ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಖಾ ರಂಗನಾಥ ಕವಿತೆ- ಕವಿತೆಯೆಂದರೆ…

ರೇಖಾ ರಂಗನಾಥ

ಕವಿತೆಯೆಂದರೆ..
ಮಳೆ ಹಕ್ಕಿ ಹಾಡು
ಒಂಟಿ ಹಕ್ಕಿ ಗೂಡು
ಬೊಗಸೆ ತುಂಬಿದ ಮಳೆ ಹನಿ
ಉಕ್ಕಿ ಬರುವ ಕಣ್ಣಹನಿ.

ಕವಿತೆಯಾಗುದೆಂದರೆ..
ಮಳೆ ಬಿಲ್ಲಿಗೆ ಬಣ್ಣ ಮೂಡುವಂತೆ

ಕವಿತೆಯೆಂದರೆ..ಹೂವು
ಹೂವೆಂದರೆ..
ಸುಖಿಸಿ
ಹೊರಳುವ ತೃಷೆಯಲ್ಲ
ಜನ್ಮ ಜನ್ಮಾಂತರಕೂ
ಎದೆಗಪ್ಪುವ ಆತ್ಮದ ಘಮಲು

ಹೂವಾಗುವುದೆಂದರೆ..
ಗಂಧ ಗಾಳಿ ಬೆರೆವ ಗಳಿಗೆಯಂತೆ

ಕವಿತೆಯೆಂದರೆ..ಬೆಳಕು
ಬೆಳಕೆಂದರೆ..
ಕತ್ತಲುಂಡ
ಕಾಡ ಹಾದಿಯಲಿ
ಅನಂತದ ದಾರಿ ತೆರೆಯುವ ದೀವಿಗೆ

ಬೆಳಕಾಗುವುದೆಂದರೆ
ಇಳೆಗೆ ಬೆಳದಿಂಗಳು ಸುರಿದ ಸದ್ದಂತೆ.

ಕವಿತೆಯೆಂದರೆ..
ನನ್ನ ಕವಿತೆಯೆಂದರೆ..
ಒಳ ಕೋಣೆಯಲಿ
ಹಚ್ಚಿಟ್ಟ ಹಣತೆ

‍ಲೇಖಕರು avadhi

21 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading