ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೊಟ್ಟಿಯ ತು೦ಡಲ್ಲಿ ಹಸಿದವರ ಹೆಬ್ಬೆಟ್ಟೊತ್ತಲು ಜಾಗವಿರಲಿ..

ಒಂದು ಕವನ

– ಕಾಜೂರು ಸತೀಶ್

 
ಆ ಬಳ್ಳಿ ಅಲ್ಲೇ ಇರಲಿ
ಅದರ ಕುಣಿಕೆ ಕೊರಳ ಜೋಕಾಲಿ ಯಾಡದಿರಲಿ.
 
ಆ ಕತ್ತಿ ಹಾಗೇ ಇರಲಿ
ಅದರ ಹರಿತಕ್ಕೆ ಗಾಳಿ ಮಾತ್ರ ಕೊಯ್ದುಕೊಳ್ಳುತಲಿರಲಿ.
 
ಆ ಬೆ೦ಕಿ ಹಾಗೇ ಇರಲಿ
ಅದ ಕುಡಿಯಲು ನಾಲಗೆ ತೇವವಾಗಿರಲಿ
ಆಮೇಲಾದರೂ ಅದು ಸುಖವಾಗಿರಲಿ.
 
ಈ ಬೀದಿಗಳಲ್ಲಿ ಮಳೆಯಾಗದಿರಲಿ
ಕಪ್ಪೆಗಳು
ಚಕ್ರಗಳಿ೦ದ
ಬರ್ಬರ ಕೊಲೆಯಾಗದಿರಲಿ.
 
ಈ ಕಪ್ಪು ಹಾಗೇ ಇರಲಿ
ಕಣ್ಣು ಸಹಿಸದಿದ್ದರೆ ನಿಮಗಿಷ್ಟದ ಬಣ್ಣ ಸುರಿದುಬಿಡಿ
ಚರ್ಮ ಸುಲಿದರೂ ಸರಿ ‘ಹೋಳಿ’ ಎ೦ದುಕೊಳ್ಳುವೆ.
 
ಪಾದುಕೆಗಳು ,ಒಳಉಡುಪುಗಳು ಕಳುವಾಗದಿರಲಿ
ರೊಟ್ಟಿಯ ತು೦ಡಲ್ಲಿ ಹಸಿದವರ ಹೆಬ್ಬೆಟ್ಟೊತ್ತಲು ಜಾಗವಿರಲಿ.

‍ಲೇಖಕರು avadhi

9 May, 2013

4 Comments

  1. mmshaik

    nice..very very nice..!!!

  2. Kajooru sathish

    ಧನ್ಯವಾದಗಳು.

  3. MANJUNATH.P

    ಹಸಿವನ್ನು ಇಂಗಿಸುವ ಪರಿಕರದ ಅನೂಹ್ಯ ಧ್ಯಾನ…

  4. Kajooru sathish

    ಧನ್ಯವಾದಗಳು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading