ಕರ್ನಾಟಕ ಲೇಖಕಿಯರ ಸಂಘವು ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಿದೆ. ಕನ್ನಡದ ಪ್ರಸಿದ್ಧ ಲೇಖಕಿ, ಅನುವಾದಕಿ ಎಚ್.ಎಸ್. ಪಾರ್ವತಿಯವರು ಕಲೇಸಂ ನ ಸ್ಥಾಪಕ ಕಾರ್ಯದರ್ಶಿ. ನಂತರದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕಲೇಸಂನಲ್ಲಿ ದತ್ತಿಯನ್ನು ಇಟ್ಟಿದ್ದಾರೆ. ದತ್ತಿಯು ಹತ್ತು ಸಾವಿರ ರೂ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಕಲೇಸಂ ಅಧ್ಯಕ್ಷರಾದ ಪ್ರೊ. ಆರ್. ಸುನಂದಮ್ಮ ತಿಳಿಸಿದ್ದಾರೆ.
ತೀರ್ಪುಗಾರರಾಗಿ ಡಾ. ಆರ್. ಸುನಂದಮ್ಮ, ಡಾ. ಬೈರಮಂಗಲ ರಾಮೇಗೌಡ, ಪ್ರೊ. ಎಂ.ಎಸ್. ಆಶಾದೇವಿ, ಡಾ. ಎಂ.ಎಸ್. ವಿದ್ಯಾ ಹಾಗೂ
ಸುಮಾ ಸತೀಶ್ ಅವರಿದ್ದರು.
2024 ನೆಯ ಸಾಲಿಗೆ – ಡಾ.ಬಿ.ಎನ್. ಸುಮಿತ್ರಾ ಬಾಯಿ
2025 ನೆಯ ಸಾಲಿಗೆ – ಡಾ. ವಿಜಯಾ( ಇಳಾ ವಿಜಯ) ಹಾಗೂ
2026 ನೆಯ ಸಾಲಿಗೆ ಡಾ. ಅನಸೂಯಾ ಕಾಂಬ್ಳೆ
ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮವು ನವೆಂಬರ್ 27 ರಂದು ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






0 Comments