ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಡಾಯಿ ಬಸು ಹನಿಗಳು

ಬಸವರಾಜ ಸೂಳಿಭಾವಿ

1
ಮೈಸೂಸುವ ಸುಗಂಧ ಯಾವ ಬ್ರ್ಯಾಂಡಿನದೆಂದು ಅವರೆಲ್ಲ ಕೇಳಿದರು
ನಿನ್ನೆ ರಾತ್ರಿ ನಿನ್ನ ನಗುವ ಎವೆಗಳು ಕ್ಷಣ ಮೈಗೆ ತಾಗಿದ್ದು ನೆನಪಾಯಿತು
2
ಎಲ್ಲ ಅಪರಾಧವೂ ವ್ಯಕ್ತಿಯಿಂದಲೆ ಆಗಿದೆಯೆಂಬ ದನಿ ಕಿವಿಗೆ ಬಿತ್ತು
ಸಮಾಜದ ಗೋಡೆ ಮೇಲಿನ ಕನ್ನಡಿಯ ಯಾರೊ ಕದ್ದಂತೆ ಕಂಡಿತು

ಚಿತ್ರ: ಚರಿತಾ

3
ರಾತ್ರಿ ನಾಟಕ ನೋಡಿದೆ
ಬೆಳಕೇ ಪ್ರಧಾನ ಪಾತ್ರಧಾರಿಯಾಗಿತ್ತು
4
ಗಲ್ಲುಶಿಕ್ಷೆಯ ತೀರ್ಪು ಬಂದಾಗ ಆ ತಾಯಿಯನ್ನು ನೋಡಿದೆ
ಹಸಿವಿನಿಂದ ಅಳುವ ಕೂಸಿಗೆ ನಗುವ ಗೊಂಬೆ ತೋರಿಸಿ ರಮಿಸುತ್ತಿದ್ದಳು
5
ಕಡಲು ದಂಡೆ ಮೇಲಿನ ಹೆಜ್ಜೆಗಳ ಅಳುಕಿಸುತ್ತಿದೆ
ಒಡಲ ಮೇಲೆ ಹೊಸದು ಮೂಡಲೆಂದೇ…
6
ಮಲ್ಲಿಗೆ ಹಿಡಿದು ಅಂಗಳದ ತುಂಬ ಓಡಾಡಿದ್ದರು
ಆ ತುಟಿಯ ಉತ್ಕಟತೆ ಹಾಡಾಗಲು ಬಿದಿರೇ ಬೇಕಾಯಿತು
7
ಇಡೀ ರಾತ್ರಿ ಎಚ್ಚರಿದ್ದೆ
ಇರುಳ ಗಡಿಗೆ ಒಡೆವ ಸದ್ದು ಕೇಳಲೇ ಇಲ್ಲ
8
ನಿಸ್ವಾರ್ಥ ಪ್ರೇಮ ನನಗೆ ಹೇಗೆ ಹೊಂದೀತು ?
ನಿನ್ನ ಬಯಸುವ ಸ್ವಾರ್ಥ ನನ್ನಲಿ ನಿಗಿನಿಗಿಯಾಗಿಯೇ ಇದೆ
9
ಪ್ರೀತಿಯನ್ನು ಮಾತು ಮಾಡಲಿಲ್ಲ
ಎಲ್ಲ ವರ್ಣನೆಯನು ಮೀರಿ ನಿಂತಿತು
10
ದಟ್ಟ ಕತ್ತಲು
ಮಿಣುಕುಹುಳು ದಾರಿ ತಪ್ಪುವುದಿಲ್ಲ
11
ದೀಪ ಹಚ್ಚಿಕೊಂಡು ಅಲೆದವರಿಗೆ ಸಿಕ್ಕದ ಬುದ್ದ
ದೀಪವಾದವರಲ್ಲಿಗೇ ಬಂದು ಸುಮ್ಮನೆ ಲೀನನಾದ.
12
ಬರೆದ ಪತ್ರದಲಿ ಒಂದೇ ಸಾಲಿತ್ತು
ಈ ಕಲ್ಲು ನಿನ್ನ ಬೆರಳ ಸ್ಪರ್ಶದಿಂದ ಗಂಡಾಯಿತು
 

‍ಲೇಖಕರು avadhi

24 September, 2013

8 Comments

  1. Gopaal Wajapeyi

    ರಾತ್ರಿ ನಾಟಕ ನೋಡಿದೆ
    ಬೆಳಕೇ ಪ್ರಧಾನ ಪಾತ್ರಧಾರಿಯಾಗಿತ್ತು…!
    Basu, nimmee saalugaLinda naanu mookavismita.

  2. mmshaik

    nice..very..very nice sir.

  3. MANJUNATH.P

    adbhuta roopakagalu…

  4. smitha Amrithraj

    adbutha salgalu-smitha.

  5. ರಮೇಶ್ ಹಿರೇಜಂಬೂರು

    ದಟ್ಟ ಕತ್ತಲು
    ಮಿಣುಕುಹುಳು ದಾರಿ ತಪ್ಪುವುದಿಲ್ಲ
    ದೀಪ ಹಚ್ಚಿಕೊಂಡು ಅಲೆದವರಿಗೆ ಸಿಕ್ಕದ ಬುದ್ದ
    ದೀಪವಾದವರಲ್ಲಿಗೇ ಬಂದು ಸುಮ್ಮನೆ ಲೀನನಾದ.
    ಈ ಎರಡೂ ಹನಿಗಳು ಕೇವಲ ಹನಿಗಳಲ್ಲ ಮನವ ಕದಡಿ, ಕೆದಕಿ ನಿಜವಾದ ಬೆಳಕು ತೋರುವ ದೀಪಮಾಲೆ. ತುಂಬಾ ಇಷ್ಟವಾದವು ಬಸವಾರಾಜ್‌ ಸೂಳಿಬಾವಿ ಅವರೆ…
    -ರಮೇಶ್ ಹಿರೇಜಂಬೂರು

  6. ಬಸೂ

    ಪ್ರತಿಕ್ರಿಯಿಸಿದ, ಇಷ್ಟಪಟ್ಟ ಎಲ್ಲರಿಗೂ ಮತ್ತು ಪ್ರಕಟಿಸಿದ ಮೋಹನ ಅವರಿಗೂ ಒಂದನೆಗಳು

  7. ಮಹಾಂತೇಶ ನವಲಕಲ್

    ಬಸೂ
    ಎಲ್ಲಾ ಅಪರಾಧವೂ ವ್ಯಕ್ತಿಯಿಂದಲೇ ಆಗಿದೆ ಎಂಬ ದನಿ ಕಿವಿಗೆ ಬಿತ್ತು. ಸಮಾಜದ ಗೋಡೆಯ ಮೇಲಿನ ಕನ್ನಡಿಯ ಯಾರೋ ಕದ್ದಂತೆ ಕಂಡಿತು. ಮತ್ತು 2-ಮಲ್ಲಿಗೆ ಹಿಡಿದು ಅಂಗಳದ ತುಂಬಾ ಓಡಾಡಿದ್ದರು ಆ ತುಟಿಯ ುತ್ಕಟತೆ ಹಾಡಾಗಲು ಬಿದಿರೇ ಬೇಕಾಯಿತು.
    ಅದ್ಭುತ ಸಾಲುಗಳು ಬಸೂ

  8. K.S Parameshwar

    ಸಾಲುಗಳು…ಚಿಕ್ಕ ಹಾಗೂ ಚೊಕ್ಕ ಆದರೆ ಪರಿಣಾಮ ಅಪಾರ…ಚಾಪ್ಲಿನ್ ಸಿನಿಮಾಗಳಂತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading