ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರ ಕಂಡ ರೂಮಿ

ಫೇಸ್ ಬುಕ್ಕಿನಲ್ಲಿ ಪಸರಿಸಿದ್ದ ರೂಮಿ ಪರಿಮಳದ ಬಗ್ಗೆ ನಿನ್ನೆ ಒಂದು ಲೇಖನ ಪ್ರಕಟಿಸಿದ್ದೆವು.  ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ.  ಅದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದವು.  ವಸುಧೇಂದ್ರ ಅವರು ಮತ್ತೂ ಕೆಲವು ಚಂದದ ಅನುವಾದಗಳನ್ನು ಕಳುಹಿಸಿದ್ದಾರೆ. ಅವು ನಿಮಗಾಗಿ :

ವಸುಧೇಂದ್ರ

೧.

ಅರ್ಥ ಹಿಗ್ಗಲಿ

ವ್ಯರ್ಥ ಶಬ್ದವಲ್ಲ; ಹೂ

ಬಿಡಲು ಬೇಕು ಮಳೆ

ಗುಡುಗಲ್ಲ

೨.

ಬೆಳಕು ಕಾಣಲಿ ಹೇಗೆ?

ನೀನಿರದೆ ಕಣ್ಣೊಳಗೆ

೩.

ಗೋರಿ ಹುಡುಕದಿರು ಸತ್ತಾಗ ಭುವಿಯೊಳಗೆ

ಇರುವೆ ನಾ ರಸಿಕರ ಎದೆಯೊಳಗೆ

೪.

ನಿನ್ನ ಪ್ರಭಾವಳಿಯೂ ನಾನೆ

ನಿನ್ನ ಕರಿನೆರಳೂ ನಾನೆ

೫.

When You Find Love

You Will Find Yourself

ನೀನೆ ಕಾಣುವೆಯಲ್ಲಿ

ಕಂಡಾಗ ಪ್ರೀತಿಯಲಿ

೬.

If this me is not I, then

who am I?

If I am not the one who speaks, then

who does?

If this me is only a robe then

who is

the one I am covering?

ಈ ನಾನು ನಾನಲ್ಲದಿರೆ, ನಾನ್ಯಾರು?

ಈ ಮಾತು ನನ್ನದಲ್ಲದಿರೆ, ಮತ್ಯಾರು?

ಈ ನಾನು ಸುತ್ತಿರುವ ನಿಲುವಂಗಿಯಾದರೆ, ನಾನು ಸುತ್ತಿರುವದು ಅದ್ಯಾರು?

೭.

Purify your eyes, and see the pure world…

Your life will fill with radiant forms…

ಶುದ್ಧ ಜಗವ ನೋಡಲು ಶುದ್ಧ ಕಣ್ಣಿರಲಿ

ಬದುಕು ತುಂಬುವದಾಗ ತೇಜಪುಂಜದಲಿ

೮.

My Life

My Strength

My Faith are in Your Hands.

Launch me in The Sea Of Love

And Let Me Sail

ನನ್ನ ಜೀವನ, ನನ್ನ ಚೇತನ, ನನ್ನ ವಚನವು ನಿನ್ನ ಕೈಯಲ್ಲಿ;

ನನ್ನ ಯಾನಕೆ ಎಂದೆ ತೇಲಿ ಬಿಡು ನನ್ನನ್ನೆ ನಿನ್ನ ಆ ಪ್ರೇಮದ ಕಡಲಿನಲ್ಲಿ.

೯.

All Your Attempt To Reach Me

Are In Fact My Attempts To Reach You

ನನ್ನ ಸೇರುವ ನಿನ್ನೆಲ್ಲ ಯತ್ನ

ನಿನ್ನ ಸೇರುವ ನನ್ನೆಲ್ಲ ಪ್ರಯತ್ನ

 

 

‍ಲೇಖಕರು G

28 September, 2012

6 Comments

  1. Mohan V Kollegal

    ಅದ್ಭುತ ಅನುವಾದಗಳು… ಚೆನ್ನಾಗಿವೆ ಎಲ್ಲಾ

  2. prajna

    chennagive!

  3. ವೆಂಕಟ್ರಮಣ ಭಟ್

    ವಸುಧೇಂದ್ರರ ಈ ಅನುವಾದ ತುಂಬಾ ಸುಂದರವಾಗಿದೆ, ಹಿಡಿಸಿತು. ಇಷ್ಟೇ ಪದಗಳಲ್ಲಿ ರೂಮಿ- ಸರಾಗ, ಸುಲಲಿತ.
    -ವೆಂ.

  4. malathi S

    Wow Vasudhendra!! too good kaNree!!
    🙂
    malathi S

  5. bharathi

    ishtavaaythu …

  6. Sandhya, Secunderaad

    Ondakkinta ondu Chanda ive.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading