ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು

ಲಂಗರು ಕಚ್ಚಿದ ದೋಣಿ

ಮರಳ ಮೇಲೆಲ್ಲ ಹಾಯ್ದು

ತೋಯಿಸಿ ಮೆತ್ತಗಾಗಿಸಿ

ಮತ್ತೆ ಮತ್ತೆ ಮರಳುವ

ಅಲೆ

ಬೆಚ್ಚನೆಯ

ಪಿಸು ಮಾತು ನಿನ್ನದು

ಒಮ್ಮೆ ಮತ್ತೊಮ್ಮೆ ಕರೆದು

ನೋಡು

ಎಷ್ಟಾದರೂ

ನೆಪಕ್ಕೆ ಲಂಗರು ಕಚ್ಚಿದ

ದೋಣಿಗೆ

ಹುಚ್ಚೆದ್ದು ಮತ್ತೆ

ಅಲೆ ಅಲೆಯ

ಜೊತೆ ಒಂದಾಗಿ

ಒದ್ದೆ ಮುದ್ದೆಯಾಗಿ

ಹಿಂತಿರುಗಲೊಂದು ನೆಪ

ಬೇಕು

ಹೊಯ್ದಾಡುವ ಅತಂತ್ರ ದೋಣಿ

ರಾಶಿ ರಾಶಿ ಹಸೀ ಮರಳು

ಹುಸಿಯಾದ್ದೊಂದು ಲಂಗರು

ಮತ್ತೊಮ್ಮೆ ಕರೆದು ನೋಡು

ಮತ್ತೆ

ಸಮುದ್ರವಾಗುತ್ತೇನೆ

‍ಲೇಖಕರು Avadhi

18 September, 2020

1 Comment

  1. T S SHRAVANA KUMARI

    ಚಂದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading