ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೈಟುಗಂಬಕ್ಕೂ ರಸ್ತೆಗೂ ವಾಗ್ವಾದವಾಗಿ..

ಕವಿತೆಯಾಗುವುದೆಂದರೇನು?!

download (1)

– ಜಾನ್ ಸುಂಟಿಕೊಪ್ಪ

ಕಾಲನೆತ್ತಿ ಉಚ್ಚೆ ಹೊಯ್ಯಲು ಬಂದ
ಬೀದಿ ನಾಯಿಗೆ
ಲೈಟು ಕಂಬವೊಂದು ಕೇಳಿತು,

ಕತ್ತಲೊಳಗಿನ ಬೆಳಕನ್ನು
ಬೆಳಕಿನೊಳಗಿನ ಕತ್ತಲನ್ನೂ ಕಂಡು
ಊಳಿಡುವುದೇ ಕವಿತೆಯೆಂದಿತು ನಾಯಿ
ಲೈಟುಗಂಬಕ್ಕೂ ನಿಜವೆನ್ನಿಸಿತೇನೋ-
ಅಷ್ಟಕ್ಕೇ ಕರೆಂಟು ಹೋಗಿ
ಕತ್ತಲಿಗೂ ಬೆಳಕಿಗೂ ಕಾದಾಟವಾಗಿ
ಬೀದಿಯುದ್ದಕ್ಕೂ ಊಳಿಡುವಿಕೆ ಕವಿತೆಯಾಯಿತು;

ಕವಿತೆಯಾಗುವುದೆಂದರೇನು?!

ಪರಪರ ಕೆರೆದುಕೊಳ್ಳುತ್ತಾ
ಕಾಲನೆಳೆದು ನಡೆಯುತ್ತಿದ್ದ ಹುಚ್ಚನಿಗೆ
ರಸ್ತೆಯೊಂದು ಕೇಳಿತು,,.

ಮಾತಿನೊಳಗಿನ ಅರ್ಥವನ್ನು
ಅರ್ಥದೊಳಗಿನ ಮಾತನ್ನೂ ಕಂಡು
ಗಲಗಲ ನಕ್ಕು ಅಳುವುದೇ ಕವಿತೆಯೆಂದ;
ರಸ್ತೆಗೂ ನಿಜವೆನ್ನಿಸಿತೇನೋ-
ಅಷ್ಟಕ್ಕೇ ‘ಅದು-ಇದು’ತಿನ್ನುವವರ ನಡುವೆ ಗಲಬೆಯಾಗಿ
ಮಾತಿಗೂ ಅರ್ಥಕ್ಕೂ ಕಾದಾಟವಾಗಿ
ರಸ್ತೆಯುದ್ದಕ್ಕೂ ನಗುಅಳು ಕವಿತೆಯಾಯಿತು…

ಇದೀಗ…
ಲೈಟುಗಂಬಕ್ಕೂ ರಸ್ತೆಗೂ
ವಾಗ್ವಾದವಾಗಿ
ಕವಿತೆಯ ಕೊಲೆಯಾಗಿದೆ…

‍ಲೇಖಕರು Admin

20 January, 2016

7 Comments

  1. Bidaloti Ranganath

    ಸೃಜನಶೀಲ ಕವಿತೆ

  2. ರಾಘವೇಂದ್ರ ಜೋಶಿ

    ಲೈಟುಗಂಬಕ್ಕೂ ರಸ್ತೆಗೂ ವಾಗ್ವಾದ ಅಂತ ಕಲ್ಪಿಸುವದೇ ಎಷ್ಟು ಸುಂದರ ಕಲ್ಪನೆ!
    ಎರಡೆರಡು ಸಲ ಓದುವಷ್ಟು ಸುಂದರವಾಗಿದೆ.
    ಅಭಿನಂದನೆಗಳು.
    -Rj

  3. ಶಮ, ನಂದಿಬೆಟ್ಟ

    ಲೈಟುಗಂಬಕ್ಕೂ ರಸ್ತೆಗೂ
    ವಾಗ್ವಾದವಾಗಿ
    ಕವಿತೆಯ ಕೊಲೆಯಾಗಿದೆ…

    ಎಲ್ಲ ಕಡೆಯೂ ಹೀಗೇ, ವಾಗ್ವಾದದಿಂದಲೇ ಕೊಲೆಯಾಗುವುದು. ಅದನ್ನು ಸಂವಾದವಾಗಿಸುವ ಜಾಣತನ ಬರೋವರೆಗೂ ಕೊಲೆಗಳಿಗೆ ಕೊನೆಯಿಲ್ಲ

  4. smitha

    Olleya kavithe jhon sir.

  5. ಜಾನ್ ಸುಂಟಿಕೊಪ್ಪ

    ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ವಂದನೆಗಳು

  6. gurusullia

    Nice. ಒಳ್ಳೆ ಕವಿತೆ. ಕವಿತೆ ಕವಿತಯಾಗುಳಿಯಲಿ….ಬದುಕುಗಳೂ

  7. sangeetha raviraj

    ಅರ್ಥವತ್ತಾದ ಕವಿತೆ ಇಷ್ಟವಾಯಿ ತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading