ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲವ್ ಯೂ ಜಿಂದಗೀ..!

 

 

 

ರಶ್ಮಿ ತೆಂಡೂಲ್ಕರ್ 

 

 

 

ಎಲ್ಲವನ್ನೂ ಬೇಗನೆ ಮುಗಿಸುವ ಧಾವಂತ. ಕೀಲಿ ಮಣೆಯಲ್ಲಿ ಬೆರಳುಗಳು ಓಡುತ್ತಾ Enter Key ಮೇಲೆ ಟಕ್ ಅಂತ ಕುಟ್ಟಿ ಮುಂದಿನ ಪ್ಯಾರಾಗೆ ಜಿಗಿಯುವ ಹೊತ್ತಿನಲ್ಲಿ ಸಣ್ಣದೊಂದು ವಿರಾಮ. ಪ್ರಕಟವಾಗಲು ಹವಣಿಸುವ ಸುದ್ದಿಯೊಂದಕ್ಕೆ ಪ್ರಶ್ನೆ ಚಿಹ್ನೆ, ಆಶ್ಚರ್ಯ ಚಿಹ್ನೆ, ಬೇಕೆಂದ ಕಡೆ ಪೂರ್ಣ ವಿರಾಮ ಚುಕ್ಕಿಯನ್ನಿಟ್ಟು ಫೋಟೋ ಜೋಡಿಸಿ ಪಬ್ಲಿಶ್ ಬಟನ್ ಒತ್ತಿದಾಗ ನಿರಾಳ.

ಸುದ್ದಿ ಮನೆಯಲ್ಲಿ ಕೂತು ಸುದ್ದಿಯಿಂದ ಸುದ್ದಿಗೆ ಜಿಗಿಯುವ ಹೊತ್ತಿನಲ್ಲಿ ಮನಸ್ಸು ಸುದ್ದಿಯಿಂದಾಚೆಗೆ ಸದ್ದು ಮಾಡದೆ ಇಣುಕುವ ಗಳಿಗೆಗಳೂ ಇರುತ್ತದೆ. ಸೈಕಲ್ ಗ್ಯಾಪ್ ಅನ್ನಲ್ವಾ …ಹಾಗೆಯೇ ಸುದ್ದಿ ಮನೆಯ ಸುದ್ದಿ ಗದ್ದಲದ ನಡುವೆಯೇ ಪುಳಕಗೊಳ್ಳುವ ಪುಟ್ಟದೊಂದು ಖುಷಿ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡುತ್ತದೆ. ಎಂದೋ ನಡೆದ ಸಂತಸದ ಘಟನೆ, ವಾಟ್ಸಾಪ್ ಮೂಲಕ ಬಂದ ಹಾರ್ಟ್ ಇಮೋಜಿ ಇಲ್ಲವೇ ಅಕ್ಕರೆಯ ಆ ಮಾತು…ಆ ಕ್ಷಣದ ಖುಷಿಗೆ ಇವು ಕಾರಣವಾಗುತ್ತದೆ. ಇದೆಲ್ಲದರ ನಡುವೆ ಕುತೂಹಲದಿಂದ Flame ಎಂದು ಬರೆದು ಹೆಸರುಗಳಲ್ಲಿರುವ ಅಕ್ಷರಗಳನ್ನು ಹೊಡೆದು ಹಾಕುತ್ತಾ ಬಂದರೆ L ಎಂಬ ಅಕ್ಷರ ಉಳಿದಿತ್ತು.

ಇದೆಲ್ಲವೂ ಚಿಕ್ಕ ಮಕ್ಕಳ ಆಟ ಎಂದು ಗೊತ್ತಿದ್ದರೂ ಉಳಿದ ಆ ಒಂದು ಅಕ್ಷರ ಬದುಕಿಗೆ ಹೊಸ ಹುರುಪು ತುಂಬುವಂತೆ ಮಾಡಿತು. ಎಲ್ಲವನ್ನೂ ಹೇಳಿ ಬಿಡುವುದು ಈಗ ಸುಲಭವೇ. ಆದರೆ ಹೇಳದೇ ಉಳಿದಿರುವ ಮಾತು ಹೆಚ್ಚು ಮಧುರವಾಗಿರುತ್ತದೆ.
ಒಂದಷ್ಟು ಕ್ಷಣಗಳನ್ನು ಹೃದಯಕ್ಕೆ ಹತ್ತಿರವಾಗಿಸಿ ಬದುಕಿ ಬಿಡಬೇಕು.

ನಾಳೆಯ ಚಿಂತೆ ಬಿಟ್ಟು ಈ ಗಳಿಗೆಯನ್ನು ನನ್ನದಾಗಿಸಿಕೊಂಡರೆ ಬದುಕಿನ ಖುಷಿಯನ್ನು ಅನುಭವಿಸಬಹುದು. ಅಕ್ಷರಗಳನ್ನು ಪೋಣಿಸುತ್ತಿದ್ದಂತೆ ತುಟಿಯಲ್ಲಿ ಕಿರುನಗೆ <3 ದೂರದಲ್ಲಿರುವ ಪ್ರೀತಿಯ ಸೊಬಗು ಅಂದರೆ ಅದು ಈ ಕ್ಷಣದಲ್ಲಿ ಅನಿಸಿದ ಖುಷಿ ಉಂಟಲ್ಲಾ ಅದೇ ಇರಬೇಕು. Love you zindagi

‍ಲೇಖಕರು avadhi

29 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading