ರೇಶ್ಮಾ ಗುಳೇದಗುಡ್ಡಾಕರ್ ನೆನಪಲ್ಲಿ ತೇಜಸ್ವಿ

ರೇಶ್ಮಾ ಗುಳೇದಗುಡ್ಡಾಕರ್

ತೇಜಸ್ವಿಯವರ ಬರಹಗಳು ಪಾಠ್ಯವಾಗಿ ಓದಿದಾಗಿನಿಂದಅವರ ಪುಸ್ತಕಗಳನ್ನು ಹುಡುಕಿ ಓದತೊಡಗಿದೆ ಕಾಲೇಜು ದಿನಗಳಲ್ಲಿ ಪಠ್ಯಕ್ಕಿಂತ ಅವರ ಪುಸ್ತಕ ಓದಿದ್ದೆ ಹೆಚ್ಚು. ಅವರ ಪುಸ್ತಗಳು ಪರಿಸರದ‌ ಕುತೂಹಲ, ವಿಜ್ಞಾನದ ವಿಚಾರಧಾರೆ,ಮತ್ತು ಜಿಮ್ ಕಾರ್ಬೆಟ್ ರ ಸಾಲು ಸಾಲು ಕಾಡಿನ‌ಕತೆಗಳು ಕಾಂಕ್ರೀಟ್ ನಾಡಿನಲ್ಲಿಯು ಒಂದು ರೋಚಕ ಅನುಭವ ಕೊಡುವ ಹೊತ್ತಿಗೆಗಳು ಎಂಗ್ಟನ ಪುಂಗಿಯ ಮಹಿಮೆಯನ್ನು, ಕೊಬ್ರಾದ ಕತೆಯನ್ನು‌ ಓದಗರಿಗೆ ಓದಿಸುವ  ಪರಿಯೇ ಅನನ್ಯ. ಅವರ ‘ಅಣ್ಣನ ನೆನಪು’ ಹೊತ್ತಿಗೆಯಲ್ಲಿ, ಬೀದಿ ನಾಯಿಯನ್ನು ಜಾತಿ ನಾಯಿ ಮಾಡುವ ಪ್ರಸಂಗವನ್ನು ಯಾರೂ ಮರೆಯಲು ಸಾದ್ಯವಿಲ್ಲ, ಅಲ್ಲಿ ಅವರು ನೀಡಿರುವ ಕುವೆಂಪು ಅವರ ಕುರಿತ ವಿವರಗಳು ಬಹು ವಿಶೇಷ ವಾಗಿವೆ.

ಅಪ್ಪನ ಪ್ರೀತಿ ಉಳಿಸಿಕೊಂಡು ಅಪ್ಪನ ಪ್ರಭಾವ ವಲಯದಿಂದ ದೂರ ಉಳಿದು ಸ್ವಾಭಿಮಾನದಿ ಬದುಕಿ ಬಾಳಿದ ಅವರ ನಡೆ ‘ಹೆಜ್ಜೆ ಮೂಡದ’ ಹಾದಿಯು ಹೌದು. ಪದವಿ ಪಡೆದರು ಕೆಲಸಕ್ಕಾಗಿ ಹಂಬಲಿಸದೆ ಕೃಷಿಯಲ್ಲಿಸಾಗಿ ಜೊತೆಗೆ ಅಪರೂಪದ ಸಾಹಿತ್ಯ ಕೃಷಿಯನ್ನು ಕನ್ನಡದ ಓದುಗರಿಗೆ ನೀಡಿದ ಗರಿಮೆ ಅವರದು ಜೊತೆಗೆ ಯಾವ ಪ್ರಶಸ್ತಿ ಗಳಿಗೂ ಬಯಸದೆ ‘ದಿವ್ಯ ನಿರ್ಲಕ್ಷ್ಯ’ ತೋರಿದ ಬಿರುದು ಬಾವಲಿಗಳನ್ನು ಹತ್ತಿರ ಸುಳಿಯಲು ಬಿಡದ, ಹಾರ ತುರಾಯಿಗಳ, ಜರಿಪೇಟಗಳ ಕಣ್ಣೆತ್ತಿಯು ನೋಡದ  ತೇಜಸ್ವಿಯವರಿಗೆ ತೇಜಸ್ವಿಯವರೇ ಸಾಟಿ.

ಅವರ ‘ಅದ್ಬುತ ಜಗತ್ತು’ ಸರಣಿಯ ಪ್ಲೇಯಿಂಗ್ ಸಾಸರ್ ಭಾಗ ೧ ಮತ್ತು ೨ ಕೃತಿಗಳು ಅತ್ಯಂತ ಜನಪ್ರಿಯ ಹಾಗೊ ಏಲಿಯನ್ ಗಳ ಬಗ್ಗೆ ಮಾಹಿತಿ ನೀಡುತ್ತವೆ. ಅವುಗಳನ್ನು ಓದಿ ಎಲ್ಲಿ ಹೋದರೆ ಅಲ್ಲಿಯೇ ತಲೆಯತ್ತಿ ಆಕಾಶವನ್ನೆ ನೋಡುತ್ತ ಸಾಗುತ್ತಿದ್ದ ದಿನಗಳು ಇದ್ದವು! ಏಲಿಯನ್ ಗಳು ಕಾಣಬಹುದು ಎಂಬ ಆಸೆಯಿಂದ. ಇಂದು ಹಲವು ಚಲಚಿತ್ರಗಳು ಈ ವಿದ್ಯಮಾನ ಕುರಿತಾಗಿ ಲಭ್ಯವಿವೆ, ಆದರೆ ಅಂದು ಅವರ ಪುಸ್ತಕಗಳು ಮೂಡಿಸಿದ ಕುತೂಹಲ ಮರೆಯಲು ಅಗುವದಿಲ್ಲ ಯಾವ ಓದುಗರಿಗೂ…

ಇತ್ತಿಚೆಗೆ ಅವರ ‘ಅಲೆಮಾರಿಯ ಅಂಡಮಾನ್ ಮತ್ತು ನೈಲ್ ನದಿ’ ಹೊತ್ತಿಗೆ ಓದಿರುವೆ ಅಲ್ಲಿನ ಬರಹವು ಓದುಗರಿಗೆ ಒಂದು ವಿಶಿಷ್ಟ ಅನಿಭವ ನೀಡುತ್ತದೆ ಎಂದಿನಂತೆ ತೇಜಸ್ವಿಅವರ ಶೈಲಿಯಲ್ಲಿ. ರಾಮದಾಸ್ ಅವರ ವಿಭಿನ್ನ ಜಗಳ ಚೌಕಟ್ಟು. ಯಾವುದೇ ತಕರಾರನ್ನು ತಮ್ಮ ದೇ ಲೆಕ್ಕಚಾರಕ್ಕೆ ತರುವ ಜಾಣ್ಮೆ ಓದಿಯೇ ತಿಳಿಯಬೇಕು.

ಅವರ ‘ಜುಗಾರಿ ಕ್ರಾಸ್‌’ ‌ಕೃತಿಯ ಸುರೇಶ ಮತ್ತು ಗೌರಿಯರು ನಿಲುವು ಹಾಗೂ ಏಲಕ್ಕಿ ಬೆಳೆಗಾರರ ತಲ್ಲಣಗಳು ರೈತರ ಬದುಕಿನ ತಲ್ಲಣಗಳನ್ನು, ಅಧಿಕಾರಿ ಶಾಹಿಯ ದುರಾಡಳಿತದ ವ್ಯಾಘ್ರ ಮುಖವನ್ನು ಅನಾವರಣಗೊಳಿಸುತ್ತದೆ. ಈ ಪುಟ್ಟ ಕೃತಿ ಇಂದಿಗೂ ಪ್ರಸ್ತುತ ವಾಗಿರುವ ಸಮಸ್ಯೆಗಳನ್ನು ಓದುಗರಿಗೆ ತಿಳಿಸುತ್ತದೆ. ಆದರೆ ಆ ಸಮಸ್ಯೆಗಳು ಇನ್ನೊ‌ ಬಗೆಹರಿಯುವ ಹೊಸ ಆವಿಷ್ಕಾರ ಕಾಣುವ ಯಾವ  ಸೂಚನೆಯು ಇಲ್ಲ …

‘ಕರ್ವಾಲೋ’ದ ಹಾರುವ ಓತಿ ಓದುಗುರನ್ನು ಒಂದು ವಿಸ್ಮಯ ಜಗತ್ತಿಗೆ ಕೊಂಡ್ಯೊಯುತ್ತದೆ, ಹುಳಿಜೇನು ನಿಂದ ಪೋಲೀಸರ ಅಥಿತಿಯಾದ  ಮಂದಣ್ಣ, ವಿಜ್ಞಾನಿ ಕರ್ವಾಲೋ, ಪಶ್ಚಿಮಕ್ಕೆ ಘಟ್ಟಗಳ ಅಪರೂಪದ ವನ್ಯ ಸಂಕುಲ ಎಲ್ಲವೂ ಓದುಗರನ್ನು ಸೆಳೆಯುತ್ತವೆ.

ಅವರ ಬರಹಗಳು ಸಮಾಜದ ಒಳಗಾಗುವ ಸಾಧ್ಯತೆಗಳು ಮತ್ತು ಭಾದ್ಯತೆಗಳನ್ನು ತರೆದಿಡುತ್ತವೆ ಸಮಕಾಲೀನ ಒಳನೋಟವನ್ನು ಕಾಣಲು ಸಹಕಾರಿಯಾಗಿವೆ. ಜನಸಾಮಾನ್ಯರ ಬದುಕು ಅವರನ್ನೇ ತಮ್ಮ ಬರಹ ಅಥವಾ ಕತೆಗಳಿಗೆ ನಾಯಕರನ್ನಾಗಿ ಮಾಡಿ ಸಂಚಲನ ಮೂಡಿಸಿದ ಅವರ ಬರಹಗಳು, ಪರಿಸರದ ಕಾಳಜಿಯ ಪುಸ್ತಕಗಳು ವಿಜ್ಞಾನವನ್ನು ಸರಳವಾಗಿ ಓದಲು ಓದುಗರಿಗೆ ಪ್ರೇರಣೆ ನೀಡಿದ ಬರಹಗಳು ನಮ್ಮ ಕನ್ನಡ ದ ಆಸ್ತಿ ಎಂದರು ತಪ್ಪಲ್ಲ.

ತೇಜಸ್ವಿ ಎಂದರೆ ಬಾಡುಟ ಮಾತ್ರ ಅಲ್ಲ ಪೋಟೊಗ್ರಫಿಯೋಗೆ ಸೀಮಿತವಲ್ಲ ನಮ್ಮೊಳಗಿನ ಸ್ಥಿತ ಪ್ರಜ್ಞೆ. ನಮ್ಮೊಳಗಿನ ಗಟ್ಟಿ ದ್ವನಿಯು ಹೌದು ಅವರಂತೆ ಎದೆಗಾರಿಕೆಯಿಂದ ಸಚಿವರನ್ನು ಪ್ರಶ್ನೆಸುವ ದೈರ್ಯ ಯಾರಿಗೊ ಇಲ್ಲ.ಬರಹಗಳಿಂದ ಅವರು ನಮಗೆ ನೀಡಿದ ಜಾಗೃತಿ ಅಪಾರ ಅದು ಪರಿಸರ ಇರಲಿ ವಾಸ್ತವ ಜಗತ್ತಿನ ವ್ಯಾಪಾರ ಇರಲಿ, ಇಂದು ಅವರು ನಮ್ಮೊಂದಿಗೆ ಇಲ್ಲ, ಅಂದು ಅವರು ಕಂಡ ಕನಸು ಇಂದು ಜಗತ್ತನ್ನೇ ಅಂಗೈಯಲ್ಲಿ ಹೀಡಿಯುವಂತೆ ಮಾಡಿದೆ, ಅಂತರ್ಜಾಲದಲ್ಲಿ ಕನ್ನಡವು ನಲಿಯುತ್ತದೆ. ಅವರ ಕೃತಿಗಳು ಅಂತರ್ಜಾಲದಲ್ಲಿ ಪುಟಗಳನ್ನು ತೆರೆಯುತ್ತವೆ ಆದರೆ ಇವೆಲ್ಲವ ನೋಡಲು ಅವರೇ ನಮ್ಮೊಂದಿಗಿಲ್ಲ. ಇದು ನೋವಿನ ಸಂಗತಿ, ಆದರೆ ಅವರು ಕೃತಿಗಳ ಮೂಲಕ ಸಾದಾ ನಮ್ಮೊಂದಿಗೆ ಇರುತ್ತಾರೆ.                 

sir. we miss you …….

‍ಲೇಖಕರು Avadhi

April 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: