ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಖಕಿಯರ ಸಂಘದ ಪ್ರಶಸ್ತಿಗಾಗಿ ಕೃತಿ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘದ ವಿವಿಧ ದತ್ತಿನಿಧಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿರುತ್ತದೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ತಿಳಿಸಿದ್ದಾರೆ.

ಕೃತಿ ಕುರಿತು ನೀಡಬೇಕಾದ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡಬೇಕಾಗಿರುವ ವರ್ಷಗಳು
(ಜನವರಿಯಿಂದ ಡಿಸೆಂಬರ್ ವರೆಗೆ ಆಯಾ ವರ್ಷದಲ್ಲಿ ಪ್ರಕಟಗೊಂಡ ಕೃತಿಗಳು)

  1. ಕಾಕೋಳು ಸರೋಜಮ್ಮ (ಕಾದಂಬರಿ)-
    ವರ್ಷ- 2021, 2022
  2. ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ,)
    ವರ್ಷ-2021, 2022,
  3. ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ)
    ವರ್ಷ- 2021, 2022
  4. ಜಿ.ವಿ. ನಿರ್ಮಲ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ)
    ವರ್ಷ- 2021, 2022
  5. ತ್ರಿವೇಣಿ ಸಾಹಿತ್ಯ ಪುರಸ್ಕಾರ
    ( ಪ್ರಾಯೋಜಕರು – ಸುಧಾಮೂರ್ತಿ ಸಣ್ಣಕಥೆ/ ಕಾದಂಬರಿ)
    ವರ್ಷ- 2021, 2022
  6. ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ)
    ವರ್ಷ- 2021, 2022
  7. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ)
    ವರ್ಷ- 2021, 2022
  8. ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ.)
    ವರ್ಷ- 2021, 2022
  9. ಇಂದಿರಾ ವಾಣಿರಾವ್
    (ನಾಟಕ)
    ವರ್ಷ-2021, 2022
  10. ಜಯಮ್ಮ ಕರಿಯಣ್ಣ (ಸಂಶೋಧನೆ)
    ವರ್ಷ- 2021, 2022
  11. ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ)
    ವರ್ಷ- 2021, 2022
  12. ಉಷಾ. ಪಿ.ರೈ ( ಆತ್ಮಕಥೆ / ಸ್ಮೃತಿ ಚಿತ್ರ ಲೇಖನಗಳು)
    ವರ್ಷ- 2022
  13. ನಿರುಪಮಾ (ಕತೆಗಳು)

ಮುದ್ರಣ ಮಾಧ್ಯಮದಲ್ಲಿ ಮುದ್ರಣವಾದ ಕತೆ (2021, 2022)

ಡಿಜಿಟಲ್ ಮಾಧ್ಯಮದಲ್ಲಿ ಮುದ್ರಿತವಾದ ಕತೆ (2021, 2022)

  1. ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ
    (ಕಥಾ ಸಂಕಲನ/ಅನುವಾದ/ ಕಾದಂಬರಿ)

2020ನೇ ಸಾಲಿನ ಸ್ವತಂತ್ರ ಕಥಾ ಸಂಕಲನ

2021ನೇ ಸಾಲಿಗೆ ಅನುವಾದ ಸಾಹಿತ್ಯ (ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಕೃತಿ)

2022ನೇ ಸಾಲಿಗೆ ಸ್ವತಂತ್ರ ಕನ್ನಡ ಕಾದಂಬರಿ

ನಿಯಮಗಳು:

  • ದತ್ತಿಬಹುಮಾನಕ್ಕಾಗಿ ಲೇಖಕಿಯರು, ಸಾಹಿತ್ಯಾಸಕ್ತರು ಮೇಲೆ ಸೂಚಿಸಿರುವ ಯಾವುದೇ ಪ್ರಕಾರಗಳಿಗೆ ಕೃತಿಗಳನ್ನು ಕಳುಹಿಸಬಹುದು. ಬಹುಮಾನಕ್ಕಾಗಿ ಕಳುಹಿಸುವ ಕೃತಿಗಳೊಂದಿಗೆ ಈ ಕೆಳಕಂಡ ವಿವರಗಳನ್ನುಳ್ಳ ಪತ್ರವನ್ನು ಕಳುಹಿಸಬೇಕು.
  • ಲೇಖಕಿಯ ಹೆಸರು, ಅಂಚೆವಿಳಾಸ, ಫೋನ ನಂ. ಇಮೇಲ್ ವಿಳಾಸ, ಕೃತಿ ಶೀರ್ಷಿಕೆ, ಪ್ರಕಟಣೆ ವರ್ಷ, ದತ್ತಿನಿಧಿ ಬಹುಮಾನದ ಹೆಸರು.
  • ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು.
  • ಲೇಖಕಿಯರು ತಮ್ಮ 3 ಕೃತಿಗಳನ್ನು ಕಳುಹಿಸಬೇಕು.
  • ಈಗಾಗಲೇ ಎರಡು ಪುಸ್ತಕ ಬಹುಮಾನ ಪಡೆದ ಲೇಖಕರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
  • ಸಂಪಾದಿತ ಕೃತಿಗಳನ್ನು ಹಾಗೂ ಪಿ.ಎಚ್.ಡಿ. ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
    ಬಹುಮಾನಕ್ಕೆ ಲೇಖಕಿಯರ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. ಮತ್ತು ಕೃತಿಯ ಪ್ರಥಮ ಆವೃತ್ತಿಯನ್ನು ಮಾತ್ರ ಪರಿಗಣಿಸಲಾಗುವುದು.
  • ಪ್ರತಿ ಪುಸ್ತಕ ಬಹುಮಾನ ಆಯ್ಕೆ ಸಮಿತಿಯಲ್ಲಿ ಮೂವರು ಖ್ಯಾತ ಸಾಹಿತಿಗಳು ಇರುತ್ತಾರೆ. ಅವರು ನೀಡಿದ ತೀರ್ಪಿನ ಪ್ರಕಾರ ಕೃತಿಯನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದು.
  • ದಯವಿಟ್ಟು ಕೃತಿಗಳನ್ನು ದಿನಾಂಕ. 06-07-2023ರ ಒಳಗೆ ಮೊದಲು ತಲುಪುವಂತೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸುವುದಿಲ್ಲ.
  • ಕರ್ನಾಟಕ ಲೇಖಕಿಯರ ಸಂಘ ದತ್ತಿನಿಧಿ ಪುಸ್ತಕ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನ ಪಡೆದ ಕೃತಿಗಳ ಲೇಖಕಿಯರನ್ನು ಗೌರವಿಸಿ ಬಹುಮಾನ ನೀಡಲಾಗುವುದು.
  • ಕೃತಿಗಳು ತಲುಪಬೇಕಾದ ವಿಳಾಸ: ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು, 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ ಬೆಂಗಳೂರು -560018

‍ಲೇಖಕರು avadhi

29 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading