– ಶ್ರೀನಿವಾಸ ಎಂ
1
ಮೈಸೂರು-ಮಂಗಳೂರು ರೈಲು,
ಒಂದು ಕಂಪಾರ್ಟ್‌ಮೆಂಟು-ಎರಡು ಕುಟುಂಬ,
ಬೆಳಕು ಸರಿದು, ಕತ್ತಲು ಹರಿದ ಸಮಯ,
ಉಪವಾಸ ಕುಳಿತು, ಮಂತ್ರಪಠಿಸುತ್ತಿರುವ ಮೂವರು ಮಹಿಳೆಯರು,
ಮಟನ್ ಬಿರಿಯಾರಿ ಚಪ್ಪರಿಸುತ್ತಿರುವ ಮುಸ್ಲಿಂ ಕುಟುಂಬ,
ಮಂತ್ರದ ಸುಸ್ವರ-ಬಿರಿಯಾನಿಯ ಘಮಘಮ!!!
(ಅವರವರ ಭಾವಕ್ಕೆ-ಅವರವರ ಭಕುತಿಗೆ)
2
ಮಂತ್ರದ ಮಹಿಮೆ!
ಬಿರಿಯಾನಿಗೊಳಗೆ ಹುದುಗಿದ್ದ ಕುರಿಗೆ
ಸ್ವರ್ಗ ಪ್ರಾಪ್ತಿಸಿತೋ, ಇಲ್ಲವೋ!
ಮಕ್ಕಳಂತೂ ಕೇಳಿ ನಲಿದರು, ನುಲಿದರು,
ಹಿಂದೆಂದೂ ಕೇಳದ ಸ್ವರ ಮಹಿಮೆ,
ಮಂತ್ರ ಕೇಳುತ್ತಲೆ ಬಿರಿಯಾನಿ ಸವಿದರು,
ಊಟ ಮಾಡಲೊಲ್ಲೆ ಎಂಬ ಹಠವಿಲ್ಲ,
ಅಮ್ಮ ಕೂಡಾ ದಿಲ್ ಖುಷ್!
3
ಬಿರಿಯಾನಿ ಚಮತ್ಕಾರ!
ಛಿ, ಥೂ ಅನ್ನೋ ಮಾತಿಲ್ಲ,
ಮಂತ್ರ ಪಠಿಸುತ್ತಿದ್ದವರ ದೃಷ್ಟಿ ಮಕ್ಕಳೆಡೆಗೆ,
ಆಗಾಗ, ಕನ್ನಡಕದ ಎಡೆಯಿಂದ ನಗು ಮಿಂಚು,
ಓದುತ್ತಲೇ ಪುಟ್ಟ ಕಂದಮ್ಮನ ಕಣ್ತುಂಬಿಕೊಂಡ
ಸಹೃದಯಿ..ಮಂಗಳೂರಿನೊರೆಗೂ ಪ್ರೀತಿಯ ಜುಗಲ್ಬಂದಿ!
4
ಕನಸಲ್ಲವಿದು, ನಿಜ
ರೈಲಿನೊಗೊಂದು ಎದ್ದ ನೀಗರ್ುಳ್ಳೆ,
ಹಳಿ ಕಂಡಾಗಲೆಲ್ಲ ಮೂಡುವ ಈ ಚಿತ್ರ,
ಬೆಳಕು ಕಂಡಾಗಲೆಲ್ಲ ಮಾಯವಾಗುತ್ತದೆ!






wah..superb kavithe..avadhige sharanu…-vijaykanth patil.
nice..