ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಣರಾಜ್ಯೋತ್ಸವ ವಿಶೇಷ: ರೋಹಿತ್ ವೇಮುಲ ಕವಿತೆ- ಮುಂದೊಂದು ದಿನ ನಿಮಗೆ ಅರ್ಥವಾಗಲಿದೆ

rohith vemula reading
ಮೂಲ: ರೋಹಿತ್ ವೆಮುಲ
samvartha
ಕನ್ನಡಕ್ಕೆ: ಸಂವರ್ತ ‘ಸಾಹಿಲ್’
ಒಂದು ದಿನ
ನಾನು ಯಾಕೆ ಆಕ್ರಮಣಕಾರಿ ಆಗಿದ್ದೆ ಎಂಬುದು
ವ್ಯವಸ್ಥೆಯ ಹಿತಾಸಕ್ತಿಗಳ ತಾಳಕ್ಕೆ
ನಾ ಯಾಕೆ ಕುಣಿಯಲಿಲ್ಲವೆಂದು.
ಒಂದು ದಿನ
ಮುಂದೊಂದು ದಿನ
ಅರ್ಥವಾಗಲಿದೆ ನಿಮಗೆ
ನಾ ಕ್ಷಮೆ ಯಾಚಿಸಿದ್ದು ಯಾಕೆಂದು
ಬೇಲಿಯ ಪಕ್ಕದಲ್ಲೇ
ಬಲೆ ಹಾಸಿದ್ದಾರೆ ಎಂದು.
ಒಂದು ದಿನ
ಮುಂದೊಂದು ದಿನ
ಕುರೂಪಗೊಂಡು
ನಾ ಸಿಗುವೆನು ನಿಮಗೆ
ಇತಿಹಾಸದ ಮಾಸಿದ ಪುಟದಲ್ಲಿ
ಅದ ನೋಡಿ ನೀವು
ನಾನು ವಿವೇಕಿ ಆಗಿರಬೇಕಿತ್ತು
ಎಂದು ಆಶಿಸುವಿರಿ
ಆ ರಾತ್ರಿ
ನನ್ನ ನೆನೆದು ಮುಗುಳ್ನಗುವಿರಿ
ಅಂದು, ಆ ದಿನದಂದು
ನಾ ಪುನರುಜ್ಜೀವಿಸುವೆ!
(ರೋಹಿತ್ ವೆಮುಲ ಅವರ ಸ್ನೇಹಿತ ಆಯೂಬ್ ರೆಹಮಾನ್ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ 22 ಜನವರಿ 2016 ರಂದು ಬರೆದ ಲೇಖನದಲ್ಲಿ ಸೆಪ್ಟೆಂಬರ್ 3 ರಂದು ರೋಹಿತ್ ಬರೆದ ಎಂದು ಹೇಳಲಾದ ಕವಿತೆ)

‍ಲೇಖಕರು Admin

26 January, 2016

2 Comments

  1. ಚಂದ್ರಪ್ರಭಾ ಬಿ.

    ವ್ಯವಸ್ಥೆಯ ಹಿತಾಸಕ್ತಿಗಳ ತಾಳಕ್ಕೆ ಕುಣಿಯಲೊಪ್ಪದ ರೋಹಿತ, ನಿನ್ನ ಚೈತನ್ಯಕ್ಕಿದೋ ನಮಿಸುವೆ…ನೀನು ಸಾಯುವ ನಿರ್ಧಾರ ಮಾಡಬರದಿತ್ತು.

    • MUNIRAJU

      YES

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading