ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಡ್ಡಗೆರೆ ನಾಗರಾಜಯ್ಯ ಹೊಸ ಕವಿತೆ – ಸಂಗಾತಿಯ ಗುರುತು…

ಡಾ ವಡ್ಡಗೆರೆ ನಾಗರಾಜಯ್ಯ

ಕಾರ್ತೀಕದ ಹಸಿರು ಪಸಲಿನ ಅಕ್ಕಡಿ ಸಾಲಿನಲ್ಲಿ
ಅರಳಿ ನಗುವ ಹುಚ್ಚೆಳ್ಳು ಹೂವೇ !

ಸೀಳುಕ್ಕೆಯ ದೋಣಿ ಗೆರೆಯಲ್ಲಿ ಅನಂತ ನೆರಿಗೆ ಸೀರೆಯನುಟ್ಟು ಬೆಳ್ಳಗೆ
ನಕ್ಷತ್ರದಂತೆ ನಗುವ ಹೆದ್ದಣಬೆಯೇ !

ಉರಿಬಿಸಿಲ ನೆತ್ತಿ ಬಂಪಿಗೆ
ಅರಳೆಲೆ ಆಸರೆ ಮೇಲುಮುಸುಗಿನ ತಣ್ಣನೆಯ ನೆರಳೇ !

ಕೆರೆಯಂಗಳದಲ್ಲಿ ಮೂಡಿದ
ಕುರಿ ಆಡು ತುರುಮಂದೆ ಗೊರಸು ಗುರುತುಗಳ
ನಡುವೆ ಮೂಡಿದ ತೊಗಲಗಿತ್ತಿಯ ಪಾದಗಣ್ಣಿನ ಬೆಳಕೇ !

ಕನಸುಗಣ್ಣಿಗೆ ಮುಂಗಾರಿನ ಬಯಲು ಹೂಮಳೆಯಲ್ಲಿ ಮೂಡಣ ಮುಗಿಲ
ಬಾಗಿಲಿನಲ್ಲಿ ನಗುವ ಕಾಮನ ಬಿಲ್ಲೆ !

ಏನೆಂದು ಕರೆಯಲಿ
ನನ್ನ ನರವನ್ನೇ ಗಿಟಾರು ತಂತಿಮಾಡಿ ಕಗ್ಗಲ್ಲು ಕಣಿವೆಯ ಮೌನವನ್ನು
ನನ್ನೆದೆಯಲ್ಲಿ ಮಧುರವಾಗಿ ನುಡಿಸುವ ಸಂಗಾತಿಯನ್ನ?!

‍ಲೇಖಕರು Admin

20 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading