ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕ ಒಂದು ಸಂತೆ ಕೊಟ್ಟು ಕೊಂಡು ಮುಗಿಸಲೇಬೇಕು..

ಗಜಲ್

ವೈ ಬಿ ಹಾಲಬಾವಿ


ಬಯಸಿದಂತೆ ಬದಲಾಗದು ಜಗ ನಿನ್ನಲ್ಲಿ ನೀ ಬದಲಾಗದ ಹೊರತು
ಅರಿಯಲಾಗದು ಸೃಷ್ಟಿಯ ಕಣ್ಣ ನಿನ್ನ ಒಳಗಣ್ಣ ನೀ ತೆರೆಯದ ಹೊರತು ||ಮತ್ಲಾ||
 
ಏರು ಇಳುವಿನ ಜೀವನ ಭಾರ ದಾರಿ ದಣಿವು ನೀಗಲೇಬೇಕು
ತೆರಳಲಾಗದು ಬೆನ್ನ ತಿರುಗಿ ನಿನ್ನ ದಾರಿ ನೀ ಕಾಣದ ಹೊರತು
 
ಲೋಕ ಒಂದು ಸಂತೆ ಕೊಟ್ಟು ಕೊಂಡು ಮುಗಿಸಲೇಬೇಕು
ನಿಲ್ಲಲಾಗದು ಬಹಳ ಹೊತ್ತು ನಿನ್ನ ಚಿಂತೆ ನೀ ತೋರೆಯದ ಹೊರತು
 
ಕಲ್ಲು ಮುಳ್ಳಿನ ಜೀವನ ದಾರಿ ದೂರ, ನಡೆದು ನಿಂತು ಸಾಗಲೇಬೇಕು
ಹಿಂತಿರುಗಲಾಗದು ಹೊರಳಿ ಮರಳಿ ನಿನ್ನ ಗೂಡ ನೀ ಸೇರದ ಹೊರತು
 
ಈ ಜಗ ಸೋಜಿಗ ನಾಟಕ ರಂಗ ತೆರೆ ಬಿದ್ದ ಮೇಲೆ ತೆರಳಲೇಬೇಕು
ಒಪ್ಪಲಾಗದು ನೀ ನಟಿಸಿದ ಪಾತ್ರ ನಿನ್ನ ಮುಖವಾಡ ನೀ ಕಳಚದ ಹೊರತು
 
ಅರಿತವರಿಲ್ಲ ಹುಟ್ಟು ಸಾವಿನ ಗುಟ್ಟು ಕರೆ ಬಂದ ಮೇಲೆ ಹೋಗಲೇಬೇಕು
ಎಣಿಸಲಾಗದು ಸರಿ ತಪ್ಪು ಲೆಕ್ಕ ನಿನ್ನ ಲೆಕ್ಕ ನೀ ಚುಕ್ತಾ ಮಾಡದ ಹೊರತು
 
ಇಲ್ಲ ಇಲ್ಲಿ ಯಾವುದೂ ಶಾಶ್ವತ ಕಾಲ ಉರುಳಿ ಹೊರಳಿ ಮರಳಲೇಬೇಕು
ತಪ್ಪಿಸಲಾಗದು ತಲುಪುವ ತಾಣ ಓ”ಹಾಲ” ನಿನ್ನಲ್ಲಿ ನೀ ಬಯಲಾಗದ ಹೊರತು ||ಮಕ್ತಾ||
 

***

 
*ಇದು ಒಂದು ರದೀಫ್ ಸಹಿತ ‘ಮುಸಲ್ ಸಿಲ್ ಗಜಲ್’ ಆಗಿದೆ. ಇದರಲ್ಲಿ,
ರದೀಫ್: ‘ಹೊರತು’
ಕಾಫಿಯಾ: ಬದಲಾಗ’ದ’,ತೆರೆಯ’ದ’,ಕಾಣ’ದ’,ತೋರೆಯ’ದ’,
ಸೇರ’ದ’, ಕಳಚ’ದ’, ಮಾಡ’ದ’, ಬಯಲಾಗ’ದ ‘.
ರವಿ: ‘ದ’
ಶಾಯರ್ ನಾಮ್: ‘ಹಾಲ’
ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ ಎನ್ನುತ್ತಾರೆ.
ಮಕ್ತಾ: ಗಜಲಿನ ಕೊನೆಯ ದ್ವಿಪದಿಗೆ ಮಕ್ತಾ ಎನ್ನುತ್ತಾರೆ
 
 

‍ಲೇಖಕರು G

3 July, 2014

1 Comment

  1. mmshaik

    nice gazal..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading