ್ರಜ್ಞಾನದ ಟಚ್. ಅದಕ್ಕಾಗಿಯೇ ಇದು ವಿಶೇಷ ಕವಿ ಘೋಷ್ಠಿ. ವಾಟ್ಸಾಪ್ ನಲ್ಲಿ ಕವಿತೆಗಳನ್ನು ಆಲಿಸುವ ಸದಾವಕಾಶ.

ಬರೀ GM, gn, hi, bye, ಅನ್ನೋ ಮೆಸೆಜ್ ಮಾಡೋದ್ಕಿಂತ ಸಮಾನ ಮನಸ್ಕರೆಲ್ಲರೂ ಸೇರಿ ಕವಿತೆಗಳನ್ನು ಓದುವದು, ಅವುಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳೋದು, ತಿದ್ದಿ ಹೇಳುವದು ಈ ತರಹದ ವಿಚಾರಗಳಲ್ಲಿ ರಚನೆಯಾಗಿದ್ದು ನಾನಿರುವ “ಕಾಜಾಣ” ಅನ್ನೋ ವಾಟ್ಸಾಪ್ ಗ್ರುಪ್ ಮತ್ತು “ಭಾವಸಂಗಮ” ಅನ್ನೋ ಗ್ರುಪ್

ಭಾವಸಂಗಮದ ಸಮಾಗಮ ಒಂದುಬಾರಿ ಆಗಿದೆ ಸಾಹಿತ್ಯದ ಘಮಘಮ ವಾಸನೆ ಇನ್ನೂ ಮನದಲ್ಲಿದೆ. ಕಾಜಾಣ ಗ್ರೂಪ್ ನಲ್ಲಿ ಪ್ರತಿ ದಿನಾ ಕವಿತೆಗಳದ್ದೇ ಪೋಸ್ಟ್. ಪ್ರತಿ ದಿನ ಕವಿತೆಗಳನ್ನು ಓದುವ ಹಬ್ಬ. ಈ ತರಹದ ಗ್ರುಪ್ ಗಳಿಂದ ಎಲ್ಲೋ ದೂರದಲ್ಲಿರುವ ಹಿರಿಯರ, ಅನುಭವಸ್ಥರ ಕವಿತೆಗಳನ್ನು, ಅವರ ಭಾವನೆಗಳನ್ನು ನಾವು ಇರುವಲ್ಲಿಯೇ ಕೇಳಬಹುದು.

ಆ ನಿಟ್ಟಿನಲ್ಲಿ ವಾಟ್ಸಪ್ ನ ಬಳಕೆ ಧನಾತ್ಮಕವಾಗಿ ನಾವೆಲ್ಲ ಬಳಸಿಕೊಳ್ಳುತ್ತಿದ್ದೇವೆ ಎಂಬ ಹೆಮ್ಮೆ ನನಗಿದೆ. ಕಾಜಾಣ ಕವಿಮನಸುಗಳ ಗರಡಿಯಲ್ಲಿ ಸಂಕ್ರಾಂತಿಯ ಕವಿಗೋಷ್ಟಿ ವಿಶೇಷವಾಗಿತ್ತು. ದಿನಾಲು ಸಾಹಿತ್ಯವನ್ನು ಸಂಭ್ರಮದಿಂದ ಸವಿಯುವದೇ ನಮಗೆಲ್ಲ ಸಂಭ್ರಮ.

 

‍ಲೇಖಕರು Admin

17 January, 2016

3 Comments

  1. sunil ms

    What’s up number kodi

    • ನಾಗರಾಜ ಎಂ ಹುಡೇದ

      ತುಂಬಾ ಮೆಚ್ಚುಗೆಯ ಕಾರ್ಯ ಮಾಡಿದ್ದಾರೆ.

  2. ಅಪ್ಪಗೆರೆ ಡಿ ಟಿ ಲಂಕೇಶ್

    ಕವಿಗೋಷ್ಠಿಗೆ ಒಂದು ಸ್ಥಳ, ವೇದಿಕೆ, ನಿರ್ವಹಣೆ, ಔಪಚಾರಿಕ ಸಿದ್ಧತೆಗಳು, ಮುಖಾಮುಖಿಯಾಗುವ ಸಾಹಿತ್ಯಾಸಕ್ತರೂ, ಕವಿಗಳು ಈ ಎಲ್ಲಾ ರೀತಿಯ ಚೌಕಟ್ಟಿನಾಚೆಗೂ ಸಹ ಸಾಮಾಜಿಕ ಜಾಲ ‘ವಾಟ್ಸಪ್’ನ ಕಾಜಾಣ ಗುಂಪಿನಲ್ಲಿ ಕವಿ ಬೇಲೂರು ರಘುನಂದನ್ ಅವರ ಆಯೋಜನೆಯ ವಿನೂತನ ಸಂಕ್ರಾಂತಿ ಕವಿಗೋಷ್ಠಿ ವಿವಿಧ ಪ್ರದೇಶ, ಸ್ಥಳಗಳ ಕವಿಗಳು ತಾವಿದ್ದ ಜಾಗಗಳಿಂದಲೇ ತಮ್ಮ ಕವಿತೆ ವಾಚಿಸಿ ಧ್ವನಿ ಮುದ್ರಿಸಿ ಕಳುಹಿಸಿದ್ದು ಅವುಗಳನ್ನು ಎಲ್ಲರೂ ಕೇಳುವಂತಾಗಿದ್ದು ಸಾಹಿತ್ಯದ ಪ್ರಯೋಗಾತ್ಮಕ ಕ್ರಿಯಾಶೀಲತೆಗೊಂದು ಹೊಸ ಮುನ್ನುಡಿ ಬರೆದಂತಾಯಿತು.
    ಧನ್ಯವಾದ ಬೇಲೂರು ರಘುನಂದನ್ ಮತ್ತು ಎಲ್ಲ ಕಾಜಾಣದ ಎಲ್ಲ ಕವಿಗಳಿಗೆ..,
    -ಅಪ್ಪಗೆರೆ ಡಿ ಟಿ ಲಂಕೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading